500 ವರ್ಷಗಳ ನಂತರ ರಾಮ ಭಕ್ತರ ಕನಸು-ನನಸು
ಅಯೋಧ್ಯೆ(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ನೆರವೇರುವ ಮೂಲಕ ರಾಮ ಭಕ್ತರ 500 ವರ್ಷಗಳ ಕನಸು ನನಸಾಯಿತು.
ಹನ್ನೊಂದು ದಿನಗಳ ಕಠೋರ ರಾಮದೀಕ್ಷೆ ನಿಯಮಗಳ ಪಾಲನೆ ಮೂಲಕ ಶಾಸ್ತ್ರೋಕ್ತವಾಗಿ ಪೂಜಾ ವಿಧಿಗಳನ್ನು ಖುದ್ದು ಪ್ರಧಾನಿ ನೆರವೇರಿಸಿದರು.
ಮಧ್ಯಾನ್ಹ 12 ಗಂಟೆ 5 ನಿಮಿಷಕ್ಕೆ ಪ್ರಾರಂಭವಾದ ಪ್ರಾಣ ಪ್ರತಿಷ್ಠೆ ಪೂಜಾವಿಧಿಗಳು ಸಾಂಗೋಪಾಂಗವಾಗಿ ನೆರವೇರಿದವು.
ಕೋಟ್ಯಂತರ ಭಕ್ತರ ಇಷ್ಟಾರ್ಥ ಈಡೇರಿಕೆ
ಪ್ರಧಾನ ಅರ್ಚಕರುಗಳು ಪೂಜಾ ಕೈಂಕರ್ಯಗಳನ್ನು ನೆರವೇರಿಸಿಕೊಡುವ ಮೂಲಕ ಕೋಟ್ಯಂತರ ಭಕ್ತರ ಇಷ್ಟಾರ್ಥವನ್ನು ಈಡೇರಿಸಿದರು.
ಐನೂರು ವರ್ಷಗಳ ಹಿಂದೆ ಅಗ್ರ ಪೂಜೆಯಿಂದ ವಂಚಿತವಾದ ರಾಮಲಲ್ಲಾ ಮೂರ್ತಿಗೆ ಇಂದು ಪುನಃ ಮಂತ್ರಘೋಷಗಳು ಮೊಳಗಿದ್ದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ದಿನ.
ಬಿಜೆಪಿ ಸಾರಥಿ ಆಗಲಿದ್ದಾರೆ ಪ್ರಲ್ಹಾದ್ ಜೋಷಿ?
ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಎಲ್ಲ ವರ್ಗ, ಕ್ಷೇತ್ರಗಳ ಸಹಸ್ರಾರು ಗಣ್ಯರು, ಭಕ್ತರು, ಸಾಧು-ಸಂತರು ಸಾಕ್ಷೀಭೂತರಾದರು. ಪ್ರಾಣ ಪ್ರತಿಷ್ಠೆ ಕ್ಷಣಗಳನ್ನು ಕಣ್ತುಂಬಿ ಕೊಳ್ಳುವ ಮೂಲಕ ರಾಮಭಕ್ತಿಯ ರಸದಲ್ಲಿ ಮುಳುಗಿ ಪುನೀತರಾದ ಧನ್ಯತಾಭಾವ ಎಲ್ಲರಲ್ಲಿ ಕಂಡುಬಂದಿತು.
ಕಾಲಚಕ್ರದ ಸರ್ವಕಾಲಿಕ ಇತಿಹಾಸ ಕ್ಷಣ
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾತನಾಡಿ, ನೂರಾರು ವರ್ಷಗಳ ನಂತರ ಇಂದು ನಮ್ಮ ರಾಮ ಬಂದಿದ್ದಾರೆ, ಪ್ರಭು ಶ್ರೀರಾಮನ ಆಶೀರ್ವಾದ ನಮ್ಮೆಲ್ಲರ ಮೇಲಿದೆ, ಸಹಸ್ರಾರು ವರ್ಷಗಳ ನಂತರವೂ ಈ ದಿನ, ಕ್ಷಣವನ್ನು ಸ್ಮರಣೆ ಮಾಡಿಕೊಳ್ಳಲಿದ್ದಾರೆ, ಇದು ಕಾಲಚಕ್ರದ ಸರ್ವಕಾಲಿಕ ಇತಿಹಾಸ ಕ್ಷಣಗಳಾಗಿವೆ ಎಂದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ರಾಮ ಮಂದಿರ ಉದ್ಘಾಟನೆ ಪ್ರಧಾನಿ ಮೋದಿ ಅವರ ಶ್ರಮದಿಂದ ನೆರವೇರಿದೆ, ಸಂಕಲ್ಪದಂತೆ ರಾಮ ಮಂದಿರವನ್ನು ಅದೇ ಜಾಗದಲ್ಲಿಯೇ ಕಟ್ಟಿದ್ದೇವೆ, ನೂರಾರು ವರ್ಷಗಳ ಹೋರಾಟದ ಈ ಕಾರ್ಯದಲ್ಲಿ ಲಕ್ಷಾಂತರ ಜನ ಪ್ರಾಣ ತ್ಯಾಗ, ಬಲಿದಾನ ಮಾಡಿದ್ದಾರೆ ಎಂದರು.
ಎಲ್ಲಾ ಕಲಹಗಳಿಗೆ ವಿರಾಮ ಹಾಕಬೇಕು
ಆರ್‌ಎಸ್‌ಎಸ್ ಸರಸಂಘ ಸಂಚಾಲಕ ಮೋಹನ್ ಭಾಗವತ್ ಮಾತನಾಡಿ, ಪ್ರಧಾನಿ ಅವರು ರಾಮಲಲ್ಲಾನ ಪ್ರಾಣ ಪ್ರತಿಷ್ಠೆಗೆ ನಡೆಸಿದ ಕಠೋರ ವ್ರತ ನಿಜಕ್ಕೂ ಶ್ಲಾಘನೀಯವಾದುದು, ಈಗ ನಮ್ಮ ಕರ್ತವ್ಯ ಮಾಡಬೇಕಿದೆ, ರಾಮ ರಾಜ್ಯ ಸ್ಥಾಪನೆಗೆ ಶ್ರಮಿಸಬೇಕಿದೆ, ಎಲ್ಲಾ ಕಲಹಗಳಿಗೆ ವಿರಾಮ ಹಾಕಬೇಕಿದೆ ಎಂದು ಹೇಳಿದರು.
ಪ್ರಾಣ ಪ್ರತಿಷ್ಠೆ ನಂತರ ರಾಮ ಮಂದಿರದ ಅಂಗಳದಲ್ಲಿ ನಿರ್ಮಿಸಲಾಗಿದ್ದು ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರಿಗೆ ರಾಮ ಮಂದಿರದ ಬೆಳ್ಳಿಯ ಪ್ರತಿರೂಪ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಮೋತ್ಸವ ಕಾರ್ಯಕ್ರಮದ ಪ್ರಮುಖ ರೂವಾರಿಗಳು ರಾಮ ಮಂದಿರ ಟ್ರಸ್ಟ್‌ನ ಪೇಜಾವರ ಶ್ರೀ, ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಹಾಗೂ ಸಾಧು ಗಣ ಉಪಸ್ಥಿತರಿದ್ದರು.
3 comments
[…] ರಾಜಕೀಯ […]
[…] ರಾಜಕೀಯ […]
[…] ರಾಜಕೀಯ […]