ಮೇಲ್ಮನೆಯಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ
ಬೆಳಗಾವಿ: ರಾಜ್ಯದಲ್ಲಿ 2016 ಜನವರಿಯಿಂದ ಇದುವರೆಗೆ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ರಾಜೀನಾಮೆ ಇತರೆ ಕಾರಣಗಳಿಂದ ಖಾಲಿ ಇರುವ ಭೋದಕ ಮತ್ತು ಭೋದಕೇತರ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಪರಿಷತ್ ನಲ್ಲಿ ನಿಯಮ 330 ರಡಿ ಸದಸ್ಯರಾದ ಮಧು ಜಿ ಮಾದೇಗೌಡ, ಮರಿ ತಿಬ್ಬೇಗೌಡ, ಎಸ್.ಎಲ್. ಭೋಜೇಗೌಡ ಹಾಗೂ ಶಶಿಲ್ ಜಿ ನಮೋಶಿ ಅವರು ಮಂಡಿಸಿದ್ದ ವಿಷಯಕ್ಕೆ ಉತ್ತರಿಸಿ ಮಾತನಾಡಿದರು.
4788 ಭೋಧಕ ಹುದ್ದೆಗಳು ಖಾಲಿ
ರಾಜ್ಯದ ಖಾಸಗಿ ಅನುದಾನಿತ ಪ್ರೌಢಶಾಲೆಗಳಲ್ಲಿ 1 ನೇ ಜನೆವರಿ 2016 ರಿಂದ 31 ನೇ ಡಿಸೆಂಬರ್ 2020 ರವರೆಗೆ ನಿವೃತ್ತಿ, ಮರಣ, ರಾಜೀನಾಮೆ ಇನ್ನಿತರೆ ಕಾರಣಗಳಿಂದ ಖಾಲಿಯಾಗಿರುವ 4521 ಭೋಧಕ ಹುದ್ದೆಗಳನ್ನು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಬಾಕಿ ಇರುವ 267 ಭೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸಹಮತಿ ನೀಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.