125
1.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪುವ ಗುರಿ
ಬೆಂಗಳೂರು: ವಿದ್ಯಾರ್ಥಿಗಳಿಗೆ ವೃತ್ತಿ ಜೀವನದ ಆಯ್ಕೆ ಗೊಂದಲ ನಿವಾರಣೆಗೆ ಸಹಾಯಕವಾಗುವ ’ಕೆರಿಯರ್ ಉತ್ಸವ್-2023’ ನಗರದ ಅರಮನೆ ಮೈದಾನದಲ್ಲಿ ಇಂದಿನಿಂದ ಎರಡು ದಿನ ನಡೆಯಲಿದೆ.
ಕಳೆದ 10 ವರ್ಷಗಳಿಂದ ಕೆರಿಯರ್ ಉತ್ಸವ್ ನಡೆಯುತ್ತಿದ್ದು, ಭಾರತ ಮತ್ತು ಸಂಯುಕ್ತ ಅರಬ್ ಒಕ್ಕೂಟದ ಸಹಸ್ರಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.
ಮೇಳದಲ್ಲಿ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು, ಅಣಕು ಪರೀಕ್ಷೆ, ಮಾನಸಿಕ ಸಾಮರ್ಥ್ಯ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಯಶಸ್ವಿ ವೃತ್ತಿ ಜೀವನಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ.
ಮೇಳಕ್ಕೆ ಉಚಿತ ಪ್ರವೇಶ ಹಾಗೂ ನೋಂದಣಿಗೆ ಅವಕಾಶವಿದ್ದು, ವಿದ್ಯಾರ್ಥಿಗಳೊಂದಿಗೆ ನೇರವಾಗಿ ಸಂವಾದ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಶೈಕ್ಷಣಿಕ ಮೇಳ ಈ ಬಾರಿ 1.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಿದೆ.