ಬಿಎಂಟಿಸಿಯಿಂದ ಹೊಸ ಮೆಟ್ರೋ ಫೀಡರ್ ಮಾರ್ಗಗಳ ಪರಿಚಯ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಣ ರಹಿತ ಸೇವೆಗಳಲ್ಲಿ ನೂತನ ಮೆಟ್ರೋ ಫೀಡರ್ ಮಾರ್ಗಗಳನ್ನು ನವೆಂಬರ್ 27 ರಿಂದ ಪರಿಚಯಿಸಲಿದೆ.
ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಈಗ ನಾಲ್ಕು ನೂತನ ಮೆಟ್ರೋ ಪೀಡರ್ ಮಾರ್ಗಗಳಲ್ಲಿ 7 ಬಸ್ಗಳ ಸೌಲಭ್ಯ ಕಲ್ಪಿಸಲಿದೆ.
ಎಂಎಫ್-18 ಬಸ್ಸು ಶಾಂತಿನಗರ ಟಿಟಿಎಂಸಿಯಿಂದ ಹೊರಟು ಲಾಲ್ಬಾಗ್ ಮುಖ್ಯ ರಸ್ತೆ, ಮಹಿಳಾ ಸೇವಾ ಸಮಾಜ, ಕೆ.ಆರ್.ಮಾರುಕಟ್ಟೆ, ಕಾರ್ಪೋರೇಷನ್ ಮೂಲಕ ಶಾಂತಿನಗರ ಟಿಟಿಎಂಸಿಗೆ ಮರಳಲಿದೆ. ಹಾಗೆಯೇ ಎಂಎಫ್-18 ಎ ಬಸ್ಸು ಶಾಂತಿನಗರ ಟಿಟಿಎಂಸಿಯಿಂದ ಹೊರಟು ಪೂರ್ಣಿಮಾ ಚಿತ್ರಮಂದಿರ, ಕೆ.ಆರ್.ಮಾರುಕಟ್ಟೆ, ಮಹಿಳಾ ಸೇವಾ ಸಮಾಜ, ಲಾಲ್ಬಾಗ್ ಮುಖ್ಯ ರಸ್ತೆ ಮೂಲಕ ಶಾಂತಿನಗರ ಟಿಟಿಎಂಸಿ ಬಂದು ಸೇರಲಿದೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.
ಎಂ.ಎಫ್-1ಎಫ್ ಬಸ್ ಗಳು ಎಸ್.ವಿ ಮೆಟ್ರೋ ನಿಲ್ದಾಣದಿಂದ ಹೊರಟು, ಬಿ.ಇ.ಎಂ.ಎಲ್ ಗೇಟ್, ಮಲ್ಲೇಶ್ ಪಾಳ್ಯ, ಬಸವನಗರ, ರಮೇಶ್ ನಗರ ತಲುಪಲಿವೆ. ಎಂ.ಎಫ್-13 ಬಸ್ ಗಳು ವಿಜಯನಗರ ಮೆಟ್ರೊ ನಿಲ್ದಾಣದಿಂದ ಹೊರಟು, ವಿಜಯನಗರ ಮೆಟ್ರೋ ನಿಲ್ದಾಣ, ಬಸವೇಶ್ವರ ನಗರ ಬಸ್ ನಿಲ್ದಾಣ, ಕಮಲನಗರ ಮಾರ್ಕೆಟ್, ಶಂಕರ್ ನಾಗ್ ಬಸ್ ನಿಲ್ದಾಣ ತಲುಪಲಿವೆ. ಈ ಮಾರ್ಗಗಳಲ್ಲಿ ಮುಂಜಾನೆಯಿಂದ ರಾತ್ರಿವರೆಗೂ ಬಸ್ ಸೌಲಭ್ಯವಿರಲಿದೆ.
ಮಾರ್ಗಗಳ ವೇಳಾಪಟ್ಟಿ ವಿವರ
ಮಾರ್ಗ ಸಂಖ್ಯೆ: ಎಂಎಫ್-18 |
ಶಾಂತಿನಗರ ಬಸ್ ನಿಲ್ದಾಣ ಬಿಡುವ ವೇಳೆ |
6:20, 6:50, 7:25, 08:05, 08:40, 09:25, 10:30, 11:15, 12:00, 12:35, 13:10, 13:45, 14:20, 15:00, 15:35, 16:45, 17:25, 18:10, 18:55, 19:40, 20:25, 21:05 |
ಮಾರ್ಗ ಸಂಖ್ಯೆ: ಎಂಎಫ್-18ಎ |
ಶಾಂತಿನಗರ ಬಸ್ ನಿಲ್ದಾಣ ಬಿಡುವ ವೇಳೆ |
6:35, 7:10, 7:45, 8:25, 9:00, 9:45, 10:55, 11:40, 12:20, 12:55, 13:30, 14:05, 14:45, 15:50, 16:30, 17:45, 18:30, 19:15, 20:00, 20:40 |
ಮಾರ್ಗ ಸಂಖ್ಯೆ: ಎಂಎಫ್-1ಎಫ್
ಬಿಡುವ ವೇಳೆ | ||
ಎಸ್.ವಿ ಮೆಟ್ರೊ ನಿಲ್ದಾಣ | ರಮೇಶ್ ನಗರ | |
5:55, 6:10, 6:30, 6:55, 7:20, 7:40, 8:05, 08:25, 8:45, 09:10, 09:35, 09:55, 10:20, 11:10, 11:30, 11:55, 12:20, 12:40, 13:30, 13:50, 14:10, 14:40, 15:00, 15:25, 15:45, 16:05, 16:30, 17:20, 17:40, 18:05, 18:30, 18:50, 19:15, 19:40, 20:00, 20:25, 22:00 | 5:30, 6:25, 6:45, 07:05, 07:30, 7:55, 8:15, 8:40, 9:00, 9:20, 9:45, 10:15, 10:45, 11:20, 11:45, 12:05, 12:30, 12:55, 13:15, 14:05, 14:25, 14:50, 15:15, 15:35, 16:00, 16:30, 17:05, 17:30, 17:55, 18:15, 18:40, 19:05, 19:25, 19:50, 20:20, 20:40, 21:05 |
ಮಾರ್ಗ ಸಂಖ್ಯೆ: ಎಂಎಫ್-13
ಬಿಡುವ ವೇಳೆ | ||
ವಿಜಯನಗರ ಮೆಟ್ರೊ ನಿಲ್ದಾಣ | ಶಂಕರ್ ನಾಗ್ ಬಸ್ ನಿಲ್ದಾಣ | |
08:15, 08:40, 09:05, 09:30, 09:55, 10:20, 11:10, 11:35, 12:25, 12:50, 13:15, 13:40, 14:05, 14:30, 15:20, 15:45, 16:35, 17:00, 17:25, 17:50, 18:15, 18:40 | 08:40, 09:05, 09:30, 09:55, 10:45, 11:10, 11:35, 12:00, 12:50, 13:15, 13:40, 14:05, 14:55, 15:20, 16:10, 16:35, 17:00, 17:25, 17:50, 18:15, 18:40, 19:05 |