Sunday, May 18, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Sunday, May 18, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರಶಿಕ್ಷಣ

ಕೃಷಿ ಕ್ಷೇತ್ರ ಸುಧಾರಣೆ; ಉದ್ಯಮಿಗಳ ಜತೆ ಕೃಷಿ ಸಚಿವರ ಸಭೆ

ಕೈಗಾರಿಕೋದ್ಯಮಿಗಳೊಂದಿಗೆ ಚಲುವರಾಯಸ್ವಾಮಿ ವಿಸೃತವಾದ ಚರ್ಚೆ

by cklbkrish October 30, 2023
written by cklbkrish October 30, 2023 0 comments 1 minutes read
ಬೆಂಗಳೂರು: ವಿವಿಧ ಬೆಳೆಗಳ ಹೊಸ ತಳಿಗಳ ತ್ವರಿತ ಬೀಜ ವಿತರಣೆ ವಿಷಯಗಳ ಕುರಿತು ಇಂದು ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ಹೈದರಾಬಾದಿನ ಅಂತರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ ಮಹತ್ವದ ಒಡಂಬಡಿಕೆಗೆ ಸಹಿ ಮಾಡಿವೆ. ಕೃಷಿ ಸಚಿವ ಚೆಲುವರಾಯಸ್ವಾಮಿಯವರ ಸಮ್ಮುಖದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಹೆಚ್.ಎಸ್.ದೇವರಾಜ ಮತ್ತು ಹೈದರಾಬಾದ್ ನ ಐಸಿಆರ್ ಐಎಸ್ಎಟಿ ಉಪ ಮಹಾ ನಿರ್ದೇಶಕರಾದ ಡಾ. ಅರವಿಂದ ಕುಮಾರ್ಅವರು ಈ ಒಡಂಬಡಿಕೆಗೆ ಸಹಿ ಹಾಕಿದರು. ಕರ್ನಾಟಕ ರಾಜ್ಯ ಬೀಜ ನಿಗಮವು ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ರೈತರಿಗೆ ಗುಣಮಟ್ಟದ ಬೀಜ ಪೂರೈಕೆ ಮಾಡುವಲ್ಲಿ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ವರ್ಷಕ್ಕೆ ಸರಾಸರಿ ಮೂರುವರೆ ಲಕ್ಷ ಕ್ವಿಂಟಲ್ ಬೀಜ ಸರಬರಾಜು ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಬೀಜ ಪೂರೈಕೆ ಸೌಲಭ್ಯಗಳನ್ನು ಹೊಂದಿದೆ. ಒಂದು ಅಂತರಾಷ್ಟ್ರೀಯ ಬೆಳೆ ತಳಿ ಸಂಶೋಧನಾ ಕೇಂದ್ರವಾಗಿದ್ದು ಹೊಸ ತಂತ್ರಜ್ಞಾನದ ಮೂಲಕ ಅರೆ ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪರಿಚಯಿಸುತ್ತಿದೆ. ಈಗಾಗಲೇ ಈ ಸಂಸ್ಥೆಯು ಅಭಿವೃದ್ಧಿಪಡಿಸಿದ ಶೇಂಗಾ, ತೊಗರಿ, ಜೋಳ, ಕಡಲೆ ಮತ್ತು ಸಜ್ಜೆ ತಳಿಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಲಿತದಲ್ಲಿವೆ. ಈ ಒಡಂಬಡಿಕೆಯಿಂದ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಹೊಸ ತಳಿಗಳು ಲಭ್ಯವಾಗಲಿದ್ದು ಸಂಸ್ಥೆಯ ಉತ್ಪನ್ನಗಳ ಪಟ್ಟಿ ಬಲಿಷ್ಠವಾಗುತ್ತದೆ. ಇದರಿಂದ ರೈತರಿಗೆ ತೊಗರಿ, ಕಡಲೆ, ಜೋಳ, ಸಜ್ಜೆ, ಮತ್ತು ಸಿರಿಧಾನ್ಯಗಳಲ್ಲಿ ಹೊಸ ಶಕ್ತಿ ವರ್ಧಕ ತಳಿಗಳನ್ನು ಪರಿಚಯಿಸಲು ಅನುಕೂಲವಾಗುತ್ತದೆ. ಈ ಹೊಸ ತಳಿಗಳನ್ನು ಕೆ.ಎಸ್.ಎಸ್.ಸಿ ಯ ತಳಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಧಾರವಾಡದಲ್ಲಿ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೌಲ್ಯವೀಕರಣ ಮಾಡಿ ವಿವಿಧ ಬೆಳೆಗಳಲ್ಲಿ ಹೊಸ ತಳಿ ಬಿಡುಗಡೆ ಮಾಡಲು ಸಹಾಯವಾಗುತ್ತದೆ. ಒಟ್ಟಾರೆ ಮೂರು ವರ್ಷಗಳ ಒಡಂಬಡಿಕೆಯ ಅವಧಿಯಲ್ಲಿ, ಬರ ಮತ್ತು ರೋಗ ನಿರೋಧಕ ತಳಿಗಳನ್ನು ರಾಜ್ಯದ ರೈತರಿಗೆ ತ್ವರಿತವಾಗಿ ತಲುಪಿಸಲು ಉಪಯೋಗವಾಗುತ್ತದೆ. ಹಾಗೂ ಈ ಬೆಳೆಗಳಲ್ಲಿ ರಾಜ್ಯದ ಸರಾಸರಿ ಉತ್ಪಾದಕತೆಯನ್ನು ಹೆಚ್ಚಿಸಲು ಅನುಕೂಲವಾಗುತ್ತದೆ.
Share 4FacebookTwitterPinterestEmail
48

ವ್ಯವಸಾಯ ಪದ್ಧತಿ ಸುಧಾರಣೆಗೆ ಒತ್ತು, ವಿಸ್ತೃತ ಚರ್ಚೆ

ಬೆಂಗಳೂರು:ರಾಜ್ಯದಲ್ಲಿ ಕೃಷಿ ಕ್ಷೇತ್ರದ ಸುಧಾರಣೆ ಕುರಿತಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ಎಫ್ಐಸಿಸಿಐ ಪದಾಧಿಕಾರಿಗಳು ಹಾಗೂ 13 ಮಂದಿ ಕೈಗಾರಿಕೋದ್ಯಮಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದರು.

ವಿಕಾಸಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಎಫ್ಐಸಿಸಿಐ ಪದಾಧಿಕಾರಿಗಳು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ” ನಮ್ಮ ರಾಜ್ಯ ನಮ್ಮ ಕೃಷಿ ” ಸಮ್ಮೇಳನ ಆಯೋಜನೆ,  ಕೃಷಿ ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆ, ಮೌಲ್ಯವರ್ಧನೆ, ಕೃಷಿ ಯಾಂತ್ರಿಕರಣಗಳ ಕುರಿತು ಸಚಿವರು ವಿಸೃತವಾದ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಯಾಂತ್ರಿಕರಣ ಯೋಜನೆಯನ್ನು ಒಳಪಡಿಸುವಾಗ ಕರ್ನಾಟಕದಲ್ಲಿಯೇ ಯಂತ್ರಗಳನ್ನು ತಯಾರಿಸುವ ಉದ್ದಿಮೆದಾರರಿಗೆ ಆದ್ಯತೆ ನೀಡುವುದು..

ಆಂಧ್ರದ ಮಾದರಿಯಂತೆ ರಾಜ್ಯದಲ್ಲಿ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಲು ಹಾಗೂ ಉತ್ಪಾದನೆ ಹೆಚ್ಚಿಸಲು ವಿದೇಶಗಳಿಂದ ಬೀಜಗಳನ್ನು ಆಮದು ಮಾಡಿಕೊಳ್ಳಲು ಪ್ರಸ್ತುತವಿರುವ ಮಾರ್ಗಸೂಚಿಗಳನ್ನು ಸುಲಭಗೊಳಿಸುವುದು.

ಉದ್ದಿಮೆದಾರರು ರಾಜ್ಯದಲ್ಲಿ ಉದ್ದಿಮೆ ಪ್ರಾರಂಭಿಸಲು ಶೇ 70 ರಷ್ಟು ಹಣ, ಭೂಮಿ ಖರೀದಿಸಲು ವೆಚ್ಚವಾಗುವುದರಿಂದ ವಿಶೇಷವಾಗಿ ರಾಜ್ಯ ಸರ್ಕಾರವು ಬೀಜ ಸಂಶೋಧನೆ, ಬೀಜ ಸಂಸ್ಕರಣೆ ಕೃಷಿ ಉಪಕರಣಗಳ ತಯಾರಿಕೆಗೆ ಆದ್ಯತೆಯ ಮೇಲೆ ಕಡಿಮೆ ದರದಲ್ಲಿ ಭೂಮಿ ಒದಗಿಸುವುದರ ಬಗ್ಗೆ ಚರ್ಚಿಸಲಾಗಿದೆ.

 ರಾಜ್ಯದಲ್ಲಿ ಈಗಾಗಲೇ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಒದಗಿಸಿರುವ 150 ಕಬ್ಬು ಕತ್ತರಿಸುವ ಯಂತ್ರಗಳನ್ನು ಒದಗಿಸಿದ್ದು ಬಹುತೇಕ ರೈತರು ಇಲ್ಲಿಯವರೆಗೆ ನೋಂದಣಿ ಶುಲ್ಕ ದುಬಾರಿಯಾಗಿರುವುದರಿಂದ ಹಾಗೂ‌ ಈ ವರ್ಷದ ಆಯವ್ಯಯದಲ್ಲಿ ಹಾರ್ವೆಸ್ಟರ್ ಹಬ್ ಮಾಡುವಾಗ ಕಬ್ಬು ಕಟಾವು ಯಂತ್ರಗಳ ನೋಂದಣಿ ಶುಲ್ಕವನ್ನು ಆಂಧ್ರ ಹಾಗು ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಕಡಿತಗೊಳಿಸುವುದು.

ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿರುವುದರಿಂದ ದೆಹಲಿ, ಚೆನೈ, ಮುಂಬೈನಲ್ಲಿರುವಂತೆ ಬೆಂಗಳೂರಿನಲ್ಲಿ Regional plant ಕ್ವಾರಟೈನ್ ಸ್ಥಾಪನೆ ಮಾಡಿ ವಿದೇಶಗಳಿಂದ ಉತ್ತಮ ತಳಿಯ ಬೀಜಗಳನ್ನು ಆಮದು ಮಾಡಿಕೊಳ್ಳಲು ನಿಯಮಗಳನ್ನು ಸಡಿಲಗೊಳಿಸುವುದು.

ಕೃಷಿ ಸಚಿವರು ಎಫ್ಐಸಿಸಿಐ ಮನವಿಯನ್ನು ಪರಿಶೀಲಿಸಿ ‘ನಮ್ಮ ರಾಜ್ಯ ನಮ್ಮ ಕೃಷಿ’ ಕಾರ್ಯಕ್ರಮಕ್ಕೆ ಬರುವುದಾಗಿ ಸಮ್ಮತಿಸಿದರು, ಹಾಗೂ ಚರ್ಚಿಸಿದ ವಿಷಯಗಳ ಕುರಿತು  ಮುಖ್ಯಮಂತ್ರಿಗಳ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಆಧಾರಿತ ಸಂಸ್ಥೆಗಳನ್ನು ಸ್ಥಾಪಿಸಲು ಸೂಕ್ತ ನಿಯಮಗಳನ್ನು ತರಲು ಪ್ರಯತ್ನಿಸುತ್ತೇನೆ.

ಒಟ್ಟಾರೆ ರಾಜ್ಯದ ಕೃಷಿ ಅಭಿವೃದ್ಧಿಯಲ್ಲಿ ರೈತರು ಅಧಿಕಾರಿಗಳು, ಉದ್ದಿಮೆದಾರರು ಹಾಗೂ ವಿಜ್ಞಾನಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ರಾಜ್ಯದಲ್ಲಿ ಸೂಕ್ತ ವಾತಾವರಣ ನಿರ್ಮಿಸಲು ಎಲ್ಲಾ ಪ್ರಯತ್ನ ಮಾಡುತ್ತೆನೆಂದೂ ಸಚಿವರು ತಿಳಿಸಿದರು.‌

 ಸಭೆಯಲ್ಲಿ ಎಫ್ಐಸಿಸಿಐ ಮುಖ್ಯಸ್ಥ  ಶಾಜ್ ಮಂಗಲಂ, ಹಾಗೂ ರವೀಂದ್ರ  ಅಗರವಾಲ್ ಸೇರಿದಂತೆ ಕೈಗಾರಿಕೋದ್ಯಮಿಗಳು ಭಾಗವಹಿಸಿದ್ದರು.

Share this:

  • WhatsApp
  • Post
  • Tweet
  • Print
  • Email
agriculturebengaluruchaluvarayaswamykarnatakakmskmskannada
Share 4 FacebookTwitterPinterestEmail
cklbkrish

previous post
ಬಿಜೆಪಿಯಿಂದ ಬರ ಪರಿಸ್ಥಿತಿ ಅಧ್ಯಯನ
next post
ಆರ್ಯ ವೈಶ್ಯ ಮಕ್ಕಳಿಗೆ ಶೈಕ್ಷಣಿಕ ಸಾಲ

You may also like

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ,...

May 18, 2025

ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ...

May 16, 2025

ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

May 15, 2025

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

May 15, 2025

ಸಕಾರದಿಂದ 108 ಆಂಬುಲೆನ್ಸ್ ಸೇವೆ

May 14, 2025

ಸಂಭ್ರಮಾಚರಣೆ: ಸಿದ್ದರಾಮಯ್ಯ – ಡಿಕೆಶಿ ಗೊಂದಲ

May 12, 2025

ಪ್ರಧಾನಿ ಮೋದಿ ನಿರ್ಧಾರ ಎಲ್ಲರೂ ಬೆಂಬಲಿಸಬೇಕು

May 12, 2025

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ...

May 8, 2025

ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

May 6, 2025

‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

May 3, 2025

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (179)
  • ಅಂಕಣ (101)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,582)
  • ರಾಜ್ಯ (1,871)
  • ರಾಷ್ಟ್ರ (1,843)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025
  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025

KMS Special

  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

    May 3, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ...

May 18, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ