ಆತಂಕದ ವಾತಾವರಣ ಸೃಷ್ಠಿ: ಕೆಲ ಹೊತ್ತು ಅಲ್ಲೋಲ-ಕಲ್ಲೋಲ
ನವದೆಹಲಿ:ಲೋಕಸಭಾ ಕಲಾಪಕ್ಕೆ ನುಗ್ಗಿದ ಯುವಕರು ರಾಜ್ಯದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಪಾಸ್ ಪಡೆದುಕೊಂಡಿದ್ದರು.
ಸಿಂಹ ಅವರ ಕಚೇರಿಯಿಂದಲೇ ಪ್ರವೇಶ ಪತ್ರ ಪಡೆದು ಸಂದರ್ಶಕರ ಗ್ಯಾಲರಿಗೆ ತೆರಳಿ ಅಲ್ಲಿಂದ ಸದನದೊಳಕ್ಕೆ ಜಿಗಿದು ರಾದ್ಧಾಂತ ಸೃಷ್ಠಿಸಿದ್ದಾರೆ.
ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿರುವ ಸಿಂಹ ಅವರು, ಈ ಆಗಂತುಕರು ತಮ್ಮ ಕ್ಷೇತ್ರದವರೆಂದು, ಕಚೇರಿಯಿಂದ ಎರಡು ಪಾಸ್ ಪಡೆದಿದ್ದರು, ಈ ರೀತಿಯ ಪುಂಡಾಟಿಕೆ ನಡೆಸುತ್ತಾರೆ ಎಂಬುದು ನನಗೆ ತಿಳಿದಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಇದರ ಮಧ್ಯೆ ಮನೋರಂಜನ್ ತಂದೆ ದೇವರಾಜೇ ಗೌಡ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ನನ್ನ ಮಗ ಇಂತಹ ಕೃತ್ಯ ಎಸಗುತ್ತಾನೆಂದು ತಿಳಿದಿರಲಿಲ್ಲ.
ತಪ್ಪು ಮಾಡಿದ್ದರೆ ಪುತ್ರನ ಗಲ್ಲಿಗೇರಿಸಿ
ಆತ ತಪ್ಪು ಮಾಡಿದ್ದರೆ ಪುತ್ರನ್ನು ಗಲ್ಲಿಗೇರಿಸುವಂತೆ ತಿಳಿಸಿದ್ದಾರೆ, ಮೂರ‍್ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ಹೋಗುತ್ತೇನೆಂದು ಹೇಳಿ ಹೋದವನು ದೆಹಲಿಯಲ್ಲಿ ಇಂತಹ ಕೃತ್ಯ ಎಸಗಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.
ಆತ ಇಂಜಿನಿಯರಿಂಗ್ ವಿದ್ಯಾರ್ಥಿ, ಕೆಲವೆಡೆ ಕೆಲಸಕ್ಕೆ ಸೇರುತ್ತಿದ್ದ ಮತ್ತೆ ಬಿಡುತ್ತಿದ್ದ, ಏನು ಕೆಲಸ ಮಾಡುತ್ತಿದ್ದೀಯ ಎಂದರೆ ಸಮಾಜ ಸೇವೆ ಎನ್ನುತ್ತಿದ್ದ.
ಸ್ವಾಮಿ ವಿವೇಕಾನಂದರ ಅನುಯಾಯಿ
ಬಟ್ಟೆಯನ್ನೂ ಖರೀದಿಸದೆ, ಪುಸ್ತಕಗಳನ್ನು ಖರೀದಿಸುತ್ತಿದ್ದ, ಸುಮಾರು ನಲ್ವತ್ತು ಸಾವಿರ ಪುಸ್ತಕಗಳನ್ನು ಖರೀದಿಸಿದ್ದ, ಅವನು ಸ್ವಾಮಿ ವಿವೇಕಾನಂದರ ಅನುಯಾಯಿಯಾಗಿದ್ದ, ಆದರೆ, ಇಂತಹ ಕೃತ್ಯ ಎಸಗುತ್ತಾನೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ.
ಮದುವೆ ಮಾಡಿಕೋ ಎಂದರೆ ಮದುವೆಯನ್ನೂ ಮಾಡಿಕೊಂಡಿರಲಿಲ್ಲ, ನಮ್ಮದು ರಾಜಕೀಯ ಕುಟುಂಬ, ನಾವು ಮೂಲತಃ ಹಾಸನ ಜಿಲ್ಲೆ ಅರಕಲಗೂಡಿನವರು, ನಾವು ಮತ್ತು ಪ್ರತಾಪ್ ಸಿಂಹ ಒಳ್ಳೆ ಸ್ನೇಹಿತರು, ಅವರು ನೀಡಿದ ಪಾಸ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ.
ನಾವು ರಾಜಕೀಯದಲ್ಲಿದ್ದರೂ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿರಲಿಲ್ಲ, ದೇವೇಗೌಡರೇ ಇವನಿಗೆ ಇಂಜಿನಿಯರಿಂಗ್ ಸೀಟ್ ಕೊಡಿಸಿದ್ದರು.
ಇವನಿಗೆ ಯಾವಾಗಲೂ ಸಮಾಜಕ್ಕೆ ಏನಾದರೂ ಮಾಡಬೇಕೆಂಬ ತುಡಿತ ಇತ್ತು, ಎಲ್ಲಿಗೋ ಹೋಗುತ್ತಿದ್ದ, ಬರುತ್ತಿದ್ದ, ಓದುತ್ತಿದ್ದ, ನಮಗೆ ಯಾವುದೇ ನಿರ್ದಿಷ್ಟ ಮಾಹಿತಿ ನೀಡುತ್ತಿರಲಿಲ್ಲ ಎಂದರು.
3 comments
[…] ರಾಜ್ಯ […]
[…] ರಾಜ್ಯ […]
[…] ರಾಜ್ಯ […]