ಬೆಳಗಾವಿ: ಯಶಸ್ವಿನಿ ಯೋಜನೆ ಅನುಷ್ಠಾನದ ಉದ್ದೇದಿಂದ ಅವಶ್ಯಕತೆ ಕಂಡು ಬಂದಲ್ಲಿ ನಿಗದಿಪಡಿಸಿದ ಮಾನದಂಡಗಳನ್ನು ಬದಲಾಯಿಸಲು ಪರಿಶೀಲಿಸಲಾಗುವುದು ಎಂದು ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಹೇಳಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಘೋಷಿಸಲಾಗಿದೆ. ಅದರಂತೆ ಸದಸ್ಯರ ನೋಂದಣಿಯನ್ನು 2022ರ ನವೆಂಬರ್ 1ರಿಂದ ಪ್ರಾರಂಭಿಸಿದ್ದು ನೋಂದಾಯಿಸಿದ ಸದಸ್ಯರಿಗೆ ನೆಟ್ ವರ್ಕ್ ಆಸ್ಪತೆಗಳಲ್ಲಿ 2023ರ ಜನವರಿ 1 ರಿಂದ 2024ರ ಮಾರ್ಚ 31ರವರೆಗೆ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ವೈದ್ಯರ ಕಡ್ಡಾಯ ಗ್ರಾಮೀಣ ಸೇವೆ ವಿನಾಯಿತಿ ವಿಧೇಯಕ ಮಂಡನೆ
ಈಗಿನ ಪರಿಷ್ಕೃತ ಯಶಸ್ವಿನಿ ಯೋಜನೆಯಡಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ನೆಟ್‌ವರ್ಕ್ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ನಿಗದಿತವಾಗಿ ಪಾವತಿಸುತ್ತ ಬಂದಿದ್ದು ಜನವರಿ 2023ರಿಂದ ಆಗಸ್ಟ್ 2023ರವರೆಗೆ 8 ಕಂತುಗಳಲ್ಲಿ 39 ಕೋಟಿ ರೂ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಚಿವರು ಇದೆ ವೇಳೆ ಉತ್ತರಿಸಿದರು.