ಜನರ ಹೋರಾಟಕ್ಕೆ ಮಣಿದ ಸರ್ಕಾರ; ಅನುಮತಿ ಕೋರಿ ಎಐಎಂಸಿಗೆ ಪತ್ರ
ಬೆಂಗಳೂರು: ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಕೇಂದ್ರ ಸ್ಥಾನವಾದ ರಾಮನಗರಕ್ಕೂ ವೈದ್ಯಕೀಯ ಕಾಲೇಜುಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸುವುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಕನಕಪುರದಲ್ಲಿ ವೈದ್ಯಕೀಯ ಕಾಲೇಜು ಆರಂಭಗೊಂಡರೆ ಕರ್ನಾಟಕದಲ್ಲಿ ಇತಿಹಾಸ ಸೃಷ್ಠಿಯಾಗುತ್ತದೆ. ತಾಲ್ಲೂಕು ಕೇಂದ್ರವೊಂದರಲ್ಲಿ ಸರ್ಕಾರಿ ಕಾಲೇಜು ಆರಂಭವಾಗುತ್ತಿರುವುದು ಇದೇ ಮೊದಲಾಗಲಿದೆ.
ಗಣಿ ಧಣಿಗಳ ರಾಜಕೀಯ ಕೇಂದ್ರ ವಿಜಯನಗರದಲ್ಲೂ ವೈದ್ಯಕೀಯ ಕಾಲೇಜೊಂದನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ.
ಕರ್ನಾಟಕದಲ್ಲಿ ಮೂರು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡುವಂತೆ ಅಖಿಲ ಭಾರತ ವೈದ್ಯಕೀಯ ಪರಿಷತ್‌ಗೆ ಶಿಫಾರಸು ಮಾಡಿದೆ. ಈ ಕೇಂದ್ರಗಳಲ್ಲಿ ಅತ್ಯಾಧುನಿಕ ಸರ್ಕಾರಿ ಆಸ್ಪತ್ರೆಗಳಿದ್ದು, ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ ಕೋರಲಾಗಿದೆ.
ಬಿಜೆಪಿ ಸಾರಥಿ ಆಗಲಿದ್ದಾರೆ ಪ್ರಲ್ಹಾದ್ ಜೋಷಿ?
ಪ್ರತಿ ಕಾಲೇಜಿಗೆ 150 ಸೀಟುಗಳನ್ನು ನೀಡುವಂತೆಯೂ ಸರ್ಕಾರ ಶಿಫಾರಸು ಮಾಡಿದೆ. ಹಿಂದೆಯೇ ರಾಮನಗರದಲ್ಲಿ ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸಿ ಮಲ್ಟಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ಕಾಲೇಜು ತೆರೆಯಲು ನಿರ್ಧರಿಸಲಾಗಿತ್ತು.
ರಾಮನಗರಕ್ಕೆ ನೀಡಬೇಕೆಂದಿರುವ ವೈದ್ಯಕೀಯ ಕಾಲೇಜನ್ನು ಕನಕಪುರಕ್ಕೆ ನೀಡಬೇಕೆಂದು ಸರ್ಕಾರದ ಮೇಲೆ ಶಿವಕುಮಾರ್ ಒತ್ತಡ ಹೇರಿದ್ದರು. ಇದಕ್ಕೆ ಜನರು ಹಾಗೂ ಜನಪ್ರತಿನಿಧಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
4 comments
[…] ರಾಜಕೀಯ […]
[…] ರಾಜಕೀಯ […]
[…] ರಾಜಕೀಯ […]
[…] ರಾಜಕೀಯ […]