ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಆಗ್ರಹ
ಬೆಂಗಳೂರು: ಬಿಜೆಪಿ ಆಡಳಿತ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಕೋವಿಡ್ ಹಗರಣ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಆ ಪಕ್ಷದ ನಾಯಕರು ಏಕೆ ಮೌನ ವಹಿಸಿದ್ದಾರೆ ಎಂದು ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಪ್ರಶ್ನಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಯತ್ನಾಳ್ ಹೇಳಿಕೆಯನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಪ್ರತಿಯೊಂದಕ್ಕೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವ ಬಿಜೆಪಿ ನಾಯಕರು ಯತ್ನಾಳ್ ಆರೋಪಕ್ಕೆ ಮೌನ ವಹಿಸಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದಿದ್ದಾರೆ.
ತನಿಖೆಗೆ ಕೇಂದ್ರ ಏಕೆ ಆದೇಶ ಮಾಡಿಲ್ಲ
ಪ್ರಧಾನಿ ನರೇಂದ್ರ ಮೋದಿ “ನಾ ಖಾವೂಂಗ, ನಾ ಖಾನೆ ಧೂಂಗ ಎನ್ನುತ್ತಾರೆ, ನಿಮ್ಮದೇ ಪಕ್ಷದ ನಾಯಕ ಗಂಭೀರ ಆರೋಪ ಮಾಡಿದ್ದರೂ ತನಿಖೆಗೆ ಕೇಂದ್ರ ಸರ್ಕಾರ ಏಕೆ ಆದೇಶ ಮಾಡಿಲ್ಲ.
ಭ್ರಷ್ಟಾಚಾರ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವ ಇಚ್ಛಾಶಕ್ತಿ ಇದ್ದರೆ ಯತ್ನಾಳ್ ದಾಖಲೆಗಳನ್ನು ಬಿಡುಗಡೆ ಮಾಡಬೇಕು, ಹಿಟ್ ಅಂಡ್ ರನ್ ಮಾಡಬಾರದು.
ವಿಧಾನಸಭಾ ಚುನಾವಣೆಯಲ್ಲಿ ಪಾಠ ಕಲಿಸದಂತೆ, ಲೋಕಸಭಾ ಚುನಾವಣೆಯಲ್ಲೂ ಮತದಾರರು ಬಿಜೆಪಿಗೆ ಪಾಠ ಕಲಿಸುವುದು ಶತಃಸಿದ್ಧ ಎಂದಿದ್ದಾರೆ.