ಕಾಡು ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಲ್ಲಿ
ಬೆಂಗಳೂರು: ಕಾಡುಮಲ್ಲೇಶ್ವರ ದೇವಾಲಯದಲ್ಲಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ 800ಕೆಜಿ ಕಡಲೆಕಾಯಿಗಳಿಂದ ಶೃಂಗಾರಿಸಿದ 20 ಅಡಿ ಎತ್ತರ 20 ಅಡಿ ಉದ್ದದ ನಂದಿ ಸ್ಪಾಪನೆ ಉದ್ಘಾಟನೆ ಮಾಡಲಾಯಿತು.
ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂದ್ರ ರಾಜ್ಯಗಳಿಂದ 350ಮಳಿಗೆಗಳನ್ನು ರೈತರು ತೆರೆದಿದ್ದಾರೆ.
ಜನರು ಪರಿಷೆಯಲ್ಲಿ ಮಲ್ಲಿಕಾರ್ಜುನನಾ ದರ್ಶನ ಪಡೆದು, ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡಿದ್ದಾರೆ. ಮೂರು ದಿನಗಳ ಕಾಲ ಜರುಗುವ ಪರಿಷೆಯಲ್ಲಿ 8ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ.
ಮಾಜಿ ಸಚಿವರಾದ ಶಾಸಕ ಮುನಿರತ್ನ, ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್ ಅವರು ಪಾಲ್ಗೊಂಡಿದ್ದು, ಸಂಪಿಗೆ ರಸ್ತೆಯ ಗತ ವೈಭವವನ್ನು ಮರುಕಳಿಸಲು ಸಂಪಿಗೆ ರಸ್ತೆಯಲ್ಲಿ 50 ಕ್ಕೂ ಅಧಿಕ ಸಂಪಿಗೆ ಗಿಡಗಳನ್ನು ನೆಡಲಾಯಿತು.
ಆಗಮಿಸುವ ಭಕ್ತರಿಗೆ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಾಗುತ್ತಿದೆ. ಕಡಲೆಕಾಯಿ ಪರಿಷೆಯಲ್ಲಿ ವಿವಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬಸವನಗುಡಿಯಲ್ಲಿ ಜರುಗುವ ಕಡಲೆಕಾಯಿ ಪರಿಷೆ ಮಲ್ಲೇಶ್ವರದಲ್ಲಿ ಸರಿಸಮಾನವಾಗಿ ಆಯೋಜಿಸಲಾಗಿದೆ. ಬೆಂಗಳೂರುನಗರ ನಾಗರಿಕರು ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅಧ್ಯಕ್ಷರಾದ ಬಿ.ಕೆ.ಶಿವರಾಂರವರು ಹೇಳಿದರು.
ಸಮಾಜ ಸೇವಕರಾದ ಚಂದ್ರಶೇಖರ್ ನಾಯ್ಡು, ಹಿಮಾಂಶು ಶಾಲೆಯ ಪ್ರಾಂಶುಪಾಲರಾದ ಚಂದ್ರಮೌಳಿ, ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ಮತ್ತಿತತರು ಉಪಸ್ಥಿತರಿದ್ದರು.