Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಅತಿಯಾದ ಆತ್ಮವಿಶ್ವಾಸ ಕೆಸಿಆರ್ ಅವನತಿಗೆ ಕಾರಣ

by KM Shivaraju December 4, 2023
written by KM Shivaraju December 4, 2023 0 comments 3 minutes read
3FacebookTwitterPinterestEmail
78
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲು 5 ಕಾರಣ

ಹೈದರಾಬಾದ್: ಹ್ಯಾಟ್ರಿಕ್ ಹೊಡೆಯುವ ಉಮೇದಿನಲ್ಲಿದ್ದ ತೆಲಂಗಾಣದ ಬಿಆರ್‌ಎಸ್ ಪಕ್ಷದ ಅಧಿನಾಯಕ ಕೆ.ಚಂದ್ರಶೇಖರ್ ರಾವ್ ಅತಿಯಾದ ಆತ್ಮವಿಶ್ವಾಸದಿಂದಲೇ ಕಾಂಗ್ರೆಸ್ ಪಕ್ಷದ ಮುಂದೆ ಮುಗ್ಗರಿಸಿದ್ದಾರೆ.

ಕೆಸಿಆರ್ ನಿಸ್ಸಂಶಯವಾಗಿ ಅತ್ಯುತ್ತಮ ಆಡಳಿತಗಾರ, ಸಮರ್ಥ ಮುಖ್ಯಮಂತ್ರಿ, ಹತ್ತು ವರ್ಷಗಳಲ್ಲಿ ತೆಲಂಗಾಣದ ಚಿತ್ರಣವನ್ನೇ ಬದಲಿಸಿದ ದಿಟ್ಟ ನಾಯಕ, ಈಗ ಮುಖ್ಯಮಂತ್ರಿ ಪದವಿಗೇರಲಿರುವ ರೇವಂತ್ ರೆಡ್ಡಿ ಖಂಡಿತವಾಗಿಯೂ ಕೆಸಿಆರ್ ಅವರಷ್ಟು ಸಮರ್ಥ, ದಕ್ಷ ಮುಖ್ಯಮಂತ್ರಿ ಆಗಲಾರರು, ಅನುಮಾನವೇ ಬೇಡ. ಸ್ವತಃ ಕೆಸಿಆರ್ ಅವರಿಗೂ ರೇವಂತ್ ರೆಡ್ಡಿ ಪ್ಲಸ್, ಮೈನಸ್ಸುಗಳು ತಿಳಿದಿವೆ.

ಕೆಸಿಆರ್ ಎಡವಿದ್ದು ಎಲ್ಲಿ ಎಂಬುದಕ್ಕೆ ೫ ಕಾರಣಗಳನ್ನು ಪಟ್ಟಿ ಮಾಡಬಹುದು

ಕಾರಣ-1: ಕೆಸಿಆರ್ ಕರ್ನಾಟಕದ ಕಾಂಗ್ರೆಸ್ ನಾಯಕರು ತೆಲಂಗಾಣಕ್ಕೆ ಲಗ್ಗೆ ಇಟ್ಟು ಪ್ರಚಾರಕ್ಕೆ ಧುಮುಕಿದಾಗ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾಲ್ಕು ಗ್ಯಾರಂಟಿಗಳ ಬಗ್ಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ತೆಲುಗು ಭಾಷೆ ಬಲ್ಲ ಗಡಿ ಪ್ರದೇಶಗಳ ನಾಯಕರನ್ನು ತೆಲಂಗಾಣದಲ್ಲಿ ಕ್ಯೂ ನಿಲ್ಲಿಸಿ ಪ್ರಚಾರ ಮಾಡಿಸಿದಾಗಲೂ ಕೆಸಿಆರ್ ಆತ್ಮವಿಶ್ವಾಸ ಕುಗ್ಗಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು, ಗ್ಯಾರಂಟಿಗಳ ಪರಿಣಾಮದ ಬಗ್ಗೆ ಅವರು ಎಚ್ಚೆತ್ತುಕೊಳ್ಳಲಿಲ್ಲ. ರೇವಂತ್ ರೆಡ್ಡಿ ಅವರು ಕೆಸಿಆರ್ ಅವರ ಈ ಉಡಾಫೆತನವನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ಫಸಲು ತೆಗೆದಿದ್ದಾರೆ.

ಕಾರಣ-2: ಕಾಂಗ್ರೆಸ್ ಗ್ಯಾರಂಟಿಗಳು ಹಾಗೂ ಬಿಆರ್‌ಎಸ್ ಬಂಧುಗಳ ನಡುವಿನ ಪೈಪೋಟಿಯನ್ನು ಸಮರ್ಥವಾಗಿ ಕೆಸಿಆರ್ ಗುರುತಿಸಲಿಲ್ಲ ಹಾಗೂ ಗ್ಯಾರಂಟಿಗಳನ್ನು ಸರಿಯಾಗಿ ಕೌಂಟರ್ ಕೂಡ ಮಾಡಲಿಲ್ಲ. ಅಗತ್ಯಕ್ಕೆ ತಕ್ಕ ಚುನಾವಣಾ ನಿಪುಣರನ್ನೂ ಅವಲಂಭಿಸಲಿಲ್ಲ. ಕೆಲ ಕಾಲ ತಮ್ಮ ಚುನಾವಣಾ ಸಲಹೆದಾರರಾಗಿದ್ದ ಪ್ರಶಾಂತ್ ಕಿಶೋರ್ ಅವರನ್ನು ಕೆಸಿಆರ್ ಕೈಯ್ಯಾರೆ ಕಳೆದುಕೊಂಡರು. ಎಲೆಕ್ಷನ್ ತಂತ್ರಗಾರಿಕೆ ಮಾಡುವ ಬದಲು, ಕೆಸಿಆರ್‌ಗಿಂತ ದೊಡ್ಡ ತಂತ್ರಗಾರ, ನಿಪುಣ ಇನ್ನೊಬ್ಬರಿಲ್ಲ ಎಂದು ಅವರ ಪುತ್ರ ಕೆಟಿಆರ್, ಆಳಿಯ ಹರೀಶ್ ರಾವ್ ಭುಜ ತಟ್ಟಿಕೊಂಡರು. ಆ ಉಡಾಫೆಯಲ್ಲಿಯೇ ಬಿಆರ್‌ಎಸ್ ಕೊಚ್ಚಿ ಹೋಯಿತು. ಆದರೆ, ಕಾಂಗ್ರೆಸ್ ಈ ತಪ್ಪು ಮಾಡಲಿಲ್ಲ. ಕೆಸಿಆರ್ ಅವರ ಪ್ರತೀ ಹೆಜ್ಜೆಯನ್ನೂ ಕ್ಲುಪ್ತವಾಗಿ ಗಮನಿಸುತ್ತಿದ್ದ ಕೈ ಪಾಳೆಯವು ಕರ್ನಾಟಕದಲ್ಲಿ ಕೆಲಸ ಮಾಡಿದ್ದ ಸುನೀಲ್ ಕನಗೋಳು ಸೇರಿ ಎಲ್ಲಾ ತಂತ್ರಗಾರರನ್ನೂ ತೆಲಂಗಾಣದಲ್ಲಿಯೇ ನಿಯೋಜನೆ ಮಾಡಿತ್ತು.

ಕಾರಣ-3: ದಕ್ಷಿಣ ಭಾರತ ಈಗ ಬಿಜೆಪಿ ಮುಕ್ತ. ಕಾಂಗ್ರೆಸ್ ಮುಕ್ತ ಭಾರತದ ಎಂದು ಜಪ ಮಾಡಿದ್ದ ಪಕ್ಷಕ್ಕೆ ಈಗ ವಿಂದ್ಯ ಪರ್ವತಕ್ಕಿಂತ ಈಚೆ ಈಗ ಅಧಿಕಾರವಿಲ್ಲ. ಪುದುಚೆರಿ ಹೊರತುಪಡಿಸಿದರೆ ಉಳಿದ ಯಾವ ರಾಜ್ಯದಲ್ಲಿಯೂ ಆ ಪಕ್ಷ ಗದ್ದುಗೆಯಲ್ಲಿ ಇಲ್ಲ. ಕರ್ನಾಟಕದಲ್ಲಿ ಇದ್ದ ಅಧಿಕಾರವನ್ನೂ ಕಳೆದುಕೊಂಡಿದೆ. ಜೆಡಿಎಸ್ ಪಕ್ಷವನ್ನೇ ಚುನಾವಣೆ ಹೊತ್ತಿನಲ್ಲಿ ಅಗತ್ಯಕ್ಕೂ ಹೆಚ್ಚು ಟಾರ್ಗೆಟ್ ಮಾಡಿದ್ದರ ಫಲವನ್ನು ಈಗ ಬಿಜೆಪಿ ಉಣ್ಣುತ್ತಿದೆ. ತೆಲಂಗಾಣದಲ್ಲೂ ಬಿಜೆಪಿ ಹೀಗೆಯೇ ಮಾಡಿ ತಾನೂ ಮುಗ್ಗರಿಸಿ, ಕೆಸಿಆರ್ ಅವರನ್ನೂ ಬೀಳಿಸಿದೆ. ಅಲ್ಲೂ ಕಾಂಗ್ರೆಸ್ ವಿರೋಧಿ ಮತಗಳನ್ನು ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಒಡೆದಿದೆ. ಒಂದು ರೀತಿಯಲ್ಲಿ ತಿಳಿದೂ ತಿಳಿದು ಕಾಂಗ್ರೆಸ್ ಪಕ್ಷಕ್ಕೇ ಬಿಜೆಪಿ ಸಹಾಯ ಮಾಡಿದೆ ಎನ್ನುವಂತಿದೆ ಫಲಿತಾಂಶ. ಕೊನೆ ಕ್ಷಣದಲ್ಲಿ ಬಿಜೆಪಿ-ಬಿಆರ್‌ಎಸ್ ನಡುವೆ ಕುದುರಿದ ಒಳ ಒಡಂಬಡಿಕೆ ಕಾರ್ಯಕರ್ತರ ಮಟ್ಟದಲ್ಲಿ ಕೆಲಸ ಮಾಡಿಲ್ಲ. ಅಲ್ಲಿಯೂ ನರೇಂದ್ರ ಮೋದಿ ಅವರ ಪ್ರಚಾರ ಬಿಆರ್‌ಎಸ್ ಮತಗಳಿಗೆ ಪೆಟ್ಟು ಕೊಟ್ಟಿದೆ.

ಕಾರಣ-4:ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ಕೆಸಿಆರ್ ಕೈಕೊಟ್ಟಿದ್ದು ಕಲ್ಯಾಣ ಕರ್ನಾಟಕದ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಿಆರ್‌ಎಸ್‌ಗೆ ನಷ್ಟವನ್ನೇ ಉಂಟು ಮಾಡಿದೆ. ಟಿಆರ್‌ಎಸ್-ಬಿಆರ್‌ಎಸ್ ಆಗಿ ಮರು ನಾಮಕಾರಣ ಮಾಡುವ ತನಕ ಪ್ರತಿಯೊಂದಕ್ಕೂ ಕುಮಾರಸ್ವಾಮಿ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಓಲೈಸುತ್ತಿದ್ದ ಕೆಸಿಆರ್; ಕರ್ನಾಟಕದ ವಿಧಾನಸಭೆ ಚುನಾವಣೆ ಇನ್ನೇನು ಘೋಷಣೆ ಆಗುವ ನೆಕ್ ಮೂಮೆಂಟ್‌ನಲ್ಲಿಯೇ ವರಸೆ ಬದಲಿಸಿ ಕುಮಾರಸ್ವಾಮಿ ಅವರಿಗೆ ನಾಟ್ ರೀಚೆಬಲ್ ಆದರು. ತೆಲಂಗಾಣದಲ್ಲಿ ಮುಸ್ಲೀಂ ಮತಗಳನ್ನು ಕ್ರೋಢೀಕರಣ ಮಾಡಿ ಕಾಂಗ್ರೆಸ್ ಗೆಲ್ಲಿಸಿದ್ದೇನೆ ಎಂದು ಬೀಗುತ್ತಿರುವ ಕರ್ನಾಟಕದ ಹಾಲಿ ಮಂತ್ರಿಯೊಬ್ಬರು ಹಾಗೂ ದಿಲ್ಲಿ ದೊರೆಗಳ ಕಿವಿ ಕಚ್ಚುವಿಕೆಯ ಹಿತ ಅನುಭವಿಸಿದ ಕೆಸಿಆರ್, ಹೇಳಿಕೆ ಮಾತು ಕೇಳಿ ಕುಮಾರಸ್ವಾಮಿ ಅವರನ್ನು ನಿರ್ಲಕ್ಷ್ಯ ಮಾಡಿದರು. ಜೆಡಿಎಸ್ ಪರ ಪ್ರಚಾರಕ್ಕೆ ಇಡೀ ಸಂಪುಟವನ್ನೇ ಕಳಿಸುತ್ತೇನೆ ಎಂದು ಬಡಾಯಿ ಕೊಚ್ಚಿದ್ದ ಅವರು, ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಅವರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದರು. ದುರಂತವೆಂದರೆ, ಅವರ ಕಿವಿ ಕಚ್ಚಿದ ಕರ್ನಾಟಕದ ಮಂತ್ರಿಯೇ ತೆಲಂಗಾಣದಲ್ಲಿ ಮುಸ್ಲೀಂ ವೋಟುಗಳು ಬಿಆರ್‌ಎಸ್‌ಗೆ ಹೋಗದಂತೆ ತಡೆದರು! ದಿಲ್ಲಿಯ ಬಿಜೆಪಿ ದೊರೆಗಳಂತೂ ಮೇಲಿಂದ ಮೇಲೆ ಹಾರಿಬಂದು ಕಾಂಗ್ರೆಸ್ ವಿರೋಧಿ ಮತಗಳನ್ನು ಛಿದ್ರಗೊಳಿಸಿದರು!! ಅಲ್ಲಿಗೆ ಕೆಸಿಆರ್ ಸೋಲು ಖಚಿತವಾಗಿತ್ತು. ತಮಗೆ ಕೈಕೊಟ್ಟರೂ ಹಳೆಯದನ್ನು ಮರೆತ ಕುಮಾರಸ್ವಾಮಿ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಕೆಸಿಆರ್ ಪರ ಮಾತನಾಡಿದ್ದರು. ಗ್ಯಾರಂಟಿಗಳ ಬಗ್ಗೆ ಅವರ ಹೇಳಿಕೆಗಳು ಕಾಂಗ್ರೆಸ್ ನಾಯರನ್ನು ಕಂಗೆಡಿಸಿತ್ತು. ಒಂದು ವೇಳೆ ಎಲ್ಲವೂ ಸರಿ ಇದ್ದು ಕುಮಾರಸ್ವಾಮಿ ಅವರೂ ಕೆಸಿಆರ್ ಪರ ಪ್ರಚಾರ ನಡೆಸಿದ್ದಿದ್ದರೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಾಮಾರೆಡ್ಡಿ, ಸಂಗಾರೆಡ್ಡಿ, ವಿಕಾರಬಾದ್, ನಾರಾಯಣಪೇಟ್, ಜೋಗುಲಾಂಬ ಜಿಲ್ಲೆಗಳಲ್ಲಿ ಬಿಆರ್ ಎಸ್ ಒಳ್ಳೆಯ ಸ್ಕೋರ್ ಮಾಡುತ್ತಿತ್ತು. ಆದರೆ, ಕುಮಾರಸ್ವಾಮಿ ಅವರನ್ನು ತೆಲಂಗಾಣಕ್ಕೆ ಕರೆಸಿಕೊಂಡು ಪ್ರಚಾರ ಮಾಡಿಸಿಕೊಳ್ಳುವ ಅವಕಾಶವನ್ನು ಕೆಸಿಆರ್ ಅತಿ ಬುದ್ಧಿವಂತಿಕೆ ಮಾಡಲಿಕ್ಕೆ ಹೋಗಿ ಕೈಚೆಲ್ಲಿಕೊಂಡರು.

ಕಾರಣ-5: ಕೆಸಿಆರ್ ಅವರಿಗೆ ಇನ್ನೊಂದು ಆಘಾತಕ್ಕೆ ಕಾರಣವಾಗಿದ್ದು ಫ್ಯಾಮಿಲಿ ಪಾಲಿಟಿಕ್ಸ್. ಕೆಸಿಆರ್ ಮುಖ್ಯಮಂತ್ರಿ. ಮಗ ಕೆಟಿಆರ್ ಮಂತ್ರಿ, ಆಳಿಯ ಕೂಡ ಮಂತ್ರಿ. ಮಗಳು ಸಂಸದೆ. ಎಲ್ಲಾ ಪವರ್ ಸೆಂಟರ್ ಗಳೂ ಕುಟುಂಬದ ಒಳಗೇ ಇದ್ದವು. ಹಿಂದೆ ಕಾಂಗ್ರೆಸ್ ಶಾಸಕರನ್ನೇ ಆಪರೇಷನ್ ಮಾಡಿದ್ದ ಕೆಸಿಆರ್‌ಗೆ ಈ ಸಲ ಇದೇ ತಿರುಗುಬಾಣ ಆಗಿತ್ತು. ನೂರಾರು ಜನ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಜಂಪ್ ಆದರು. ಅವರಲ್ಲಿ ಕೆಲವರು ಟಿಕೆಟ್ ಗಿಟ್ಟಿಸಿ ಗೆಲುವು ಕಂಡಿದ್ದಾರೆ. ವಿಚಿತ್ರ ಎಂದರೆ; ಕಾಮಾರೆಡ್ಡಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ವೆಂಕಟರಮಣ ರೆಡ್ಡಿ ಅವರ ಎದುರು ಸ್ವತಃ ಕೆಸಿಆರ್ ಹಾಗೂ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ರೇವಂತ್ ರೆಡ್ಡಿ ಸೋತಿದ್ದಾರೆ. ೬,೭೪೧ ಮತಗಳ ಅಂತರದಿಂದ ಕೆಸಿಆರ್ ಸೋತಿದ್ದಾರೆ.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bengalurubrshd kumaraswamykarnatakakc chandrasekhara raokcrkmskmskannadapoliticstelangana
3 FacebookTwitterPinterestEmail
KM Shivaraju

previous post
ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಜಂಟಿ ಹೋರಾಟ ಎದುರಿಸಲು ಸರ್ಕಾರ ಸಿದ್ಧ
next post
ಸಾಕಾನೆ ಅರ್ಜುನ ವೀರಮರಣ

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

February 25, 2026

ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

February 24, 2026

ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

February 23, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ