ಮಂದಿರ ನಿರ್ಮಾಣದಲ್ಲಿ ಕನ್ನಡಿಗರ ಮಹತ್ತರ ಕೊಡುಗೆ
ಬೆಂಗಳೂರು: ರಾಮ ಹಾಗೂ ಕರ್ನಾಟಕದ ನಡುವೆ ಯುಗ-ಯುಗಾಂತರಗಳ ಸಂಬಂಧ ಇರುವುದು ಸೋಜಿಗವಾದರೂ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಅಯೋಧ್ಯೆಯ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಕನ್ನಡಿಗರು ಹೆಮ್ಮೆ ಪಡುವಂತಹ ಕೊಡುಗೆಯನ್ನು ಕರ್ನಾಟಕ ನೀಡಿದೆ.
ವಿಶ್ವವೇ ಕಾತುರದಿಂದ ಕಾಯುತ್ತಿದೆ
ನಾಡಿದ್ದು ಸೋಮವಾರ ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಾಗೂ ರಾಮ ಮಂದಿರ ಉದ್ಘಾಟನೆಯನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.
ಪ್ರಭು ಶ್ರೀರಾಮಚಂದ್ರ ಮತ್ತು ಕರ್ನಾಟಕದ ಸಂಬಂಧವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದಿಲ್ಲಿ ಎಳೆ-ಎಳೆಯಾಗಿ ಬಿಚ್ಚಿಟ್ಟರು.
ಕರ್ನಾಟಕದಲ್ಲಿ ಆರ್‌ಎಸ್‌ಎಸ್ ಸರ್ಕಾರವೇ!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಾಯಣ ಯುಗದಿಂದ ಈ ಸಂಬಂಧ ಮುಂದುವರಿದಿದ್ದು, ಸೀತಾಮಾತೆಯ ಅಪಹರಣದ ನಂತರ ಶ್ರೀರಾಮ, ಲಕ್ಷ್ಮಣನ ಜೊತೆ ಕಿಷ್ಕಿಂಧೆ (ಇಂದಿನ ಹಂಪಿ)ಗೆ ಪ್ರಯಾಣ ಬೆಳೆಸಿದ ಕುರುಹುಗಳಿವೆ ಎಂದು ವಿವರಿಸಿದರು.
ಕರ್ನಾಟಕ ಹನುಮಂತನ ಜನ್ಮಭೂಮಿ
ಶ್ರೀರಾಮ ವಾನರ ಸೇನೆಯನ್ನು ಒಗ್ಗೂಡಿಸಿದ್ದು ಕರ್ನಾಟಕದಲ್ಲೇ, ಕೊಪ್ಪಳದ ಅಂಜನಾದ್ರಿ ಬೆಟ್ಟ ಹನುಮಂತನ ಜನ್ಮಭೂಮಿ. ತೊರವೆ ರಾಮಾಯಣ ಮೇರುಕೃತಿಯಾಗಿದೆ. ಕರ್ನಾಟಕದ ಪೇಜಾವರ ಶ್ರೀಗಳು ಟ್ರಸ್ಟಿ ಆಗಿದ್ದು, ರಾಮಮಂದಿರದ ಉಸ್ತುವಾರಿ ನೋಡಿಕೊಳ್ಳುತ್ತಿರುವವರು ಕನ್ನಡಿಗರೇ ಆಗಿದ್ದಾರೆ.
ಕರ್ನಾಟಕದ ಸಾದರಹಳ್ಳಿಯಿಂದ 800 ಟನ್ ಶಿಲೆಯನ್ನು ರಾಮಮಂದಿರ ನಿರ್ಮಾಣದಲ್ಲಿ ಬಳಸಲಾಗಿದೆ.
ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಕನ್ನಡಿಗ
ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಕನ್ನಡಿಗ, ಮೈಸೂರಿನ ಅರುಣ್ ಯೋಗಿರಾಜ್, ರಾಮಮಂದಿರ ದ್ವಾರ ಕೆತ್ತಿರುವುದು ಕೊಪ್ಪಳದ ರಾಮಮೂರ್ತಿ ಸ್ವಾಮಿ, ಧಾರವಾಡದಿಂದ ರಾಮನಿಗಾಗಿ ಎರಡು ವಿಶೇಷ ಕಂಬಳಿಯನ್ನು ಕಳುಹಿಸಲಾಗಿದೆ.
ಅಯೋಧ್ಯೆಯಲ್ಲಿ ವಿನಾಯಕನನ್ನು ಅರಳಿಸಿದ ಶಿಲ್ಪಿ ಉತ್ತರ ಕನ್ನಡ ಜಿಲ್ಲೆಯ ಕೆಕ್ಕೆರಿನ ವಿನಾಯಕ ಗೌಡ. ಅಯೋಧ್ಯೆಯಲ್ಲಿನ ಶಿಲ್ಪ ಕೆತ್ತನೆ ಕಾರ್ಯದಲ್ಲಿ ಕರ್ನಾಟಕದ 6 ಶಿಲ್ಪಿಗಳು ಪಾಲ್ಗೊಂಡಿದ್ದಾರೆ.
ಕರ್ನಾಟಕದ ಹನುಮಾನ್ ಗ್ರಾನೈಟ್ಸ್ ರಾಮಮಂದಿರಕ್ಕೆ ಅಗತ್ಯವಿದ್ದ ಸಂಪೂರ್ಣ ಶಿಲೆಗಳನ್ನು ಪೂರೈಸಿದೆ. ಕರ್ನಾಟಕದ ಶ್ರೀಗಂಧದ ಮರ, ಶ್ರೀಗಂಧದ ಎಣ್ಣೆ ಬಳಸಲಾಗಿದೆ.
ಅಯೋಧ್ಯೆಯಲ್ಲಿ ಜನವರಿ 19 ರಿಂದ 48 ದಿನಗಳ ಕಾಲ ರಾಮನಗರದ ವಿಜಯಕುಮಾರ್ ಮತ್ತು ಕಲಾವಿದರಿಂದ ಮಂಗಳವಾದ್ಯ ಸೇವೆ ನಡೆಯುತ್ತಿದೆ.
ಕರ್ನಾಟಕದ ರಾಜೇಶ್ ಶೆಟ್ಟಿ ಕಂಪೆನಿ ರಾಮಮಂದಿರದ ಸಂಪೂರ್ಣ ವಿದ್ಯುತ್ ಸಂಪರ್ಕದ ಕಾರ್ಯ ಪೂರೈಸುತ್ತಿದೆ. ಅಯೋಧ್ಯೆ ರೈಲು ನಿಲ್ದಾಣಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿರುವುದು ಕರ್ನಾಟಕದ ಮೂಡುಬಿದಿರೆಯ ರೋನಾಲ್ಡ್ ಸಿಲ್ಟನ್ ಡಿಸೋಜಾ ಅವರ ಲೆಕ್ಸಾ ಲೈಟಿಂಗ್ ಕಂಪೆನಿ.
ಅಯೋಧ್ಯೆಗೆ 35 ಸಾವಿರ ರಾಮಭಕ್ತರು
ಇಷ್ಟೇ ಅಲ್ಲದೆ, ಜನವರಿ 31 ರಿಂದ ಮಾರ್ಚ್ 25ರ ವರೆಗೆ ರಾಜ್ಯದಿಂದ 35 ಸಾವಿರ ರಾಮಭಕ್ತರು ೨೫ ರೈಲುಗಳಲ್ಲಿ ಅಯೋಧ್ಯೆಗೆ ಸ್ವಂತ ವೆಚ್ಚದಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ. ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳಿಂದ ರಾಮಭಕ್ತರಿಗೆ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಒಂದು ರೈಲಿನಲ್ಲಿ 1,500 ಜನರ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದು ಪ್ರತಿ ರೈಲಿಗೆ ’ರೈಲ್ ಪ್ರಮುಖ್’ ಮತ್ತು ’ಬೋಗಿ ಪ್ರಮುಖ್’ ನೇಮಿಸಿದ್ದು, ಇವರು ರಾಮ ಭಕ್ತರ ಊಟೋಪಚಾರದ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ.
ಈ ಅಭಿಯಾನದ ಸಂಚಾಲಕರಾಗಿ ಬಿಜೆಪಿಯಿಂದ ವಿಧಾನಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಸಹ-ಸಂಚಾಲಕರಾಗಿ ಪಕ್ಷದ ಮಾಜಿ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರನ್ನು ನೇಮಿಸಲಾಗಿದೆ.
ರಾಮಭಕ್ತರಿಗೆ ಕ್ಯೂಆರ್ ಕೋಡ್
ಅಯೋಧ್ಯೆಗೆ ತೆರಳುತ್ತಿರುವ ಪ್ರತಿ ರಾಮಭಕ್ತರಿಗೆ ಕ್ಯೂಆರ್ ಕೋಡ್ ಐಡಿ ಕಾರ್ಡ್ ವಿತರಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಕನ್ನಡ ಭಾಷೆ ಹೆಲ್ಪ್‌ಲೈನ್ ಕೇಂದ್ರ ಸ್ಥಾಪಿಸಿದ್ದು, ಕನ್ನಡ ಭಾಷೆಯಲ್ಲೇ ಪ್ರಕಟಣೆ ವ್ಯವಸ್ಥೆ ಮಾಡಲಾಗಿದೆ. ವಸತಿಗಾಗಿ ವ್ಯವಸ್ಥಿತವಾದ ಜರ್ಮನ್ ಟೆಂಟ್ ಹೌಸ್‌ಗಳಿವೆ.
ಮಾರ್ಚ್ ಮೊದಲ ವಾರ ಲೋಕಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ
ಅಯೋಧ್ಯೆಯಲ್ಲಿ 48 ಕಡೆ ಭೋಜನದ ವ್ಯವಸ್ಥೆ ಇದ್ದು, ಇದರಲ್ಲಿ 2 ಕಡೆ ಕರ್ನಾಟಕದಿಂದ ತೆರಳುವ ರಾಮಭಕ್ತರಿಗಾಗಿ ಭೋಜನ ವ್ಯವಸ್ಥೆ ಮಾಡಲಾಗಿದೆ.
ಪ್ರಾಣ ಪ್ರತಿಷ್ಠಾಪನೆ ನೇರ ವೀಕ್ಷಣೆ
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ವಿಧಿ-ವಿಧಾನಗಳನ್ನು ಕರ್ನಾಟಕದಲ್ಲಿನ ಭಕ್ತರು ನೇರ ಪ್ರಸಾರದಲ್ಲಿ ವೀಕ್ಷಿಸಲು ಪಿವಿಆರ್ ಚಿತ್ರಮಂದಿರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್, ಉಜ್ಜಯಿನಿ, ನಮೋ ಗಂಗೆ ಕಾರ್ಯಕ್ರಮಗಳು ಅಭಿವೃದ್ಧಿಯಾಗುತ್ತಿದ್ದು, ಪ್ರಾಚೀನ ಪರಂಪರೆಯ ಪುನರುಜ್ಜೀವನಕ್ಕೆ ಸಾಕ್ಷಿಯಾಗಿವೆ.
ಮನೆಗಳಲ್ಲಿ 5 ದೀಪ ಬೆಳಗಿಸಿ
ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನದಂದು ರಾಜ್ಯದ ಜನತೆ ತಮ್ಮ ಮನೆಗಳಲ್ಲಿ ಉತ್ತರಾಭಿಮುಖವಾಗಿ 5 ದೀಪ ಬೆಳಗಿಸುವ ಮೂಲಕ ಶ್ರೀರಾಮನಿಗೆ ತಮ್ಮ ಭಕ್ತಿಯನ್ನು ಅರ್ಪಿಸಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.
ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ದಿನ ರಾಜ್ಯದಲ್ಲಿ ಅಶಾಂತಿ, ಅಡ್ಡಿ-ಆತಂಕ, ಅಹಿತಕರ ಘಟನೆಗಳು ಜರುಗದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅಂದು ಸರ್ಕಾರಿ ರಜೆ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಪರಿವರ್ತನಾ ಪಥ ಬಿಡುಗಡೆ
ಅಯೋಧ್ಯೆಯ ಪ್ರಮುಖ ಘಟನಾವಳಿಗಳನ್ನು ಒಳಗೊಂಡ ‘ಪರಿವರ್ತನಾ ಪಥ ರಾಮಮಂದಿರ ರಥ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
2 comments
[…] ರಾಜ್ಯ […]
[…] ರಾಜ್ಯ […]