ಬ್ಯಾಂಕ್ ಲಿಂಕೇಜ್ ಹಾಗೂ ಗುಂಪುಗಳ ಒಕ್ಕೂಟ ರಚನೆ
ಬೆಂಗಳೂರು: ಕೇಂದ್ರ ಪುರಸ್ಕೃತ ರಾಷ್ಟ್ರೀಯ ನಗರ ಜೀವನೋಪಾಯ (ಡೇ-ನಲ್ಮ್) ಯೋಜನೆಯಡಿಯಲ್ಲಿ 2023-24ನೇ ಸಾಲಿಗೆ ಸ್ವ-ಸಹಾಯ ಗುಂಪುಗಳ ರಚನೆ, ಸ್ವಯಂ ಉದ್ಯೋಗ, ಎಸ್.ಹೆಚ್.ಜಿ ಗಳಿಗೆ ಬ್ಯಾಂಕ್ ಲಿಂಕೇಜ್ ಹಾಗೂ ಗುಂಪುಗಳ ಒಕ್ಕೂಟ ರಚನೆಗೆ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವಯೋಮಿತಿ ಅರ್ಹ ಅಭ್ಯರ್ಥಿಗಳು 18 ರಿಂದ 45 ವರ್ಷದೊಳಗಿರಬೇಕು. ಬಿಪಿಎಲ್ ಕುಟುಂಬದ ಮಹಿಳಾ ಹಾಗೂ ಪುರುಷ ಫಲಾನುಭವಿಗಳು ಚಿಕ್ಕಬಾಣಾವರ ಪುರಸಭೆ ಕಾರ್ಯಾಲಯದ ಡೇ-ನಲ್ಮ್ ಶಾಖೆ ಇಲ್ಲಿ ಅರ್ಜಿಗಳನ್ನು ಪಡೆದು ಸೂಕ್ತ ದಾಖಲೆಗಳೊಂದಿಗೆ ಡಿಸೆಂಬರ್ 28 ರೊಳಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಚಿಕ್ಕಬಾಣಾವರ ಪುರಸಭೆ ಕಾರ್ಯಾಲಯ, ಸಂತೇಬೀದಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆ ಇಲ್ಲಿ ಸಂಪರ್ಕಿಸಬಹುದು ಎಂದು ಚಿಕ್ಕಬಾಣಾವರ ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.