ನಗದು, ಆಸ್ತಿ-ಪಾಸ್ತಿ ದಾಖಲೆಗಳ ವಶ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪತ್ನಿಯ ಸಹೋದರ ಡಾ. ಪ್ರಭುಲಿಂಗ ಮಾನಕರ ಸೇರಿದಂತೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿ ಕೋಟ್ಯಂತರ ರೂ. ನಗದು ಹಾಗೂ ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡಿದೆ.
ಇಂದು ಬೆಳ್ಳಂ ಬೆಳಗ್ಗೆ ರಾಜ್ಯದ 13 ಅಧಿಕಾರಿಗಳಿಗೆ ಸೇರಿದ 63 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ, ಲಂಚಕ್ಕೆ ಬೇಡಿಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಈ ದಾಳಿ ಮಾಡಿದ್ದಾರೆ.
ಅಧಿಕಾರಿಗಳಿಗೆ ಸೇರಿದ 63 ಸ್ಥಳಗಳ ಮೇಲೆ ದಾಳಿ
ಯಾದಗಿರಿಯ ಡಿಎಚ್‌ಓ ಆಗಿರುವ ಪ್ರಭುಲಿಂಗ ಅವರ ಕಲುಬುರಗಿಯ ಮನೆ, ತೋಟ, ಕಚೇರಿಗಳ ಮೇಲೆ ದಾಳಿ ನಡೆಸಿ ಆಸ್ತಿ-ಪಾಸ್ತಿ ಮತ್ತು ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನ ಬೆಸ್ಕಾಂ ಜಾಗೃತ ದಳದ ಟಿ.ಎನ್. ಸುಧಾಕರ ರೆಡ್ಡಿ, ಹಾಲು ಉತ್ಪಾದಕ ಸಹಕಾರ ಸಂಘದ ಮುಖ್ಯಕಾರ್ಯನಿರ್ವಾಕ ಅಧಿಕಾರಿ ಎಚ್.ಎಸ್. ಕೃಷ್ಣಮೂರ್ತಿ, ಕ್ರೆಡೆಲ್ ಸೂಪರಿಂಟೆಂಡಿಂಗ್ ಇಂಜಿನಿಯರ್ ತಿಮ್ಮರಾಯಪ್ಪ, ನಂಜನಗೂಡು ಪ್ರಥಮ ದರ್ಜೆ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವ ಸ್ವಾಮಿ, ಬಳ್ಳಾರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಚಂದ್ರಶೇಖರ್.
ಡಿಆರ್‌ಎಫ್‌ಓ ಮಾರುತಿ, ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ನೌಕರ ಸುನೀಲ್‌ಕುಮಾರ್ ಅವರುಗಳ ನಿವಾಸ, ಕಚೇರಿ, ತೋಟದ ಮನೆಗಳ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಗದು ಹಾಗೂ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.