ವಿಶೇಷ ವಿಮಾನದಲ್ಲಿ ಚೆನ್ನಮ್ಮ, ಕುಮಾರಸ್ವಾಮಿ, ನಿಖಿಲ್ ಪ್ರಯಾಣ
ಬೆಂಗಳೂರು : ಶ್ರೀರಾಮಮಂದಿರದಲ್ಲಿ ಜನವರಿ 22ರಂದು ನಡೆಯುವ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಅವರ ಕುಟುಂಬ ವರ್ಗ ಅಯೋಧ್ಯೆ ತಲುಪಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಖುದ್ದು ಆಹ್ವಾನ ಹಾಗೂ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟ್ ನ ಆಹ್ವಾನದ ಮೇರೆಗೆ ದೇವೇಗೌಡರ ಕುಟುಂಬದವರು ವಿಶೇಷ ವಿಮಾನದಲ್ಲಿ ಬೆಂಗಳೂರಿನಿಂದ ಅಯೋಧ್ಯೆಗೆ ತೆರಳಿದ್ದಾರೆ.
ರಾಮಪ್ರಾಣ ಪ್ರತಿಷ್ಠಾಪನೆಗೆ ಕರ್ನಾಟಕದಲ್ಲಿಲ್ಲ ರಜೆ
ದೇವರಲ್ಲಿ ಅಪಾರ ಶ್ರದ್ಧೆ, ಭಕ್ತಿ ಮತ್ತು ಭಾವಗಳನ್ನು ಹೊಂದಿರುವ ಗೌಡರು, ತಮ್ಮ ಎಲ್ಲಾ ರಾಜಕೀಯವನ್ನು ಮರೆತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದರು.
ಕಾಡಿನಿಂದ ಐಸ್ ಕ್ರೀಮ್ ವರೆಗೆ ಸೀತಾಫಲದ ಮಹಿಮೆ…!
ಹಾಗೆಯೇ ರಾಜಕೀಯ ಕಾರಣಗಳಿಗೆ ವಿರೋಧ ಮಾಡುವವರಿಗೂ ಇಂತಹ ಐತಿಹಾಸಿಕ ಸಂದರ್ಭ ಮತ್ತೆ ದೊರೆಯದು. ಇದೊಂದು ಪುಣ್ಯದ ಕೆಲಸವಾಗಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂಬ ಸಲಹೆ ನೀಡಿದ್ದರು.
ಜೊತೆಗೆ ಮೊದಲನಿಂದಲೂ ದೇಗುಲದ ಕಾರ್ಯಕ್ಕೆ ಬೆಂಬಲಿಸುತ್ತಾ ಬಂದಿದ್ದ ಗೌಡರು, ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ತಮ್ಮ ಪತ್ನಿ, ಪತ್ರರೊಡಗೂಡಿ ಭಾಗವಹಿಸಿದ್ದಾರೆ.
ಒಕ್ಕಲಿಗರು ಉದ್ಯಮದಲ್ಲಿಯೂ ಸಾಧಿಸಬೇಕು
ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆಯಲಿರುವ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೇವೇಗೌಡರು, ಅವರ ಧರ್ಮಪತ್ನಿ ಚನ್ನಮ್ಮ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ವಿಶೇಷ ವಿಮಾನದಲ್ಲಿ ಅಯೋಧ್ಯೆ ತಲುಪಿದ್ದಾರೆ.
1 comment
[…] ರಾಜ್ಯ […]