ಖಾಸಗಿ ಹೋಟೆಲ್ನಲ್ಲಿ ಸರಳವಾಗಿ ನಡೆದ ಮದುವೆ
ಬೆಂಗಳೂರು: ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ.ಪಾಟೀಲ ಮತ್ತು ಆಶಾ ಅವರ ಜ್ಯೇಷ್ಠ ಪುತ್ರ ಬಸನ್ ಅವರ ವಿವಾಹವು ಕಾಂಗ್ರೆಸ್ಸಿನ ಹಿರಿಯ ಮುಖಂಡ ಮತ್ತು ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗಳು ಅಖಿಲಾ ಅವರೊಂದಿಗೆ ಇಲ್ಲಿನ ಖಾಸಗಿ ಹೋಟೆಲ್ನಲ್ಲಿ ಗುರುವಾರ ಶಾಸ್ತ್ರೋಕ್ತವಾಗಿ ನೆರವೇರಿತು.
ಅಖಿಲಾ ಅವರು ಶಾಮನೂರರ ಪುತ್ರ, ಎಸ್ ಎಸ್ ಗಣೇಶ್ ಮತ್ತು ರೇಖಾ ದಂಪತಿಯ ಪುತ್ರಿಯಾಗಿದ್ದಾರೆ.
ಕುಟುಂಬದ ಹಿರಿಯರು ಮತ್ತು ಬಂಧುಗಳ ಸಮ್ಮುಖದಲ್ಲಿ ವಿವಾಹ ಮಹೋತ್ಸವವು ಸರಳವಾಗಿ ನೆರವೇರಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವರಾದ ರಾಮಲಿಂಗಾರೆಡ್ಡಿ, ಚಲುವರಾಯಸ್ವಾಮಿ, ಕೃಷ್ಣಬೈರೇಗೌಡ, ಮಧು ಬಂಗಾರಪ್ಪ, ದರ್ಶನಾಪುರ, ಶಿವಾನಂದಪಾಟೀಲ, ದಿನೇಶ ಗುಂಡೂರಾವ್ ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ ಪಾಟೀಲ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಎಚ್ .ಡಿ. ರೇವಣ್ಣ, ಕೋಟಾ ಶ್ರೀನಿವಾಸಪೂಜಾರಿ, ಬಸನಗೌಡ ಪಾಟೀಲ ಯತ್ನಾಳ್, ಮಂಜುನಾಥ ಭಂಡಾರಿ, ಸಂಸದರಾದ ಪಿ.ಸಿ.ಮೋಹನ್, ರಮೇಶ ಜಿಗಜಿಣಗಿ ಸೇರಿದಂತೆ ಸರ್ವಪಕ್ಷಗಳ ಶಾಸಕರು, ಸಂಸದರು, ಮುಖಂಡರು ವಧು-ವರರನ್ನು ಆಶೀರ್ವದಿಸಿ, ಶುಭ ಕೋರಿದರು.