ವಕೀಲರಾಗಿ ಶಶಿಕಿರಣ್ ಉಪಮುಖ್ಯಮಂತ್ರಿ ಪರ ವಾದ ಮಂಡಿಸಿದ್ದರು
ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕರ್ಮಕಾಂಡವನ್ನು ಮುಚ್ಚಿ ಹಾಕಲೆಂದೇ ಖಾಸಗಿ ವಕೀಲರನ್ನು ಅಡ್ವೋಕೇಟ್ ಜನರಲ್ ಆಗಿ ಸರ್ಕಾರ ನೇಮಕ ಮಾಡಿಕೊಂಡಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಕೀಲರಾಗಿ, ಉಪಮುಖ್ಯಮಂತ್ರಿ ಪರ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.
ದುರಂತವೆಂದರೆ, ಸರ್ಕಾರದ ಪ್ರಭಾವಿ ರಾಜಕಾರಣಿಯ ಖಾಸಗಿ ವಕೀಲರು ಅಡ್ವೋಕೇಟ್ ಜನರಲ್ ಆಗಿ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ಹಿಂಪಡೆಯಬೇಕು ಎಂದು ಸಂಪುಟಕ್ಕೆ ಶಿಫಾರಸ್ಸು ಮಾಡಿರುವುದಾಗಿದೆ.
ಶಿಫಾರಸ್ಸಿನ ಕಾನೂನು ಮಾನ್ಯತೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆಯಾಗದೆ, ಅಂಗೀಕೃತವಾಗಿದ್ದು, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದಂತಾಗಿದೆ ಎಂದು ಟೀಕಿಸಿದರು.
ಶಶಿಕಿರಣ್ ಕಾನೂನು ವ್ಯವಸ್ಥೆಯ ಅಣಕ ಮಾಡಬಾರದು, ಸಚಿವ ಸಂಪುಟದಲ್ಲಿರುವ ಸಚಿವರು ಒಪ್ಪಿಗೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟಿ ಹಾಕುತ್ತದೆ.
ತಪ್ಪು ಮಾಡಿಲ್ಲ ಎಂದರೆ, ಸಿಬಿಐ ಮೇಲೆ ಭಯವೇಕೆ
ಶಿವಕುಮಾರ್ ಯಾವುದೇ ತಪ್ಪು ಮಾಡಿಲ್ಲ ಎಂದರೆ, ಸಿಬಿಐ ಮೇಲೆ ಭಯವೇಕೆ, ರಾಜ್ಯ ಪೊಲೀಸರಿಗೆ ತನಿಖೆ ಒಪ್ಪಿಸಿದರೆ ಎಲ್ಲಾ ಕರ್ಮಕಾಂಡವನ್ನು ಸುಲಭವಾಗಿ ಮುಚ್ಚಿ ಹಾಕಬಹುದು ಎಂಬ ಆಲೋಚನೆ ಇದ್ದಂತಿದೆ.
ಖಾಸಗಿ ವಕೀಲರನ್ನು ಅಡ್ವೋಕೇಟ್ ಜನರಲ್ ಹುದ್ದೆಗೆ
ಖಾಸಗಿ ವಕೀಲರನ್ನು ಅಡ್ವೋಕೇಟ್ ಜನರಲ್ ಹುದ್ದೆಗೆ ನೇಮಕ ಮಾಡಿರುವುದು ವಿರೋಧಾಭಾಸ ಆಗುವುದಿಲ್ಲವೇ ಎಂದಿದ್ದಾರೆ.