ತೆಲಂಗಾಣ ಚುನಾವಣೆಯಲ್ಲಿ ಫಲ ನೀಡಿದ ತಂತ್ರಗಾರಿಕೆ
ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪರ ಅಲ್ಪಸಂಖ್ಯಾತ ಸಮುದಾಯದ ಮತ ಸೆಳೆಯುವಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಯಶಸ್ವಿಯಾಗಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಇಪ್ಪತ್ತೈದು ದಿನಗಳ ಹಿಂದೆಯೇ ಹೈದರಾಬಾದ್ ಗೆ ಬಂದು ವಾಸ್ತವ್ಯ ಹೂಡಿ ಪಕ್ಷದ ನಾಯಕರು, ಮುಸ್ಲಿಂ ಸಮುದಾಯದ ಮುಖಂಡರು, ಬುದ್ಧಿ ಜೀವಿಗಳ ಜತೆ ಹಲವಾರು ಸಭೆಗಳನ್ನು ನಡೆಸಿ ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ 49 ಕ್ಷೇತ್ರ ಗಳಲ್ಲಿ ಕಾಂಗ್ರೆಸ್ ಪರ ಮತ ಒಗ್ಗೂಡಿಸುವಿಕೆಯಲ್ಲಿ ಸಫಲರಾದರು.
ಹೈದರಾಬಾದ್ ಗೆ ಬರುವ ಮುನ್ನ ದೆಹಲಿಗೆ ತೆರಳಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ಜತೆ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ರಾಹುಲ್ ಗಾಂಧಿ ಅವರ ಜತೆ ನಿರಂತರ ಸಂಪರ್ಕ ಸಾಧಿಸಿ ಅಲ್ಪಸಂಖ್ಯಾತ ಸಮುದಾಯದ ಮತ ಕಾಂಗ್ರೆಸ್ ನತ್ತ ಒಗ್ಗೂಡಿಸಿದರು.
ಅಷ್ಟೇ ಅಲ್ಲದೆ ಎಂ ಐ ಎಂ ಹಾಗೂ ಬಿ ಆರ್ ಎಸ್ ನಾಯಕರನ್ನು ಕಾಂಗ್ರೆಸ್ ಗೆ ಸೆಳೆದು ಆ ಎರಡೂ ಪಕ್ಷ ಗಳಿಗೆ ಟಾಂಗ್ ನೀಡಿದ್ದರು.
ಬೋಧಾನ್, ರಾಮಗೊಂಡಮ್, ಪೆದ್ದಪಲ್ಲೆ, ಬಾಲಕೊಂಡ್ , ಕೊಂಡಗಲ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದರ ಜತೆಗೆ ಕಮ್ಮಮ್, ವಾರಂಗಲ್, ನಲ್ಗೊಂಡ ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಮುಸ್ಲಿಂ ಮತ ಒಗ್ಗೂಡಿಸಿದ್ದು ಕಾರಣ ವಾಗಿದೆ. ಒಟ್ಟು ಗೆದ್ದಿರುವ ಕ್ಷೇತ್ರಗಳಲ್ಲಿ ಅರ್ಧಕ್ಕೂ ಹೆಚ್ಚು ಕ್ಷೇತ್ರಗಳು ಕಮ್ಮಮ್, ನಲ್ಗೊಂಡ, ವಾರಂಗಲ್ ಜಿಲ್ಲೆ ಗಳಿಗೆ ಸೇರಿದೆ.
ಕಳೆದ ಎರಡೂ ಚುನಾವಣೆ ಗಳಲ್ಲಿ ಬಿ ಆರ್ ಎಸ್ ಮತ್ತು ಎಂ ಐ ಎಂ, ಕಾಂಗ್ರೆಸ್ ನಡುವೆ ಮುಸ್ಲಿಂ ಮತ ಹಂಚಿಕೆ ಆಗುತ್ತಿತ್ತಾದರೂ ಈ ಬಾರಿ ಗ್ರೇಟರ್ ಹೈದರಾಬಾದ್ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪರ ಅಲ್ಪಸಂಖ್ಯಾತ ಮತ ವಾಲಿದ್ದು, ಅದಕ್ಕೆ ಜಮೀರ್ ಅಹಮದ್ ಖಾನ್ ಅವರು ಕರ್ನಾಟಕದ ಇತರೆ ಮುಸ್ಲಿಂ ನಾಯಕರ ಜತೆಗೂಡಿ ರೂಪಿಸಿದ ಕಾರ್ಯತಂತ್ರ ಯಶಸ್ವಿ ಯಾಗಿದೆ ಪ್ರಕಟಣೆ ತಿಳಿಸಿದೆ.
ತೆಲಗಾಂಣ ಮತದಾರರಿಗೆ ಧನ್ಯವಾದ
ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ ತೆಲಂಗಾಣ ಜನತೆಗೆ ಹೃದಯ ಪೂರ್ವಕ ಕೃತಜ್ಞತೆ ಗಳು. ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಂತೆ ಇಲ್ಲಿಯೂ ಆರು ಗ್ಯಾರಂಟಿ ಜಾರಿ ಮಾಡಲಿದೆ ಎಂದು ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್ ನ ಎಲ್ಲ ನಾಯಕರ ಸಂಘಟಿತ ಹೋರಾಟ, ಜನತೆಯ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಬದಲಾವಣೆ ಬೇಕಿದೆ, ಕಾಂಗ್ರೆಸ್ ಬರಬೇಕಿದೆ ಎಂಬ ನಮ್ಮ ಪ್ರಯತ್ನ ಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.