Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಪರಮೇಶ್ವರ್ ಕಿವಿಗೆ ಬಿತ್ತು ಪರಮ ರಹಸ್ಯ?

by admin January 8, 2024
written by admin January 8, 2024 0 comments 5 minutes read
5FacebookTwitterPinterestEmail
150

ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ವೆಸ್ಟ್ ಎಂಡ್ ಹೋಟೆಲಿನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ನೋಡಲು ಕರ್ನಾಟಕದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೋಗಿದ್ದಾರೆ.

ಅವತ್ತು ವೇಣುಗೋಪಾಲ್ ಅವರ ಜತೆ ರಾಜ್ಯ ರಾಜಕೀಯದ ಬಗ್ಗೆ ಚರ್ಚಿಸಿದ ಪರಮೇಶ್ವರ್, ಮಾತಿನ ಮಧ್ಯೆ; ಸಾರ್ ನಿಮ್ಮ ಬಳಿ ಒಂದು ವಿಷಯ ಕೇಳಬೇಕು ಅಂತ ತುಂಬ ದಿನಗಳಿಂದ ಯೋಚಿಸುತ್ತಿದ್ದೆ ಎಂದಿದ್ದಾರೆ. ಪರಮೇಶ್ವರ್ ಅವರ ಮಾತು ಕೇಳಿ ಅಚ್ಚರಿಗೊಂಡ ವೇಣುಗೋಪಾಲ್ ಅವರು, ಖಂಡಿತ ಕೇಳಿ ಪರಮೇಶ್ವರ್ ಜೀ, ಅದರಲ್ಲೇಕೆ ಸಂಕೋಚ ಅಂತ ಹೇಳಿದ್ದಾರೆ.

ವೇಣುಗೋಪಾಲ್ ಅವರು ಇಷ್ಟು ಹೇಳಿದ್ದೇ ತಡ ಮುಖ್ಯ ವಿಷಯಕ್ಕೆ ಬಂದ ಪರಮೇಶ್ವರ್ ಅವರು:ಸಾರ್, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಅಂತ ದಿಲ್ಲಿಯಲ್ಲಿ ನೀವು ಚರ್ಚಿಸಿದಿರಲ್ಲ, ಆ ಸಂದರ್ಭದಲ್ಲಿ ಈ ಹುದ್ದೆಯನ್ನು ಇಬ್ಬರಿಗೆ ಹಂಚಿಕೆ ಮಾಡಬೇಕು ಅಂತ ಹೈಕಮಾಂಡ್ ಏನಾದರೂ ನಿರ್ಧಾರ ತೆಗೆದುಕೊಂಡಿದೆಯೇ ಅಂತ ಪ್ರಶ್ನಿಸಿದ್ದಾರೆ.

ಪರಮೇಶ್ವರ್ ಅವರ ಮಾತಿನಿಂದ ಇನ್ನಷ್ಟು ಅಚ್ಚರಿಗೊಂಡ ಕೆ.ಸಿ.ವೇಣುಗೋಪಾಲ್ ಅವರು, ಇದೇಕೆ ಇದ್ದಕ್ಕಿದ್ದಂತೆ ಈ ಪ್ರಶ್ನೆ ಪರಮೇಶ್ವರ್ ಜೀ, ನಾಯಕತ್ವದ ವಿಷಯದ ಬಗ್ಗೆ ಯಾವ ಗೊಂದಲವೂ ಬೇಡ, ಈ ಕುರಿತಂತೆ ಯಾರೂ ಚರ್ಚಿಸಬಾರದು ಅಂತ ಈಗಾಗಲೇ ನಾವು ಎಲ್ಲರಿಗೂ ಕಟ್ಟು ನಿಟ್ಟಾಗಿ ಹೇಳಿದ್ದೇವಲ್ಲ, ಅಂದ ಮೇಲೆ ಈ ಪ್ರಶ್ನೆ ಏಕೆ ಅಂತ ಕೇಳಿದ್ದಾರೆ.

ಹಾಗಲ್ಲ ಸಾರ್, ಹಾಗೊಂದು ವೇಳೆ ಹೈಕಮಾಂಡ್ ಇಂತಹ ನಿರ್ಧಾರ ತೆಗೆದುಕೊಂಡಿದ್ದರೆ ಶುರುವಿನಲ್ಲೇ ಕ್ಲ್ಯಾರಿಫೈ ಮಾಡಿಬಿಡಿ. ಹಾಗೇನಾದರೂ ನೀವು ಎರಡೂವರೆ ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೆಳಗಿಳಿಸಿ ಪರ್ಯಾಯ ನಾಯಕರನ್ನು ತಂದು ಕೂರಿಸುವುದೇ ಆದರೆ ನಿಮ್ಮ ಗಮನದಲ್ಲಿರಲಿ, ಮುಂದಿನ ಮುಖ್ಯಮಂತ್ರಿ ಹುದ್ದೆಗೆ ನಾನೂ ಸೀರಿಯಸ್ ಕಂಟೆಂಡರ್ ಎಂದಿದ್ದಾರೆ.

ಪರಮೇಶ್ವರ್ ಅವರಾಡಿದ ಮಾತು ಕೇಳಿ ಇನ್ನಷ್ಟು ವಿಸ್ಮಿತರಾದ ವೇಣುಗೋಪಾಲ್, ಈಗ ಆ ಮಾತೆಲ್ಲ ಏಕೆ ಬಿಡಿ ಪರಮೇಶ್ವರ್ ಜೀ, ಅಂತಹ ಸಂದರ್ಭ ಬಂದಾಗ ತಾನೇ ಆ ಪ್ರಶ್ನೆ ಸದ್ಯಕ್ಕೆ ಹೈಕಮಾಂಡ್ ಈ ಕುರಿತು ಅಧಿಕೃತ ತೀರ್ಮಾನವನ್ನೇನೂ ತೆಗೆದುಕೊಂಡಿಲ್ಲವಲ್ಲ ಎಂದಿದ್ದಾರಾದರೂ ಪಟ್ಟು ಬಿಡದ ಪರಮೇಶ್ವರ್ ಅವರು, ಸಾರ್, ಇದು ಸುಮ್ಮನಿರುವ ವಿಷಯವಲ್ಲ, ನಾಳೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ. ಅವರ ಜಾಗಕ್ಕೆ ಇಂತವರನ್ನು ತರಲು ಪಕ್ಷ ನಿರ್ಧರಿಸಿದೆ ಅಂತ ನೀವು ಷಾಕ್ ಕೊಡುವುದು ಬೇಡ, ಹೀಗಾಗಿ ಈ ವಿಷಯವನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ಹಾಗೊಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಪರ್ಯಾಯ ನಾಯಕರನ್ನು ಸಿಎಂ ಹುದ್ದೆಗೆ ತರುವುದೇ ಹೈಕಮಾಂಡ್ ಉದ್ದೇಶವಾದರೆ ನಾನೂ ಸಿಎಂ ಹುದ್ದೆಯ ಆಕಾಂಕ್ಷಿ. ಹೀಗಾಗಿ ಅಂತಹ ಸಂದರ್ಭ ಎದುರಾದರೆ ವಿಷಯ ಶಾಸಕಾಂಗ ಸಭೆಯಲ್ಲಿ ಇತ್ಯರ್ಥವಾಗಲಿ, ಯಾರಿಗೆ ಹೆಚ್ಚು ಶಾಸಕರ ಬೆಂಬಲ ಇದೆಯೋ ಅವರು ಮುಖ್ಯಮಂತ್ರಿಯಾಗಲಿ, ಅಂದ ಹಾಗೆ ನಾವು ಕೂಡಾ ಪಕ್ಷಕ್ಕಾಗಿ ದುಡಿದವರು. ೨೦೧೩ ರಲ್ಲಿ ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿದಾಗ ಕೆಪಿಸಿಸಿ ಅಧ್ಯಕ್ಷನಾಗಿದ್ದವನು ನಾನು. ಅವತ್ತು ಪಕ್ಷವನ್ನು ಅಧಿಕಾರಕ್ಕೆ ತರಲು ನಾನೆಷ್ಟು ಕಷ್ಟ ಪಟ್ಟಿದ್ದೇನೆ ಅಂತ ನಿಮಗೂ ಗೊತ್ತು.

ಆದರೆ ಅವತ್ತು ನಾನು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದೆ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಹುದ್ದೆಯಿಂದ ದೂರವಾಗಬೇಕಾಯಿತು. ನನ್ನ ನಾಯಕತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೂ ಕನಿಷ್ಟ ಉಪಮುಖ್ಯಮಂತ್ರಿ ಹುದ್ದೆ ಪಡೆಯಲು ನಾನು ಐದು ವರ್ಷ ಕಾಯಬೇಕಾಯಿತು. ಆದರೆ ಇನ್ನು ನಾನು ತುಂಬ ಕಾಲ ಕಾಯುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಸಲ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ನಿರ್ಣಯಕ್ಕೇನಾದರೂ ಹೈಕಮಾಂಡ್ ಬಂದರೆ ನಿಶ್ಚಿತವಾಗಿ ನಾನು ಸಿಎಂ ಹುದ್ದೆಯ ರೇಸಿನಲ್ಲಿರುತ್ತೇನೆ.

ಇದನ್ನು ಇವತ್ತು ನಿಮಗೇಕೆ ಹೇಳಿದೆ ಎಂದರೆ ನಾಳೆ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುತ್ತಾರೆ, ಅವರ ಜಾಗಕ್ಕೆ ಇಂತವರನ್ನು ತಂದು ಕೂರಿಸಲು ಹೈಕಮಾಂಡ್ ಮೊದಲೇ ನಿರ್ಣಯಿಸಿತ್ತು ಅಂತ ನೀವು ಹೇಳಿದರೆ ಅದನ್ನು ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ. ಹಾಗೊಂದು ವೇಳೆ ಅಧಿಕಾರ ಹಂಚಿ ಕೊಡಲು ಹೈಕಮಾಂಡ್ ಈಗಾಗಲೇ ತೀರ್ಮಾನ ಮಾಡಿದ್ದರೆ ಈಗಲೇ ಅದನ್ನು ಹೇಳಿ ಬಿಡಿ ಅಂತ ಪರಮೇಶ್ವರ್ ಸ್ಪಷ್ಟವಾಗಿ ಹೇಳಿದ್ದಾರೆ.

ಪರಮೇಶ್ವರ್ ಹೀಗೆ ಕಡ್ಡಿ ಮುರಿದಷ್ಟು ಸ್ಪಷ್ಟವಾಗಿ ಮಾತನಾಡಿದ್ದರಿಂದ ಸ್ವಲ್ಪ ಹೊತ್ತು ಮೌನಕ್ಕೆ ಜಾರಿದ ವೇಣುಗೋಪಾಲ್, ನೋ..ನೋ.. ನಿರ್ದಿಷ್ಟ ಅವಧಿಯ ನಂತರ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕು ಅಂತ ಹೈಕಮಾಂಡ್ ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ಆ ಬಗ್ಗೆ ತುಂಬ ಯೋಚಿಸುವುದು ಬೇಡ ಅಂತ ಮಾತಿಗೆ ತೆರೆ ಎಳೆದಿದ್ದಾರೆ.

ಯಾವಾಗ ವೇಣುಗೋಪಾಲ್ ಅವರ ಜತೆ ಈ ಮಾತುಕತೆ ನಡೆಯಿತೋ, ಇದಾದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಿಎಂ ಹುದ್ದೆಯ ರೇಸಿಗೆ ಮತ್ತಷ್ಟು ತೀವ್ರವಾಗಿ ಅಣಿಯಾಗತೊಡಗಿದ್ದಾರೆ.
ಅಂದ ಹಾಗೆ ಇತ್ತೀಚೆಗೆ ಪರಮೇಶ್ವರ್ ಅವರ ನಿವಾಸದಲ್ಲಿ, ಮತ್ತು ಕಳೆದ ಗುರುವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ನಡೆದ ಭೋಜನ ಕೂಟಗಳಿಗೆ ಇದ್ದ ಅಜೆಂಡಾ ಬೇರೇನೂ ಅಲ್ಲ, ಸಿದ್ಧರಾಮಯ್ಯ ಅವರು ಸಿಎಂ ಹುದ್ದೆಯಿಂದ ಇಳಿಯುವುದೇ ಆದರೆ ಆ ಜಾಗಕ್ಕೆ ಪರಮೇಶ್ವರ್ ಅವರನ್ನು ತಂದು ಕೂರಿಸುವುದು ಹೇಗೆ ಅಂತ ಪ್ಲಾನು ಮಾಡುವುದೇ ಅದರ ಉದ್ದೇಶ.

ವಿಜಯೇಂದ್ರ ಪಾಲಿಗೆ ಹೊಸ ತಲೆನೋವು

ಅಂದ ಹಾಗೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹೊಸ ತಲೆನೋವು ಶುರುವಾಗಿದೆ. ಕಾರಣ, ಪಕ್ಷದ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಸಂಬಂಧ ಅವರು ನೇಮಕ ಮಾಡಿದ್ದ ಉಸ್ತುವಾರಿಗಳು ಕಾಂಕ್ರೀಟ್ ಆಗಿ ಕೆಲಸ ಮಾಡಿಲ್ಲ.

ಅರ್ಥಾತ್, ಆಯಾ ಜಿಲ್ಲೆಯಲ್ಲಿ ಯಾರು ಅಧ್ಯಕ್ಷರಾಗಬೇಕು ಅಂತ ಎರಡು-ಮೂರು ಹೆಸರುಗಳನ್ನು ಶಿಫಾರಸು ಮಾಡಿ ಅಂತ ಈ ಉಸ್ತುವಾರಿಗಳಿಗೆ ಸೂಚಿಸಿದರೆ, ಜಿಲ್ಲಾಧ್ಯಕ್ಷರಾಗಲು ಯಾರ್ಯಾರು ರೇಸಿನಲ್ಲಿದ್ದಾರೆ ಅಂತ ಅವರು ದೊಡ್ಡ ದೊಡ್ಡ ಪಟ್ಟಿ ತಂದುಕೊಟ್ಟಿದ್ದಾರೆ. ಹೀಗಾಗಿ ಅವರು ಶಿಫಾರಸು ಮಾಡಿದ ಹತ್ತು-ಹದಿನೈದು ಮಂದಿ ಆಕಾಂಕ್ಷಿಗಳ ಪಟ್ಟಿಯಲ್ಲಿ ತಲಾ ಒಬ್ಬರನ್ನು ಆಯ್ಕೆ ಮಾಡುವುದು ವಿಜಯೇಂದ್ರ ಅವರಿಗೆ ತಲೆನೋವಾಗಿ ಪರಿಣಮಿಸಿದೆ.

ಈ ಮಧ್ಯೆ ಕೆಲ ಜಿಲ್ಲಾಧ್ಯಕ್ಷರ ನೇಮಕಾತಿ ವಿಷಯದಲ್ಲಿ ವಿಜಯೇಂದ್ರ ಅವರು ಪರ್ಸನಲ್ ಇಂಟ್ರೆಸ್ಟ್ ತೆಗೆದುಕೊಂಡಿದ್ದಾರೆ ಎಂಬ ಮಾತು ಪಕ್ಷದ ಒಳವಲಯಗಳಲ್ಲಿ ಸುನಾಮಿಯಂತೆ ಹರಡಿ ಒಡಕಿನ ಧ್ವನಿ ಕೇಳಿಬರುತ್ತಿದೆ.

ಈ ಪೈಕಿ ಬೆಂಗಳೂರು ಉತ್ತರ ಜಿಲ್ಲೆಗೆ ತಮ್ಮ ಆಪ್ತ ತಮ್ಮೇಶ್ ಗೌಡರನ್ನು ತಂದು ಕೂರಿಸಲು ವಿಜಯೇಂದ್ರ ಬಯಸಿದ್ದರೆ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಡಾ.ಅಶ್ವಥ್ಥನಾರಾಯಣ ಮತ್ತು ದಾಸರಹಳ್ಳಿ ಮುನಿರಾಜು ಅವರು ರಾಜಣ್ಣ ಎಂಬ ಕ್ಯಾಂಡಿಡೇಟನ್ನು ತಂದು ಕೂರಿಸಲು ಬಯಸಿದ್ದಾರೆ.

ಇನ್ನು ಬೆಂಗಳೂರು ಸೆಂಟ್ರಲ್‌ಗೆ ಹಿರಿಯ ನಾಯಕ ರಾಮಚಂದ್ರೇಗೌಡರ ಮಗ ಸಪ್ತಗಿರಿಗೌಡರನ್ನು ತಂದು ಕೂರಿಸುವ ವಿಷಯದಲ್ಲಿ ಭಿನ್ನಾಭಿಪ್ರಾಯ ಕೇಳಿ ಬರುತ್ತಿಲ್ಲವಾದರೂ ಬೆಂಗಳೂರು ಸೌತ್‌ಗೆ ರಾಮಮೂರ್ತಿ ಅವರನ್ನು ತಂದು ಕೂರಿಸುವ ವಿಜಯೇಂದ್ರ ಅವರ ಆಸಕ್ತಿಗೆ ಯಡಿಯೂರಪ್ಪ ವಿರೋಧಿ ಬಣ ತಕರಾರೆತ್ತಿದೆ.

ಇದರ ಮಧ್ಯೆ ಆರ್.ಅಶೋಕ್ ಕಳೆದ ವಾರ ಹುಬ್ಬಳ್ಳಿಗೆ ಹೋದಾಗ ಬೆಂಗಳೂರಿನಲ್ಲಿ ಪಕ್ಷದ ಮಾಜಿ ಕಾರ್ಪೊರೇಟರುಗಳ ಮೀಟಿಂಗು ನಡೆಸಿದ ವಿಜಯೇಂದ್ರ:ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರಿನ ಶಾಸಕರು ನಿರ್ಲಕ್ಷ್ಯ ತೋರಿದ ಪರಿಣಾಮವಾಗಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿಲ್ಲ. ಹೀಗಾಗಿ ಮೂರು ವರ್ಷದ ಹಿಂದೆ ಮರಳಿ ಕಾರ್ಪೊರೇಟರುಗಳಾಗುವ ಅವಕಾಶ ನಿಮಗೆ ತಪ್ಪಿತು ಅಂತ ಹಳಹಳಿಸಿದ ರೀತಿ ಅಶೋಕ್, ಅಶ್ವಥ್ಥನಾರಾಯಣ್ ಸೇರಿದಂತೆ ಬೆಂಗಳೂರಿನ ಬಿಜೆಪಿ ಶಾಸಕರಿಗೆ ಇರಿಸು ಮುರಿಸುಂಟು ಮಾಡಿದೆ.
ಹೀಗಾಗಿ ನೋಡನೋಡುತ್ತಿದ್ದಂತೆಯೇ ಯಡಿಯೂರಪ್ಪ ಬಣದಲ್ಲೂ ಉಪಬಣಗಳು ಸೃಷ್ಟಿಯಾಗಿ ವಿಜಯೇಂದ್ರ ಅವರ ತಲೆನೋವು ಹೆಚ್ಚಾಗಿದೆ.

ಹೊಸ ದೇವ್ರಿಗಿಂತ ಹಳೆ ದೆವ್ವ ಬೆಟರ್

ಈ ಮಧ್ಯೆ ನಾಲ್ಕನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿ ದಕ್ಷಿಣಾಪಥೇಶ್ವರ ಎಂಬ ಖ್ಯಾತಿಗೆ ಪಾತ್ರರಾಗಿರುವ ಬೆಂಗಳೂರಿನ ಬಿಜೆಪಿ ಶಾಸಕರೊಬ್ಬರು ಮೊನ್ನೆ ಕುಟುಂಬ ಸಮೇತರಾಗಿ ಆನಂದಮಯ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಮ್ಮ ಸಮಸ್ಯೆಯನ್ನು ಅವರಿಗೆ ವಿವರಿಸಿದ ಈ ಶಾಸಕರು:ಗುರೂಜಿ, ಈಗ ಪಕ್ಷ ಯಡಿಯೂರಪ್ಪನವರ ಕಂಟ್ರೋಲಿಗೆ ಬಂದಿದ್ದರೂ ಅಲ್ಲಿ ಉಪಬಣಗಳ ಆಟ ಶುರುವಾಗಿದೆ. ಈ ಟೈಮಿನಲ್ಲಿ ಯಾವ ಬಣದ ಜತೆ ನಿಲ್ಲಬೇಕು ಎಂಬುದೇ ನನಗೆ ಸಮಸ್ಯೆಯಾಗಿದೆ. ಹೀಗಾಗಿ ನೀವೇ ದಾರಿ ತೋರಿಸಬೇಕು ಎಂದಿದ್ದಾರೆ.

ಈ ಮಾತು ಕೇಳಿದ ಆನಂದಮಯ ಗುರೂಜಿ, ಈ ಉಪಬಣಗಳ ನಾಯಕರ ಜಾತಕವನ್ನು ಪರಿಶೀಲಿಸಿ:ಹೊಸ ದೇವರಿಗಿಂತ ಹಳೆ ದೆವ್ವವೇ ವಾಸಿ ಎಂದರಂತೆ.

ಇದಾದ ನಂತರ ದಕ್ಷಿಣಾಪಥೇಶ್ವರ ಖ್ಯಾತಿಯ ಶಾಸಕರು ಗುರೂಜಿಯ ಮಾತು ಪಾಲಿಸಲು ನಿರ್ಧರಿಸಿದ್ದಾರೆ ಎಂಬುದು ಲೇಟೆಸ್ಟು ಸುದ್ದಿ.

ನಿಗಮ-ಮಂಡಳಿ:ಮುಗಿಯದ ಕತೆ


ಇನ್ನು ರಾಜ್ಯದ ವಿವಿಧ ನಿಗಮ-ಮಂಡಳಿಗಳಿಗೆ ಶಾಸಕರು, ಕಾರ್ಯಕರ್ತರನ್ನು ನೇಮಕ ಮಾಡುವ ಕೆಲಸ ಮತ್ತಷ್ಟು ವಿಳಂಬವಾಗುವುದು ನಿಶ್ಚಿತವಾಗಿದೆ.

ಹಾಗೆ ನೋಡಿದರೆ ಶುರುವಿನಲ್ಲಿ ಶಾಸಕರಿಗೆ ಮಾತ್ರ ನಿಗಮ-ಮಂಡಳಿಯ ಅಧ್ಯಕ್ಷತೆ ಅಂತ ಜಬರದಸ್ತು ತೋರಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಈಗ ಇದ್ದಕ್ಕಿದ್ದಂತೆ ನಿಗಮ-ಮಂಡಳಿಗಳಿಗೆ ಶಾಸಕರು ಮಾತ್ರವಲ್ಲ, ಕಾರ್ಯಕರ್ತರನ್ನೂ ನೇಮಕ ಮಾಡಬೇಕು. ಹೀಗಾಗಿ ರೆಡಿ ಆಗಿರುವ ಪಟ್ಟಿಯನ್ನು ಪರಿಷ್ಕರಿಸಿ ಅಂದಿದೆಯಂತೆ.

ಆದರೆ ಕಾಂಗ್ರೆಸ್ ಮೂಲಗಳ ಪ್ರಕಾರ, ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ವಿಷಯದಲ್ಲಿ ರಾಜ್ಯದ ನಾಯಕರಿಗೆ ಆಸಕ್ತಿ ಇಲ್ಲ. ಕಾರಣ, ಬಹುತೇಕ ನಿಗಮ-ಮಂಡಳಿಗಳನ್ನು ಈಗ ಮಂತ್ರಿಗಳು ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಇವುಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದರೆ ತಮ್ಮ ಎಂಜಾಯ್‌ಮೆಂಟಿಗೆ ಬ್ರೇಕ್ ಬೀಳುತ್ತದೆ ಎಂಬುದು ಅವರ ಯೋಚನೆ.

ಈ ಮಧ್ಯೆ ಕೆಲ ಶಾಸಕರನ್ನು ಹೊರತುಪಡಿಸಿದಂತೆ ಉಳಿದವರ ನೇಮಕಾತಿ ವಿಷಯದಲ್ಲಿ ಒಂದು ಸಮಸ್ಯೆಯೂ ಇದೆ. ಅದೆಂದರೆ ಅಧ್ಯಕ್ಷಗಿರಿ ಸಿಗದವರು ಅತೃಪ್ತರ ಗೆಟಪ್ಪಿನಲ್ಲಿ ಮೇಲೆದ್ದು ನಿಲ್ಲುತ್ತಾರೆ. ನಾಳೆ ಇವರೇ ಪಾರ್ಲಿಮೆಂಟ್ ಚುನಾವಣೆಯಲ್ಲಿ ಪಕ್ಷದ ಕ್ಯಾಂಡಿಡೇಟುಗಳಿಗೆ ತಲೆನೋವಾಗುತ್ತಾರೆ.

ಹೀಗಾಗಿ ಅನಿವಾರ್ಯವೆನ್ನಿಸುವ ಕೆಲವು ನಿಗಮ-ಮಂಡಳಿಗಳನ್ನು ಹೊರತುಪಡಿಸಿ ಉಳಿದಂತೆ ಬಹುತೇಕ, ನಿಗಮ-ಮಂಡಳಿಗಳ ನೇಮಕಾತಿಯನ್ನು ಪಾರ್ಲಿಮೆಂಟ್ ಚುನಾವಣೆಯ ತನಕ ಮುಂದೂಡಬೇಕು ಎಂಬುದು ಈ ನಾಯಕರ ವಾದ.

ಅವರ ವಾದಕ್ಕೆ ರಾಹುಲ್ ಗಾಂಧಿ ಯಸ್ ಎಂದಿದ್ದಾರೆ. ಆಕಾಂಕ್ಷಿಗಳಿಗೆ ಭ್ರಮನಿರಸನವಾಗುವಂತೆ ಮಾಡಿದ್ದಾರೆ ಅನ್ನುವುದು ಕಾಂಗ್ರೆಸ್ ಮೂಲಗಳ ಮಾತು.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
bjpboard-corporationscongresdr.g.parameshwar
5 FacebookTwitterPinterestEmail
admin

previous post
ಹದಗೆಟ್ಟ ಹಣಕಾಸು ಸ್ಥಿತಿ
next post
ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ನಿರ್ಬಂಧ

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

February 25, 2026

ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

February 24, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ