ನಿವೃತ್ತರಾಗುವ ಐಎಎಸ್, ಐಎಫ್ಎಸ್, ಐಪಿಎಸ್ ಅಧಿಕಾರಿಗಳ ಮಾಹಿತಿ
ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ರಜನೀಸ್ ಗೋಯಲ್ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಜಿ.ಎ. ಅವರು 2024ರಲ್ಲೇ ಸೇವೆಯಿಂದು ವಯೋ ನಿವೃತ್ತಿಯಾಗಲಿದ್ದಾರೆ.
ಪ್ರಸಕ್ತ ವರ್ಷದಲ್ಲಿ 8 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 9 ಮಂದಿ ಐಎಫ್ಎಸ್ ಹಾಗೂ 4 ಐಪಿಎಸ್ ಅಧಿಕಾರಿಗಳು ಸೇವೆಯಿಂದ ವಯೋ ನಿವೃತ್ತಿ ಹೊಂದಲಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಪ್ರತ್ಯೇಕ ಆದೇಶ ಹೊರಡಿಸಲಾಗಿದೆ.
ಐಎಎಸ್ ಅಧಿಕಾರಿಗಳಾದ ಜಾವೇದ್ ಅಖ್ತರ್ ಜನವರಿ 31ರಂದು, ವಿ.ಮಂಜುಳ, ರಾಕೇಶ್ ಸಿಂಗ್ ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದುವರು.
ವರ್ಗಾವಣೆಗೆ ಜಾತಿ ಬಳಕೆ ಅತ್ಯಂತ ಕೆಟ್ಟದ್ದು
ಜೂನ್ 30ರಂದು ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಡಾ. ಬಿ.ಆರ್.ಮಮತ, ಜುಲೈ 31ರಂದು ಡಾ.ಪ್ರಕಾಶ್ ಜಿ.ಸಿ., ಮುಖ್ಯ ಕಾರ್ಯದರ್ಶಿ ಡಾ.ರಜನೀಸ್ ಗೋಯಲ್ ಹಾಗೂ ನವೆಂಬರ್ 30ರಂದು ಮಂಜುನಾಥ ಪ್ರಸಾದ್ ಎನ್ ಅವರು ಸೇವೆಯಿಂದ ವಯೋ ನಿವೃತ್ತರಾಗುವರು.
ಐಎಫ್ಎಸ್ ಅಧಿಕಾರಿಗಳಾದ ಶಶಿಧರ್ ಜಿ.ಹೆಗ್ಡೆ ಇದೇ ಜನವರಿ 31ರಂದು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುದರ್ಶನ್ ಜಿ.ಎ., ಮನೋಜ್ ಕುಮಾರ್ ಶುಕ್ಲ, ಡಾ.ಸೂರ್ಯ ಡಿ.ಪಾಠಕ್ ಅವರು, ಫೆಬ್ರವರಿ 29ರಂದು ನಿವೃತ್ತಿ ಹೊಂದಲಿದ್ದಾರೆ.
ಜೂ. 30ರಂದು ಚಂದ್ರಣ್ಣ ಎ., ಕಲ್ಲೋಳಿಕರ್ ಎಸ್.ಕೆ., ಹಾಗೂ ಎಸ್. ಬಾಲಕೃಷ್ಣ ಅವರು ಸೇವೆಯಿಂದ ವಯೋ ನಿವೃತ್ತರಾಗಲಿದ್ದಾರೆ. ಜುಲೈ 31ರಂದು ಶ್ರೀಧರ್ ಪಿ. ಹಾಗೂ ಡಿಸೆಂಬರ್ 31ರಂದು ಗೀತಾಂಜಲಿ ವಿ. ಅವರು ನಿವೃತ್ತರಾಗುವರು.
ಅಯೋಧ್ಯೆ ಮನೆ ಮನೆಗೆ ಪ್ರಧಾನಮಂತ್ರಿ