43
ಪ್ರಧಾನಿ ಕರೆ ಮೇರೆಗೆ ಸಹಾಯ ಹಸ್ತ
ಬೆಳಗಾವಿ:ಭೀಕರ ಮಿಚಾಂಗ್ ಚಂಡಮಾರುತದ ಆರ್ಭಟಕ್ಕೆ ತತ್ತರಿಸಿರುವ ತಮಿಳುನಾಡಿನ ಸಂಕಷ್ಟ ಪೀಡಿತವಾಗಿರುವ ಜನರ ಪರಿಸ್ಥಿತಿಗೆ ಸ್ಪಂದಿಸಲು ಹಾಗೂ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಇಲ್ಲಿನ ಬಿಜೆಪಿ ಕಛೇರಿಯಿಂದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನು ಇಂದು ಆ ರಾಜ್ಯಕ್ಕೆ ರವಾನಿಸಲಾಯಿತು.
ಪರಿಹಾರ ಸಾಮಗ್ರಿ ತಂಬಿದ ವಾಹನವನ್ನು ಬೆಳಗಾವಿ ನಗರ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ, ಶಾಸಕರುಗಳಾದ ಎಸ್.ಆರ್.ವಿಶ್ವನಾಥ್, ಸತೀಶ್ ರೆಡ್ಡಿ, ಪ್ರಭು ಚೌಹಾಣ್, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೀಳ್ಕೊಟ್ಟರು.