3ಕೆ, 5ಕೆ ಮತ್ತು 10ಕೆ ಓಟದಲ್ಲಿ ಸಾವಿರಾರು ಮಂದಿ ಭಾಗಿ
ಬೆಂಗಳೂರು: ಆರೋಗ್ಯ ತಂತ್ರಜ್ಞಾನ ಸೆಲ್ಯೂಲಾ ತಂತ್ರಜ್ಞಾನ ಸಂಸ್ಥೆಯಿಂದ ದೇಶಾದ್ಯಂತ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯ ರಕ್ಷಣೆ ಉದ್ದೇಶದಿಂದ ನಗರದಲ್ಲಿ ಎಚ್.ಆರ್.ಎಕ್ಸ್ ಪಿಂಕ್ ಮ್ಯಾರಥಾನ್ ಆಯೋಜಿಸಲಾಗಿತ್ತು.
ಮಹಿಳೆಯರಿಂದ, ಮಹಿಳೆಯರಿಗಾಗಿ ಮತ್ತು ಮಹಿಳೆಯರಿಗೋಸ್ಕರ ಏರ್ಪಡಿಸಿದ್ದ ಪಿಂಕಥಾನ್ ನಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
ನಗರ ಸೇಂಟ್ ಜೋಸೆಫ್ ಕಾಲೇಜು ಆವರಣದಿಂದ ಕಬ್ಬನ್ ಪಾರ್ಕ್, ವಿಧಾನಸೌಧದ ಮೂಲಕ ಸಾಗಿತು. ಪಿಂಕಥಾನ್ ಅಂಗವಾಗಿ 3ಕೆ, 5ಕೆ ಮತ್ತು 10ಕೆ ಓಟ ಆಯೋಜಿಸಲಾಗಿತ್ತು. ಮಹಿಳೆಯರ ಆರೋಗ್ಯ ರಕ್ಷಣೆ ಉದ್ದೇಶದ ಎಚ್.ಆರ್.ಎಕ್ಸ್ ನೊಂದಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ಕೈಜೋಡಿಸಿದ್ದಾರೆ.
ಮಹಿಳೆಯರ ಆರೋಗ್ಯ, ಸುರಕ್ಷತೆಗಾಗಿ ರಾಷ್ಟ್ರವ್ಯಾಪಿ ಚಳುವಳಿ
ಪ್ಯಾನ್ ಇಂಡಿಯಾ ಪಿಂಕ್ ಕ್ರಾಂತಿಗಾಗಿ ಹೆಲ್ತ್ ಟೆಕ್ ಸ್ಟಾರ್ಟ್ ಅಪ್ ಸೆಲ್ಯುಲಾದೊಂದಿಗೆ ಹೃತಿಕ್ ರೋಶನ್ ಅವರ ಎಚ್.ಆರ್.ಎಕ್ಸ್ ಬ್ರ್ಯಾಂಡ್ ಕೈಜೋಡಿಸಿದ್ದು, ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆಗಾಗಿ ರಾಷ್ಟ್ರವ್ಯಾಪಿ ಚಳುವಳಿ ಹಮ್ಮಿಕೊಳ್ಳಲಾಗಿದೆ.
ದೇಶದ ಪ್ರಮುಖ ೧೧ ನಗರಗಳಲ್ಲಿ ಮಹಿಳೆಯರ ಆರೋಗ್ಯ ರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಲಾಗುತ್ತಿದೆ.ಎಚ್.ಆರ್. ಎಕ್ಸ್ ಪಿಂಕ್ ಮ್ಯಾರಥಾನ್ ಭೌಗೋಳಿಕ ಗಡಿಗಳನ್ನು ಮೀರಿದ್ದು, ದೇಶಾದ್ಯಂತ ನಡೆಯುತ್ತಿರುವ ಇಂತಹ ವಿನೂತನ ಪ್ರಯತ್ನದಿಂದ ಮಹಿಳೆಯರ ಆರೋಗ್ಯ ಮತ್ತು ಸುರಕ್ಷತೆ ಕುರಿತಾದ ಸಮಸ್ಯೆಗಳನ್ನು ಪರಿಹರಿಸಲು ಸಾಮೂಹಿಕ ಬದ್ಧತೆಯ ಪ್ರತೀಕವಾಗಿದೆ. ಪಿಂಕಥಾನ್ ನಲ್ಲಿ ಮಣಿಪಾಲ್ ಆಸ್ಪತ್ರೆ, ಅಕ್ಷಯ ಕಲ್ಪ, ಟ್ರೋಯಿಕಾ ಫಾರ್ಮಾಸುಟಿಕಲ್ಸ್, ಎಚ್.ಪಿ.ಸಿ.ಎಲ್, ಕಲ್ಟ್ ಫಿಲ್ಟ್, ಈಟ್ ಫಿಟ್ ಸಂಸ್ಥೆಗಳು ಸಹಬಾಗಿತ್ವ ಹೊಂದಿವೆ.
ಸೆಲ್ಯುಲಾ ಸಿಇಒ ಡಾ ಮನೀಷ್ ಹರ್ಷ್ ಮಾತನಾಡಿ, “ಭಾರತದಲ್ಲಿ ಮಹಿಳೆಯರ ಸುರಕ್ಷತೆ ಮತ್ತು ಆರೋಗ್ಯ ಪ್ರಾಥಮಿಕ ಕಾಳಜಿಯಾಗಿದೆ. ನಾವು ಸ್ಥಳೀಯ ಎನ್‌ಜಿಒಗಳನ್ನು ಬೆಂಬಲಿಸಲು ಮತ್ತು ಈ ನಿರ್ಣಾಯಕ ವಿಷಯದ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ನಡೆಸುತ್ತಿದ್ದೇವೆ. ಪ್ರತಿ ಮೆಟ್ರೋದಲ್ಲಿ, ಅಭಿಯಾನವು ಕಾರ್ಪೋರೇಟ್ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಒಳಗೊಂಡಿದೆ ಎಂದರು.