Monday, May 19, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, May 19, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyಅಂಕಣರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಬಿಜೆಪಿ ಸಾರಥಿ ಆಗಲಿದ್ದಾರೆ ಪ್ರಲ್ಹಾದ್ ಜೋಷಿ?

by admin January 22, 2024
written by admin January 22, 2024 2 comments 5 minutes read
Share 7FacebookTwitterPinterestEmail
146

ಕಳೆದ ವಾರ ದಿಲ್ಲಿಯಿಂದ ಬಂದ ಒಂದು ವರ್ತಮಾನ ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ವಿಸ್ಮಯ ಮೂಡಿಸಿತು. ಹಾಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪಕ್ಷದ ಮುಂದಿನ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎಂಬುದು ಈ ವರ್ತಮಾನ.

ಈ ನಾಯಕರಿಗೆ ದಿಲ್ಲಿ ಮೂಲಗಳು ಹೇಳಿದ ಪ್ರಕಾರ, ಮುಂಬರುವ ಲೋಕಸಭಾ ಚುನಾವಣೆಯ ನಂತರ ಹಾಲಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲು ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಹೀಗೆ ಅವರು ತೆರವು ಮಾಡುವ ಜಾಗಕ್ಕೆ ಕರ್ನಾಟಕದ ಪ್ರಲ್ಹಾದ್ ಜೋಷಿ ಅವರನ್ನು ತಂದು ಕೂರಿಸುವುದು ಮೋದಿಯವರ ಯೋಚನೆ.

ಅಂದ ಹಾಗೆ ಹಾಲಿ ಅಧ್ಯಕ್ಷರಾಗಿರುವ ನಡ್ಡಾ ಈ ಹಿಂದೆ ಮೋದಿಯವರ ಸಂಪುಟದಲ್ಲಿ ಸಚಿವರಾಗಿದ್ದವರು. ಸಂಕೀರ್ಣ ಕಾಲಘಟ್ಟದಲ್ಲಿ ತಮಗೆ ನಿಷ್ಟರಾದವರೊಬ್ಬರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬರಲಿ ಅಂತ ಮೋದಿ-ಅಮಿತ್ ಷಾ ಜೋಡಿ ಬಯಸಿದ ಫಲವಾಗಿ ನಡ್ಡಾ ಪಕ್ಷದ ಚುಕ್ಕಾಣಿ ಹಿಡಿದರು.

ಅಯೋಧ್ಯೆ ರಾಮಲಲ್ಲಾಗೆ ಅಗ್ರ ಪೂಜೆ

ಆದರೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ನಡ್ಡಾ ಅವರನ್ನು ಮರಳಿ ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವುದು ಮೋದಿಯವರ ಬಯಕೆ. ಅಂದ ಹಾಗೆ ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಯಂಬಲದ ಮೇಲೆ ಕನಿಷ್ಟ 330 ಸ್ಥಾನಗಳನ್ನು ಗೆಲ್ಲಲಿದೆ ಎಂಬುದು ಮೋದಿಯವರ ವಿಶ್ವಾಸ.

ಈ ವಿಶ್ವಾಸದ ಕಾರಣಕ್ಕಾಗಿಯೇ ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ನೀಲನಕ್ಷೆ ರೂಪಿಸಿರುವ ಅವರು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಹಾಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರನ್ನು ತಂದು ಕೂರಿಸಲು ಬಯಸಿದ್ದಾರೆ.

ಹೀಗೆ ಪ್ರಲ್ಹಾದ್ ಜೋಷಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಮೋದಿಯವರ ಲೆಕ್ಕಾಚಾರಕ್ಕೆ ಹಲವು ಒಳಮುಖಗಳಿವೆ. ತಮಗೆ ಮತ್ತು ಸಂಘ ಪರಿವಾರಕ್ಕೆ ಜೋಷಿ ನಿಷ್ಟರು ಎಂಬುದು ಮೊದಲ ಮುಖ. ಇನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಜೋಷಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ ಎಂಬುದು ಎರಡನೇ ಮುಖ.

ಇದೇ ರೀತಿ ಪ್ರಲ್ಹಾದ್ ಜೋಷಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸುವ ಮೋದಿ ಯೋಚನೆಗಿರುವ ಮತ್ತೊಂದು ಮುಖವೆಂದರೆ, ಕರ್ನಾಟಕದ ರಾಜಕೀಯ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷ ತೊರೆದ ಹಲವು ನಾಯಕರು, ಬಿಜೆಪಿ ಲಿಂಗಾಯತ ವಿರೋಧಿ ಅಂತ ಬ್ರ್ಯಾಂಡ್ ಮಾಡಿ ಅಡ್ಡೇಟು ಹಾಕಿದ್ದರು.

ಕನಕಪುರ, ರಾಮನಗರದಲ್ಲಿ ತಲಾ ಒಂದು ಮೆಡಿಕಲ್ ಕಾಲೇಜು

ಹೀಗೆ ಅವರು ಕೊಟ್ಟ ಅಡ್ಡೇಟಿನ ಪರಿಣಾಮವನ್ನು ನಿವಾರಿಸಬೇಕು ಎಂದರೆ ಪ್ರಬಲ ಲಿಂಗಾಯತ ಸಮುದಾಯದ ವಿಶ್ವಾಸ ಗಳಿಸುವ ಕೆಲಸ ಮಾಡಬೇಕು. ಸದ್ಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆ ಸಮುದಾಯದ ಬಿ.ವೈ.ವಿಜಯೇಂದ್ರ ಅವರನ್ನು ತಂದು ಕೂರಿಸಿರುವುದರಿಂದ ಲಿಂಗಾಯತ ವೋಟ್ ಬ್ಯಾಂಕು ಮೆಲ್ಲಗೆ ಬಿಜೆಪಿಯ ಕಡೆ ಹೊರಳಿ ನೋಡುತ್ತಿರುವುದೇನೋ ನಿಜ.

ಆದರೆ ಇದೇ ಕಾಲಕ್ಕೆ ಅದರ ವಿಶ್ವಾಸವನ್ನು ಗಟ್ಟಿಗೊಳಿಸಲು ಇನ್ನಷ್ಟು ಕ್ರಮ ತೆಗೆದುಕೊಳ್ಳಬೇಕು ಎಂಬುದು ಮೋದಿಯವರ ಯೋಚನೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ್ ಜೋಷಿಯವರು ಪ್ರತಿನಿಧಿಸುತ್ತಿರುವ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್ಟನ್ನು ಲಿಂಗಾಯತ ಸಮುದಾಯದವರಿಗೆ ಕೊಡಬೇಕು ಎಂಬ ಲೆಕ್ಕಾಚಾರ ಅವರಲ್ಲಿದೆ.

ಕಾರಣ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಮತದಾರರ ಪವರ್ ಜಾಸ್ತಿ, ಹೀಗಾಗಿ ಅದೇ ಸಮುದಾಯದವರಿಗೆ ಟಿಕೆಟ್ ನೀಡಿದರೆ ಸಹಜವಾಗಿಯೇ ಅವರಿಗೆ ಬಿಜೆಪಿಯ ಮೇಲೆ ವಿಶ್ವಾಸ ಹೆಚ್ಚುತ್ತದೆ. ಇದು ಕರ್ನಾಟಕದಲ್ಲಿ ಪಕ್ಷದ ಇಮೇಜ್ ರೀಬಿಲ್ಡ್ ಆಗಲು ನೆರವಾಗುತ್ತದೆ. ಆ ಮೂಲಕ ದಕ್ಷಿಣ ಭಾರತದಲ್ಲಿ ಕಮಲ ಪಾಳಯ ನೆಲೆಯಾಗಲು ಸಾಧ್ಯವಾಗುತ್ತದೆ.

ಮುಂದೆ ಲೋಕಸಭಾ ಚುನಾವಣೆಯ ನಂತರ ದೇಶದ ಯಾವುದಾದರೂ ರಾಜ್ಯದಿಂದ ಪ್ರಲ್ಹಾದ್ ಜೋಷಿ ರಾಜ್ಯಸಭೆಗೆ ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಅವರಿಗೆ ನೀಡಬೇಕು ಎಂಬುದು ಮೋದಿಯವರ ಯೋಚನೆ.

ಅಂದ ಹಾಗೆ ಪ್ರಲ್ಹಾದ್ ಜೋಷಿ ಅವರ ವಿಷಯದಲ್ಲಿ ಮೋದಿಯವರಿಗೆ ವಿಶ್ವಾಸ ಬೆಳೆಯಲು ಸಂಘ ಪರಿವಾರ ಪ್ರಮುಖ ಕಾರಣವೆಂಬುದು ರಹಸ್ಯವಲ್ಲ. ಹೀಗಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ಜೋಷಿಯವರ ಹೆಸರು ಲೈಮ್ ಲೈಟಿಗೆ ಬಂದು ಇನ್ನೇನು ಅವರೇ ಸಿಎಂ ಆಗುತ್ತಾರೆ ಎಂಬ ಮಾತು ಕೇಳಿ ಬಂದಿತ್ತು.

ಆದರೆ ಯಾವಾಗ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಪೇಶ್ವೇ ಮೂಲದ ಬ್ರಾಹ್ಮಣರಾದ ಪ್ರಲ್ಹಾದ್ ಜೋಷಿಯವರನ್ನು ತಂದು ಕೂರಿಸಲು ಅರೆಸ್ಸೆಸ್ ಹುನ್ನಾರ ನಡೆಸಿದೆ ಅಂತ ಬಾಂಬು ಹಾಕಿದರೋ, ಇದಾದ ನಂತರ ಇದ್ದಕ್ಕಿದ್ದಂತೆ ಪ್ರಲ್ಹಾದ್ ಜೋಷಿ ಅವರನ್ನು ತಂದು ಕೂರಿಸುವ ಮಾತು ಸೈಡ್ ಲೈನಿಗೆ ಸರಿಯಿತು.

ಇದೇ ರೀತಿ 2023 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ನಳೀನ್ ಕುಮಾರ್ ಕಟೀಲ್ ಅವರನ್ನು ಕೆಳಗಿಳಿಸಿ ಪ್ರಲ್ಹಾದ್ ಜೋಷಿ ಅವರನ್ನು ತಂದು ಕೂರಿಸುವ ಪ್ರಯತ್ನ ನಡೆಯಿತು. ಆದರೆ ದಿಲ್ಲಿಯಲ್ಲಿ ತಮ್ಮ ಪರಮಾಪ್ತರಾಗಿ ಸೆಟ್ಲ್ ಆಗಿದ್ದ ಜೋಷಿಯವರನ್ನು ರಾಜ್ಯ ರಾಜಕಾರಣಕ್ಕೆ ಕಳಿಸಲು ಇದ್ದಕ್ಕಿದ್ದಂತೆ ಮೋದಿ ಹಿಂದೇಟು ಹಾಕಿದರು.

ಇಂದಿನ ದಿನ ಭವಿಷ್ಯ

ಆದರೆ ಮುಂಬರುವ ಲೋಕಸಭಾ ಚುನಾವಣೆಯ ನಂತರ ಪಕ್ಷದ ಹಾಲಿ ಅಧ್ಯಕ್ಷ ನಡ್ಡಾ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲು ಅವರು ಬಯಸಿರುವುದರಿಂದ, ಆ ಜಾಗಕ್ಕೆ ಪ್ರಲ್ಹಾದ್ ಜೋಷಿ ಅವರು ಬಂದು ಕೂರಲಿ ಅಂತ ಬಯಸಿದ್ದಾರೆ ಎಂಬುದು ರಾಜ್ಯದ ಕೆಲ ನಾಯಕರಿಗೆ ಈಗ ತಲುಪಿರುವ ವರ್ತಮಾನ.

ಅಂದ ಹಾಗೆ ಮೋದಿಯವರ ಈ ಲೆಕ್ಕಾಚಾರ ಕಾರ್ಯಗತವಾದರೆ ಕರ್ನಾಟಕ ಒಂದು ಚರಿತ್ರಾರ್ಹ ಬೆಳವಣಿಗೆಗೆ ಸಾಕ್ಷಿಯಾಗುತ್ತದೆ. ಕಾರಣ ಇವತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿರುವ ರಾಷ್ಟ್ರೀಯ ಕಾಂಗೆಸ್ ಪಕ್ಷಕ್ಕೆ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾರೆ. ಮುಂದೆ ಪ್ರಲ್ಹಾದ್ ಜೋಷಿ ಅವರೇನಾದರೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದರೆ ಕರ್ನಾಟಕದ ಖದರೇ ಬದಲಾಗಿ ಹೋಗುತ್ತದೆ.

ಹಾಗಾಗುತ್ತದಾ ಕಾದು ನೋಡಬೇಕು.

ಕುಮಾರಣ್ಣ ಏಕೆ ರಥ ಹತ್ತುತ್ತಿಲ್ಲ


ಈ ಮಧ್ಯೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರಾದ ಡಿ.ಸಿ.ತಮ್ಮಣ್ಣ, ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ ಸೇರಿದಂತೆ ಹಲವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ದೇವೇಗೌಡರ ಕುಟುಂಬದವರೇ ಪಕ್ಷದ ಕ್ಯಾಂಡಿಡೇಟ್ ಆಗಬೇಕು ಅಂತ ಠರಾವು ಪಾಸ್ ಮಾಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದೇವೇಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ಅವರು ಸೋಲು ಅನುಭವಿಸಿದರು. ಈ ಕಹಿ ಮರೆಯಾಗಬೇಕು ಎಂದರೆ ಅದೇ ಕುಟುಂಬದವರು ಮತ್ತೊಮ್ಮೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕು, ಅವರನ್ನು ಗೆಲ್ಲಿಸಿ ನಾವು ಕಹಿ ಮರೆಯಬೇಕು ಎಂಬುದು ಈ ನಾಯಕರ ವಾದ.

ಅರ್ಥಾತ್, ಈ ಸಲ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಪಕ್ಷದ ಕ್ಯಾಂಡಿಡೇಟ್ ಆಗಬೇಕು ಎಂಬುದು ಈ ನಾಯಕರ ಬಯಕೆ. ಹೀಗೆ ಮಂಡ್ಯದ ನಾಯಕರು ಕುಮಾರಸ್ವಾಮಿ ಅವರಿಗೆ ಗಾಳ ಹಾಕಲು ಯತ್ನಿಸುತ್ತಿರುವ ಕಾಲದಲ್ಲೇ ಬಿಜೆಪಿ ನಾಯಕ ಸಿ.ಪಿ.ಯೋಗೀಶ್ವರ್ ಕೂಡಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಸ್ಪರ್ಧಿಸಿದರೆ ಗೆಲ್ಲಿಸಿ ಕಳಿಸುತ್ತೇವೆ ಎನ್ನತೊಡಗಿದ್ದಾರೆ.

ಈ ಮಧ್ಯೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು, ಕರ್ನಾಟಕದಿಂದ ಲೋಕಸಭೆಗೆ ಗೆದ್ದು ಬಂದು ಕೇಂದ್ರ ಸಂಪುಟದಲ್ಲಿ ಮಂತ್ರಿಯಾಗಿ ಎಂಬ ಪ್ರಪೋಸಲ್ಲು ಕೊಟ್ಟು ಹಲವು ದಿನಗಳೇ ಆಗಿ ಹೋಗಿವೆ. ಆದರೆ ಹೀಗೆ ಎಲ್ಲ ಸೇರಿ ಗಾಳ ಹಾಕುತ್ತಿದ್ದರೂ ಕುಮಾರಸ್ವಾಮಿ ಮಾತ್ರ ಆ ಗಾಳಕ್ಕೆ ಬಾಯಿ ಕೊಡಲು ಸಿದ್ಧರಾಗುತ್ತಿಲ್ಲ.

ಕಾರಣ ಒಂದು ಸಲ ರಾಷ್ಟ್ರ ರಾಜಕಾರಣದ ಪಡಸಾಲೆಗೆ ತಲುಪಿದರೆ ಇಲ್ಲಿ ತಮ್ಮ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯ ಮೇಲಿನ ಹಿಡಿತ ತಪ್ಪಿ ಹೋಗುತ್ತದೆ. ಮೊದಲೇ ಡಿ.ಕೆ. ಬ್ರದರ್ಸ್ ರಾಮನಗರ ಜಿಲ್ಲೆಯ ರಾಜಕಾರಣದ ಮೇಲೆ ಹಿಡಿತ ಸಾಧಿಸಲು ಕಾದು ಕುಳಿತಿದ್ದಾರೆ. ಇಂತಹ ಸಂದರ್ಭದಲ್ಲಿ ದಿಲ್ಲಿಗೆ ಹೋಗುವುದು ಎಂದರೆ ತಾವೇ ಖುದ್ದಾಗಿ ಜಿಲ್ಲೆಯನ್ನು ಅವರ ವಶಕ್ಕೆ ಕೊಡುವುದು ಎಂದರ್ಥ.

ಇದೇ ರೀತಿ ತಾವು ಲೋಕಸಭೆಗೆ ಹೋದರೆ ಸದ್ಯ ತಾವು ಪ್ರತಿನಿಧಿಸುತ್ತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಸಿ.ಪಿ.ಯೋಗೀಶ್ವರ್ ನಿರಾಯಾಸವಾಗಿ ಗೆದ್ದುಕೊಳ್ಳುತ್ತಾರೆ. ಹೀಗೆ ಒಂದು ಕಡೆಯಿಂದ ಡಿ.ಕೆ. ಬ್ರದರ್ಸ್ ಮತ್ತೊಂದು ಕಡೆಯಿಂದ ಸಿ.ಪಿ.ಯೋಗೀಶ್ವರ್ ಅವರು ಜಿಲ್ಲೆಯ ಮೇಲೆ ಕಂಟ್ರೋಲು ತೆಗೆದುಕೊಂಡರೆ ಜಿಲ್ಲೆಯ ಮೇಲಿನ ತಮ್ಮ ಹಿಡಿತ ಕೈತಪ್ಪಿ ಹೋಗುತ್ತದೆ ಎಂಬುದು ಕುಮಾರಸ್ವಾಮಿ ಅವರ ಚಿಂತೆ.

ಈ ಮಧ್ಯೆ ಲೋಕಸಭೆ ಚುನಾವಣೆಗೆ ನಿಲ್ಲಲು ಅವರಿಗೆ ಮತ್ತೊಂದು ಸಮಸ್ಯೆಯೂ ಇದೆ. ಅದೆಂದರೆ, ಬಿಜೆಪಿ ಜತೆಗಿನ ಮೈತ್ರಿ. ಒಂದು ವೇಳೆ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ತಮ್ಮ ಕುಟುಂಬದಿಂದ ಎಷ್ಟು ಮಂದಿ ಸ್ಪರ್ಧಿಸಬೇಕು ಎಂಬ ವಿಷಯದಲ್ಲಿ ತಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ.

ಆದರೆ ಈ ಸಲ ಹಾಗಲ್ಲ, ತಮ್ಮ ಕುಟುಂಬದಿಂದ ಇಬ್ಬಿಬ್ಬರು ಸ್ಪರ್ಧಿಸುವುದು ಸರಿಯಲ್ಲ ಎಂಬುದು ಕುಮಾರಸ್ವಾಮಿ ಅವರ ಯೋಚನೆ. ಹಾಸನ ಲೋಕಸಭಾ ಕ್ಷೇತ್ರದಿಂದ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧಿಸುವುದು ಬಹುತೇಕ ಖಚಿತವಾಗಿರುವುದರಿಂದ ತಾವು ಕೂಡಾ ಲೋಕಸಭೆಗೆ ಸ್ಪರ್ಧಿಸುವುದು ಸರಿಯಲ್ಲ ಎಂಬುದು ಅವರ ಯೋಚನೆ.

ಹೀಗಾಗಿ ಲೋಕಸಭೆಗೆ ಸ್ಪರ್ಧಿಸುವಂತೆ ಯಾವ ಮೂಲೆಯಿಂದ ಆಫರ್ ಬಂದರೂ ರಥ ಹತ್ತಲು ಅವರು ಇಷ್ಟ ಪಡುತ್ತಿಲ್ಲ.

ಬಿಜೆಪಿಗೆ ಮಾಸ್ಟರ್ಸ್ ಸ್ಟ್ರೋಕ್?

ಇನ್ನು ಪ್ರಧಾನಿ ಮೋದಿ ಅಲೆಯ ಬಲದಿಂದ ಕರ್ನಾಟಕದಲ್ಲಿ ಬಂಪರ್ ಗೆಲುವು ಸಾಧಿಸುವ ಕನಸು ಕಾಣುತ್ತಿರುವ ವಿಜಯೇಂದ್ರ ಪಡೆಗೆ ಮಾಸ್ಟರ್ಸ್ ಸ್ಟ್ರೋಕ್ ಆಗುವ ಲಕ್ಷಣಗಳು ಕಾಣುತ್ತಿವೆ. ಅರ್ಥಾತ್, ಲೋಕಸಭೆ ಚುನಾವಣೆಗೆ ಅಂತ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಕಟ್ಟಲು ಹೊರಟಿರುವ ಪಡೆ ಪಕ್ಷದ ಬಹುತೇಕ ಹಿರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಅದು ಪದಾಧಿಕಾರಿಗಳಿರಲಿ, ಇನ್ನೇನೇ ಪೋಸ್ಟುಗಳಿರಲಿ, ಒಟ್ಟಿನಲ್ಲಿ ಅರವತ್ತು ವರ್ಷ ಮೀರಿದವರಿಗೆ ಪಟ್ಟಿಯಲ್ಲಿ ಜಾಗ ಲೇದು ಅಂತ ವಿಜಯೇಂದ್ರ ಔಟ್ ರೈಟಾಗಿ ಹೇಳಿರುವುದು ಹಿರಿಯರ ಈ ಸಿಟ್ಟಿಗೆ ಕಾರಣ.

ಅದು ಮಾಜಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡು ಇರಬಹುದು, ತುರುವೇಕೆರೆಯ ಎಂ.ಡಿ.ಲಕ್ಷ್ಮಿನಾರಾಯಣ್ ಅವರಿರಬಹುದು, ವಿರಾಜಪೇಟೆಯ ಮಾಜಿ ಶಾಸಕ ಹೆಚ್.ಡಿ.ಬಸವರಾಜು ಅವರೇ ಇರಬಹುದು. ಒಟ್ಟಿನಲ್ಲಿ ಹಿರಿಯರು ಅಂತ ಯಾರಿದ್ದಾರೆ ಅವರು ತಮ್ಮನ್ನು ಇಂಡಿಪೆಂಡೆಂಟಾಗಿ ಭೇಟಿ ಮಾಡಿ ಪಟ್ಟಿಯಲ್ಲಿ ಜಾಗ ಕೊಡಿ ಅಂತ ಕೇಳಿದರೆ:ರೀ ಅರವತ್ತು ವರ್ಷ ಮೀರಿದವರಿಗೆ ಪಕ್ಷದಲ್ಲಿ ಯಾವ ಸ್ಥಾನ ಕೊಡಬೇಡಿ ಅಂತ ಹೈಕಮಾಂಡ್ ಹೇಳಿದೆ. ನಿಮಗೂ ಈಗ ಅರವತ್ತು ವರ್ಷ ದಾಟಿದೆ. ಹೀಗಾಗಿ ನಿಮಗೆ ಚಾನ್ಸು ಕೊಡುವುದು ಇಂಪಾಸಿಬಲ್ ಅಂತ ವಿಜಯೇಂದ್ರ ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ.

ಯಾವಾಗ ಅವರು ಈ ಮಾತು ಹೇಳಿದರೋ ಇದಾದ ನಂತರ ರಾಜ್ಯ ಬಿಜೆಪಿಯ ಬಹುತೇಕ ಹಿರಿಯ ನಾಯಕರು ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದ ಕಡೆ ತಲೆ ಹಾಕುತ್ತಿಲ್ಲ.

ಅಂದ ಹಾಗೆ ಪಕ್ಷದಲ್ಲಿ ತಮಗೆ ಜಾಗ ಕೊಡಿ ಅಂತ ಕೇಳಿ ನಿರಾಶರಾಗಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ರೀ ಬರ್ತ್‌ಗೆ ಕಾರಣವಾಗಿದ್ದ ಸಮಾವೇಶವೊಂದರ ಮೂಲ ಶಕ್ತಿಯಾಗಿದ್ದವರು. 2004 ರಲ್ಲಿ ತಮಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸ್ಥಾನ ಸಿಗಲು ಅನಂತಕುಮಾರ್ ಅಡ್ಡಿಯಾದಾಗ ಇದೇ ಯಡಿಯೂರಪ್ಪನವರು ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಬೆಂಗಳೂರಿನ ಜಕ್ಕರಾಯನಕೆರೆ ಮೈದಾನದಲ್ಲಿ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿದ್ದರು.

ಈ ಸಮಾವೇಶಕ್ಕೆ ಲಿಂಗಾಯತ ಮಠಾಧಿಪತಿಗಳನ್ನು ಕರೆಸಿ ಬಿಜೆಪಿ ಹೈಕಮಾಂಡ್‌ಗೆ ಎಚ್ಚರಿಕೆಯ ಸಂದೇಶ ರವಾನೆಯಾಗುವಂತೆ ನೋಡಿಕೊಂಡ ಯಡಿಯೂರಪ್ಪನವರು ಆ ಮೂಲಕ ಲಿಂಗಾಯತ ನಾಯಕರಾಗಿ ಎಮರ್ಜ್ ಆಗಿದ್ದರು. ಅಂದ ಹಾಗೆ ಅವರು ಲಿಂಗಾಯತ ನಾಯಕ ಅಂತ ಎಮರ್ಜ್ ಆದ ಆ ಸಮಾವೇಶದ ಹಿಂದೆ ಶಕ್ತಿಯಾಗಿ ನಿಂತಿದ್ದ ತಮಗೆ ಇವತ್ತು ಪಕ್ಷದ ಪದಾಧಿಕಾರಿಯಾಗಲು ಸಾಧ್ಯವಾಗುತ್ತಿಲ್ಲ ಎಂಬುದು ಕಟ್ಟಾ ನೋವು.

ಇದೇ ರೀತಿ ರಾಜ್ಯದ ನೇಕಾರ ಸಮುದಾಯದ ಲೀಡರು ಅಂತ ಗುರುತಿಸಿಕೊಂಡವರು ಎಂ.ಡಿ.ಲಕ್ಷ್ಮೀನಾರಾಯಣ್. ಆದರೆ ಅವರಿಗೂ ಈಗ ಸಿಕ್ಸ್‌ಟೀ ಹೊಡೆತ ಬಿದ್ದಿದೆ. ಹೀಗೆ ಹೇಳುತ್ತಾ ಹೋದರೆ ಪಕ್ಷದ ಬಹುತೇಕ ಹಿರಿಯರದು ಇದೇ ಕತೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • WhatsApp
  • Post
  • Tweet
  • Print
  • Email
bjp national presidentbs yadiyurappaby vijyendrahd kumaraswamyjp naddamandya lsprahlad joshiramanagara constituency
Share 7 FacebookTwitterPinterestEmail
admin

previous post
ಇಂದಿನ ಭವಿಷ್ಯ
next post
ಅಯೋಧ್ಯೆ ರಾಮಲಲ್ಲಾಗೆ ಅಗ್ರ ಪೂಜೆ

You may also like

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ,...

May 18, 2025

ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ...

May 16, 2025

ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

May 15, 2025

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

May 15, 2025

ಸಕಾರದಿಂದ 108 ಆಂಬುಲೆನ್ಸ್ ಸೇವೆ

May 14, 2025

ಸಂಭ್ರಮಾಚರಣೆ: ಸಿದ್ದರಾಮಯ್ಯ – ಡಿಕೆಶಿ ಗೊಂದಲ

May 12, 2025

ಪ್ರಧಾನಿ ಮೋದಿ ನಿರ್ಧಾರ ಎಲ್ಲರೂ ಬೆಂಬಲಿಸಬೇಕು

May 12, 2025

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ...

May 8, 2025

ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

May 6, 2025

‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

May 3, 2025

2 comments

ಅಯೋಧ್ಯೆ ರಾಮಲಲ್ಲಾಗೆ ಅಗ್ರ ಪೂಜೆ – KMS January 22, 2024 - 9:55 am

[…] Special Story […]

Reply
ಕನಕಪುರ, ರಾಮನಗರದಲ್ಲಿ ತಲಾ ಒಂದು ಮೆಡಿಕಲ್ ಕಾಲೇಜು – KMS January 22, 2024 - 11:50 am

[…] Special Story […]

Reply

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (179)
  • ಅಂಕಣ (101)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,582)
  • ರಾಜ್ಯ (1,871)
  • ರಾಷ್ಟ್ರ (1,843)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025
  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025

KMS Special

  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

    May 3, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ...

May 18, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ