ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ನರ್ಸ್/ಮಹಿಳಾ ಹೋಮ್ ಗಾರ್ಡ ನೇಮಕ
ಬೆಳಗಾವಿ: ಸುವರ್ಣವಿಧಾನಸೌಧದಲ್ಲಿ ನಡೆದ ಹದಿನಾರನೇ ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2023-24ನೇ ಸಾಲಿನ ಮೊದಲನೇ ಹಾಗೂ ಮಧ್ಯೆಂತರ ವರದಿಯನ್ನು ಒಪ್ಪಿಸಲಾಗಿದೆ ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಆಗಿರುವ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರ ವಸತಿ ನಿಲಯಗಳಿಗೆ ನರ್ಸ್/ಮಹಿಳಾ ಹೋಮ್ ಗಾರ್ಡ ನೇಮಕ ಮಾಡಿಕೊಳ್ಳಲು, ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನದ ಪಾಲನ್ನು ನೇರವಾಗಿ ಶಿಕ್ಷಣ ಸಂಸ್ಥೆಗಳಿಗೆ ನೀಡಲು, ವಿದ್ಯಾಸಿರಿ ಯೋಜನೆಯನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಕ್ಕೆ ಸಹ ಜಾರಿ ತರಲು ಶಿಫಾರಸ್ಸು ಮಾಡಲಾಗಿದೆ ಎಂದರು.
ಹೊರಗುತ್ತಿಗೆಯಲ್ಲಿ ಮೀಸಲು ನೀಡಲು ಹೊಸ ಕಾಯಿದೆ
ಅತಿಥಿ ಶಿಕ್ಷಕರನ್ನು ಪಡೆಯುವಾಗ ಮೀಸಲಾತಿ ಕಲ್ಪಿಸುವುದು, ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡದಿದ್ದಲ್ಲಿ ಕ್ರಮ ಕೈಗೊಳ್ಳಲು ಪ್ರತ್ಯೇಕ ಕಾಯಿದೆ ರೂಪಿಸಲು, ಹೊರಗುತ್ತಿಗೆಯಲ್ಲಿ ಮೀಸಲು ನೀಡಲು ಹೊಸ ಕಾಯಿದೆ ರೂಪಿಸುವುದು, ಶಿಕ್ಷಣ ಮತ್ತು ಹಾಸ್ಟೇಲ್ ಗಳಿಗೆ ಮೂಲಭೂತ ಸೌಕರ್ಯ ಕೊರತೆಯನ್ನು ಸರಿಪಡಿಸುವುದು, ಸ್ಥಳೀಯ ಸಂಸ್ಥೆಗಳ 24.1 ಅನುದಾನದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ವಿಶ್ವ ವಿದ್ಯಾನಿಲಯಗಳ ಹಾಸ್ಟೇಲ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಶಿಫಾರಸ್ಸಿನಲ್ಲಿ ಸೇರಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಾರಕ್ಕೆ 5 ಮೊಟ್ಟೆ ಕೊಡುವುದು, ಹಲವಾರು ಇಲಾಖೆಗಳಲ್ಲಿ ಸಿ ಅಂಡ್ ಆರ್ ನಿಯಮಗಳು, ರೋಸ್ಟರ್ ಮತ್ತು ಜೇಷ್ಠತಾ ಪಟ್ಟಿಗಳನ್ನು ಮಾಡಿಕೊಳ್ಳದಿರುವುದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಾ.ನಂಜುಂಡಪ್ಪ ವರದಿಯನ್ನು ಪ್ರಸ್ತುತ ಕಾಲಘಟ್ಟದ ಆಧಾರದ ಮೇಲೆ ಅಭಿವೃದ್ಧಿಪಡಿಸುವುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಮಿತಿಯು ವರದಿಯಲ್ಲಿ ಶಿಫಾರಸ್ಸು ಮಾಡಿದೆ ಎಂದು ಅವರು ತಿಳಿಸಿದರು.
ಬಿಎಂಟಿಸಿಗೆ ಮಾರ್ಚ್ ಅಂತ್ಯಕ್ಕೆ 921 ಎಲೆಕ್ಟ್ರಿಕಲ್ ಬಸ್
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಯೋಜನೆಗಳಡಿ ವಿವಿಧ ಇಲಾಖೆಗಳಿಗೆ ಬಿಡುಗಡೆಯಾದ ಅನುದಾನದ ಸದ್ಬಳಕೆ ಹಾಗೂ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರುವ ಕುರಿತು ಸಮಿತಿಯು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿಯನ್ನು ಮಂಡಿಸಲಾಗುತ್ತಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿಯಿಂದ ವಿವಿಧ ಇಲಾಖೆಗಳಲ್ಲಿ ಅಧ್ಯಯನ ನಡೆಸಲಾಗಿದೆ. ಈ ಯೋಜನೆಯಡಿ ಬಿಡುಗಡೆ ಮಾಡಲಾದ ಅನುದಾನ ಸಮರ್ಪಕವಾಗಿ ಬಳಕೆ ಆಗದೇ ಇರುವುದರ ಬಗ್ಗೆ ಕ್ರಮ ಕೈಗೊಳ್ಳದಿರುವುದು ಸಹ ಕಂಡು ಬಂದಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿವಿಧ ನಿಗಮ ಮಂಡಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಬ್ಯಾಕ್‌ಲಾಗ್ ಹುದ್ದೆಗಳ ವಿರುದ್ಧ ಹೊರಗುತ್ತಿಗೆಯಿಂದ ಭರ್ತಿ ಮಾಡುತ್ತಿದ್ದು ಮೀಸಲಾತಿ ಪಾಲಿಸದಿರುವ ಕುರಿತು ಸಹ ಶಿಫಾರಸ್ಸು ಮಾಡಲಾಗಿದೆ.
ಪಂಚಾಯತ್ ಸದಸ್ಯರುಗಳಿಗೆ ಜಿಲ್ಲಾವಾರು ತರಬೇತಿ ನೀಡುವುದು, ಜೆಜೆಎಂ ಯೋಜನೆಯಡಿ ಎಸ್ಸಿಪಿ ಟಿಎಸ್ಪಿ ಅನುದಾನ ಬಳಸುತ್ತಿರುವುದು, ಎಲ್ಲಾ ಒಡೆತನ ಯೋಜನೆಯಡಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಭೂಮಿಯನ್ನು ನೀಡಲು ಅನುದಾನ ಕೊರತೆ ಇರುವುದು, ಎಲ್ಲಾ ನಿಗಮ ಮಂಡಳಿಗಳಲ್ಲಿರುವ ಯೋಜನೆಗಳನ್ನು ಇಂದಿನ ಕಾಲಘಟ್ಟಕ್ಕೆ ಹೊಸ ಯೋಜನೆಗಳ ರೂಪುರೇಷಗಳು, ಎನ್‌ಎಸ್‌ಐಸಿ ಮಾದರಿ ರಾಜ್ಯದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಇಎಂಡಿ ವಿನಾಯಿತಿ ನೀಡುವ ಕುರಿತಿ ಕಾಯ್ದೆ ತಿದ್ದುಪಡಿರುವುದು.
ಕ್ರೀಡಾ ಶಾಲೆಗಳ ದೈಹಿಕ ಶಿಕ್ಷಕರ ನೇಮಕ
ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತು ಸಂಪೂರ್ಣ ತನಿಖೆ
ಎಲ್ಲಾ ನಿಗಮ ಮಂಡಳಿಗಳಲ್ಲಿರುವ ಹಳೆಯ ಯೋಜನೆಗಳನ್ನು ಇಂದಿನ ಕಾಲಘಟಕ್ಕೆ ತಕ್ಕಂತೆ ಹೊಸ ರೂಪು ರೇಷೆಗಳನ್ನು ಸಿದ್ಧಪಡಿಸಲು ತಿಳಿಸಲಾಗಿದೆ. ಕಳೆದ 5 ವರ್ಷಗಳಲ್ಲಿ 92 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಸಂಪೂರ್ಣ ತನಿಖೆ ಕೈಗೊಳ್ಳಲು ಸಹ ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಣ ಮತ್ತು ಹಾಸ್ಟೇಲ್ ಗಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಬಗ್ಗೆ, ವಿವಿಧ ಇಲಾಖೆಗಳಲ್ಲಿ ಎಸ್‌ಸಿಎಸ್‌ಪಿ ಟಿಎಸ್ಪಿ ಅನುದಾನ ಬಳಕೆ ಮಾಡದಿರುವುದು, ಇಂಧನ ಇಲಾಖೆಗೆ ಎಸ್‌ಸಿಎಸ್‌ಪಿ ಟಿಎಸ್ಪಿ ಹೆಚ್ಚುವರಿ ಅನುದಾನ 1.566 ಕೋಟಿಯನ್ನು ಸಮಾಜ ಕಲ್ಯಾಣ/ ಶಿಕ್ಷಣ ಇಲಾಖೆಗೆ ನೀಡಲು, ಹಾಸ್ಟೇಲ್ ವಸತಿ ಶಾಲೆಗಳ ಕಟ್ಟಡಗಳ ನಿರ್ಮಾಣಕ್ಕೆ ಅನುದಾನದ ಕೊರತೆ ಬಗ್ಗೆ ಪ್ರಸ್ತಾಪಿಸಲಾಗಿದೆ.
ಅಧಿನಿಯಮದ ಪ್ರಕರಣ 7 (ಡಿ) ಇಂದಾಗಿ ಎಸ್‌ಸಿಎಸ್‌ಪಿ ಟಿಎಸ್ಪಿ ಅನುದಾನ ಈ ಸಮುದಾಯಕ್ಕೆ ತಲುಪದಿರುವುದು, 7(ಬಿ) 7 (ಸಿ) ಗಳಿಗೆ ಸೂಕ್ತ ನಿಯಮ ರೂಪಿಸುವುದು, ಸೆಕ್ಷನ್ 24 ಪ್ರಕಾರ ಎಸ್‌ಸಿಎಸ್‌ಪಿ ಟಿಎಸ್ಪಿ ಅನುದಾನ ಬಳಕೆ ಮಾಡದಿರುವವರ ವಿರುದ್ಧ ಕ್ರಮ ವಹಿಸುವುದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಯೋಜನೆಯಡಿ ಆಧುನಿಕ ಶಿಕ್ಷಣದ ಜೊತೆಗೆ ಶಿಕ್ಷಣ ಮತ್ತು ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಈ ಯೋಜನೆಯಡಿ ಬಳಕೆ ಆಗದೇ ಇರುವ ಅನುದಾವನ್ನು ಬಳಸಿಕೊಳ್ಳಲು ಸಮಿತಿಯು ಶಿಫಾರಸ್ಸು ಮಾಡಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ., ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ ಹಾಗೂ ಶಾಂತಾರಾಮ ಬುಡ್ನಸಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.