66
ಸುವರ್ಣ ವಿಧಾನಸೌಧದಲ್ಲಿ ಸಚಿವರ ಸಭೆ
ಬೆಳಗಾವಿ: ಕುಣಿಗಲ್ ತಾಲ್ಲೂಕಿನಲ್ಲಿ ಇರುವ ಪಶುಸಂಗೋಪನೆ ಇಲಾಖೆಯ ೪೨೧.೩೨ ಎಕರೆ ಸ್ಟಡ್ಫಾರ್ಮ್ ಜಾಗ ಬಳಸಿಕೊಂಡು ಇಂಟಿಗ್ರೇಟೆಡ್ ಟೌನ್ಶಿಪ್ ನಿರ್ಮಾಣ ಮಾಡುವ ಕುರಿತು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಬೈರತಿ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಅವರುಗಳ ಅಧ್ಯಕ್ಷತೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಿನ್ನೆ ಸಭೆ ಜರುಗಿತು.
ಕುಣಿಗಲ್ ಶಾಸಕ ಡಾ.ಕೆ.ರಂಗನಾಥ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎಂ.ಎನ್. ಅಜಯ್ ನಾಗಭೂಷಣ, ಪಶುಸಂಗೋಪನೆ ಇಲಾಖೆಗೆ ಕಾರ್ಯದರ್ಶಿ ಸಲ್ಮಾ ಕೆ. ಫಾತಿಮಾ, ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತು ಉಪಕಾರ್ಯದರ್ಶಿ ರಘುನಂದನ್ ಉಪಸ್ಥಿತರಿದ್ದರು.