ಗ್ರಾಹಕರು ಸೂಚಿಸುವ ಸ್ಥಳಕ್ಕೇ ಪಾರ್ಸೆಲ್
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ತನ್ನ ಆದಾಯ ಹೆಚ್ಚಿಸಿಕೊಳ್ಳಲು ಸೋಮವಾರದಿಂದ ಕಾರ್ಗೋ ಸೇವೆ ಆರಂಭಿಸುತ್ತಿದೆ.
ವಿಮಾನ ನಿಲ್ದಾಣ, ಬಂದರು, ರೈಲ್ವೆ ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ ತಲುಪಬೇಕಾದ ಜಾಗಕ್ಕೆ ಕೆಎಸ್‌ಆರ್‌ಟಿಸಿ ಟ್ರಕ್‌ಗಳು ಪಾರ್ಸೆಲ್ ಒಯ್ಯಲಿವೆ.
ರಾಜ್ಯಾದ್ಯಂತ 20 ಟ್ರಕ್‌ಗಳು ಸೇವೆಗೆ ಲಭ್ಯ
ಆರಂಭದಲ್ಲಿ ರಾಜ್ಯಾದ್ಯಂತ 20 ಟ್ರಕ್‌ಗಳು ಸೇವೆಗೆ ಲಭ್ಯ ಇರಲಿವೆ. ಇದುವರೆಗೂ ರಾಜ್ಯ ರಸ್ತೆ ಸಾರಿಗೆಯ ಆಯ್ದ ಬಸ್‌ಗಳಲ್ಲಿ ಮಾತ್ರ ಪಾರ್ಸೆಲ್ ಸೇವೆಗೆ ಅವಕಾಶ ಇತ್ತು.
ಗ್ರಾಹಕರು ನಿಗದಿತ ಬಸ್ ನಿಲ್ದಾಣಗಳಿಗೆ ತೆರಳಿ ಪಾರ್ಸೆಲ್‌ಗಳನ್ನು ಪಡೆದುಕೊಳ್ಳಬೇಕಿತ್ತು. ಇನ್ನು ಮುಂದೆ ಗ್ರಾಹಕರು ಸೂಚಿಸುವ ಸ್ಥಳಗಳಿಗೇ ಸೇವೆ ಲಭ್ಯವಿರಲಿದೆ. ಈಗಾಗಲೇ ಹಲವು ವಾಣಿಜ್ಯ ಸಂಸ್ಥೆಗಳು ಕಾರ್ಗೋ ಸೇವೆ ಪಡೆಯಲು ಮುಂದೆ ಬರುತ್ತಿವೆ.
ಪ್ರತಿ ಟ್ರಕ್ ಐದರಿಂದ ಆರು ಟನ್ ಸರಕು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಕಾರ್ಗೋ ಸಾರಿಗೆ ಜಾಲವನ್ನು ಮತ್ತಷ್ಟು ವಿಸ್ತರಿಸಿ ಹೆಚ್ಚು ಸೇವೆ ಒದಗಿಸಲು ಸಂಸ್ಥೆ ಇಚ್ಛಿಸಿದೆ.
1 comment
[…] ರಾಜ್ಯ […]