ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಮುಖಂಡರ ಜತೆ ಹೆಚ್ ಡಿಕೆ ರಾಜ್ಯ ಪರ್ಯಟನೆ
ಬೆಂಗಳೂರು: ಬರ, ವಿದ್ಯುತ್ ಕ್ಷಾಮ ಸೇರಿ ಅನೇಕ ಗಂಭೀರ ಸಮಸ್ಯೆಗಳಿಂದ ಬಸವಳಿದಿರುವ ರೈತ ಸಮುದಾಯಕ್ಕೆ ಧೈರ್ಯ ತುಂಬುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಕೈಗೊಳ್ಳವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದರು.
ಜೆಪಿ ಭವನದಲ್ಲಿ ಬರ ಅಧ್ಯಯನಕ್ಕಾಗಿ ಪಕ್ಷದ ಜಿಲ್ಲಾ ಮಟ್ಟದ ತಂಡಗಳನ್ನು ರಚನೆ ಮಾಡುವ ಸಂಬಂಧ ನಡೆದ ಮಹತ್ವದ ಸಭೆಯ ನಂತರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಮುಂಬರುವ ವಿಧಾನ ಮಂಡಲ ಅಧಿವೇಶನ ಮುಗಿದ ಕೂಡಲೇ ನಮ್ಮ ಪಕ್ಷದ ಎಲ್ಲಾ ಶಾಸಕರು, ಕೋರ್ ಕಮಿಟಿ ಸದಸ್ಯರು, ಮಾಜಿ ಸಚಿವರು, ಜಿಲ್ಲಾ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರ ಜತೆಗೂಡಿ ಎಲ್ಲಾ ಜಿಲ್ಲೆಗಳಲ್ಲಿ ರೈತ ಸಾಂತ್ವನ ಯಾತ್ರೆ ಮಾಡುತ್ತೇನೆ. ಅವರ ನೋವಿಗೆ ದನಿ ಆಗುತ್ತೇನೆ. ಅವರ ಹಕ್ಕುಗಳಿಗಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಂತ್ರಿಗಳು ಜಿಲ್ಲಾ ಪ್ರವಾಸ ಮಾಡಿ ವರದಿ ಕೊಟ್ಟಿದ್ದಾರೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ತೀವ್ರ ಬರಗಾಲ ನೋಡಿರಲಿಲ್ಲವೆಂದು ಸರ್ಕಾರವೇ ಹೇಳಿದೆ. ಮಳೆ ಅಭಾವದಿಂದ 65 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ನಾಶ ಆಗಿದೆ. ಕೇಂದ್ರ ಸರ್ಕಾರಕ್ಕೆ ವರದಿಯನ್ನೂ ನೀಡಿದೆ. ಆದರೆ, ರೈತರಿಗೆ ಸಹಾಯ ಹಸ್ತ ಚಾಚುವಲ್ಲಿ ಸೋತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೊಟ್ಟು
ರಾಜ್ಯ ಕಾಂಗ್ರೆಸ್ ಸರ್ಕಾರವು ಕಳೆದ ಐದು ತಿಂಗಳಿನಿಂದ ವೈಫಲ್ಯಗಳ ಕೂಪದಲ್ಲಿ ಸಿಲುಕಿದೆ. ಈ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಎಲ್ಲದಕ್ಕೂ ಕೇಂದ್ರದ ಕಡೆಗೇ ಬೊಟ್ಟು ಮಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿದೆ. ಇದು ಸರಿಯಲ್ಲ.
ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡುವ ಬದಲು ಕೇಂದ್ರದ ಬಳಿ ಹೋಗಿ ಪರಿಹಾರ ಕೇಳಬಹುದಿತ್ತಲ್ಲವೇ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಮುಖ್ಯಮಂತ್ರಿ ಆದವರು ಹೇಳುವ ಮಾತೇ ಇದು? ಎಂದು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರ್ಕಾರ ಅನ್ನಭಾಗ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಎನ್ನುತ್ತಾರೆ. ವಿದ್ಯುತ್ ಕೊರತೆ ಆದಾಗ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಅಂತಾರೆ. ಎಲ್ಲದಕ್ಕೂ ಕೇಂದ್ರದ ಕಡೆಗೇ ಕೈ ತೋರಿಸುತ್ತಾರೆ. ಹಾಗಾದರೆ, ರಾಜ್ಯ ಸರ್ಕಾರ ಎನ್ನುವುದು ಏತಕ್ಕೆ? ಇಲ್ಲಿ ಕೂತು ಇವರು ಏನು ಮಾಡುತ್ತಿದ್ದಾರೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ಇದ್ದರೆ ಸಿಎಂ ಡಾನ್ಸ್ ಮಾಡುತ್ತಾರೆ
ರಾಜ್ಯದ 216 ತಾಲೂಕುಗಳಲ್ಲಿ ಬರವಿರುವುದಾಗಿ ಸರ್ಕಾರವೇ ಕೇಂದ್ರಕ್ಕೆ ಮನವಿ ಕೊಟ್ಟಿದೆ. ಎಸ್ ಡಿ ಆರ್ ಎಫ್ ನಲ್ಲಿ 529 ಕೋಟಿ ರೂ. ಹಣ ಇಟ್ಟಿದ್ದೇವೆ ಅಂತ ಹೇಳಿಕೆ ಕೊಟ್ಟಿದ್ದಾರೆ ಸಚಿವರು. ಎಲ್ಲಾ ಕಡೆ ಬರ ಪರಿಸ್ಥಿತಿ ಇದೆ ಎಂಬ ವರದಿಗಳು ನಿತ್ಯವೂ ಬರುತ್ತಿವೆ.
ಮುಖ್ಯಮಂತ್ರಿಗಳು ಎಲ್ಲೋ ಹೋಗಿ ಡಾನ್ಸ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಜನರು ಕಷ್ಟದಲ್ಲಿದ್ದರೆ ಇವರಿಗೆ ಸಂಭ್ರಮವೋ ಸಂಭ್ರಮ. ಸಂಭ್ರಮ ಮಾಡಿಕೊಂಡು ಜನರನ್ನು ಅಣಕ ಮಾಡುತ್ತಿದ್ದಾರೆ. ಅಲ್ಲಿ ರೈತರ ಕಷ್ಟಕ್ಕೆ ಏನಾದರೂ ಪರಿಹಾರ ಕೊಟ್ಟು ಬಂದಿದ್ದಾರೆಯೇ ಎಂದು ಕುಮಾರಸ್ವಾಮಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
2018 ಚುನಾವಣೆಗೆ ಮುನ್ನ ರೈತರಿಗೆ ಹತ್ತು ಸಾವಿರ ಕೊಡುತ್ತೇವೆ ಎಂದು ರೈತರಿಗೆ ಭರವಸೆ ಕೊಟ್ಟಿದ್ದರು ಕಾಂಗ್ರೆಸಿನವರು. ಆದರೆ, ಸರ್ಕಾರ ಖಜಾನೆಯಲ್ಲಿ ಹಣ ಇಟ್ಟಿರಲಿಲ್ಲ. ನಂತರ ನಾನು ಮುಖ್ಯಮಂತ್ರಿ ಆದಾಗ ಅದನ್ನು ಕೊಡಲು ಆಗಲಿಲ್ಲ ಎಂದ ಅವರು, ಬಿಜೆಪಿ ಸರ್ಕಾರದಲ್ಲಿ ಕೊಡಲಾಗುತ್ತಿದ್ದʼಕಿಸಾನ್ ಸಮ್ಮಾನ್ʼ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿತು. ಗ್ಯಾರಂಟಿ ಎಂದು ಹೇಳಿಕೊಂಡು ಜನರಿಗೆ ಟೋಪಿ ಹಾಕಿದರು ಎಂದು ಅವರು ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆಗೆ ಚಾಟಿ
ಕಲಬುರಗಿ ನಾಯಕರೊಬ್ಬರು ಮೈಸೂರಿನಲ್ಲಿ ಏನನ್ನೋ ಹೇಳಿದ್ದಾರೆ. ಬಿಜೆಪಿಗೆ ನಾಯಕರು ಜಾಬ್ ಲೆಸ್, ಜೆಡಿಎಸ್ ಪೀಪಲ್ ಲೆಸ್ ಎಂದಿದ್ದಾರೆ. ಅದೇನು ಎನ್ನುವುದನ್ನು ನಾವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ತೋರಿಸುತ್ತೇವೆ. ಆದರೆ, ಅವರು ಪ್ರತಿನಿಧಿಸುವ ಕಲಬುರಗಿ ಜಿಲ್ಲೆಯ ಜನರಿಗೆ ಏನು ಕೊಟ್ಟಿದ್ದಾರೆ ಎಂದು ಹೇಳಲಿ. ಆ ಜಿಲ್ಲೆಯಲ್ಲಿನ ತೊಗರಿ ಬೆಳೆಗಾರರ ಸಂಕಷ್ಟ ಗೊತ್ತಿದೆಯಾ ಅವರಿಗೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಮಾಜಿ ಮುಖ್ಯಮಂತ್ರಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ವಿರೋಧ ಪಕ್ಷಗಳು ಟೀಕೆ ಮಾತಾಡಿದ ತಕ್ಷಣ ಅವರಿಗೆ ಏನೂ ಕೆಲಸ ಇಲ್ಲ ಎಂದು ಸರ್ಕಾರ ಅಹಂಕಾರದಿಂದ ಹೇಳುತ್ತದೆ. ಈ ರೀತಿ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಇಲ್ಲದಿದ್ದರೆ, ಜನರ ಮುಂದೆ ನಿಮ್ಮ ಗೌರವವೇ ಕಡಿಮೆ ಆಗುತ್ತದೆ ಎಂಡು ಅವರು ಎಚ್ಚರಿಕೆ ಕೊಟ್ಟರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ಆಲ್ಕೊಡ್ ಹನುಮಂತಪ್ಪ, ಶಾಸಕರಾದ ಸಮೃದ್ಧಿ ಮಂಜುನಾಥ್, ಸ್ವರೂಪ್ ಪ್ರಕಾಶ್, ನೇಮಿರಾಜ್ ನಾಯಕ್, ಮಾಜಿ ಶಾಸಕ ಆರ್.ಮಂಜಿನಾಥ್, ರಾಜಾ ವೆಂಕಟಪ್ಪ ನಾಯಕ್, ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಹಲವಾರು ನಾಯಕರು ಉಪಸ್ಥಿತರಿದ್ದರು.
ರಾಜ್ಯಾದ್ಯಂತ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ರೈತ ಸಾಂತ್ವನ ಯಾತ್ರೆ
ವಿಧಾನಮಂಡಲ ಅಧಿವೇಶನ ಮುಗಿದ ಮೇಲೆ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಮುಖಂಡರ ಜತೆ ಹೆಚ್ ಡಿಕೆರಾಜ್ಯ ಪರ್ಯಟನೆ