ರಾಷ್ಟ್ರದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಹೆಚ್ಚಳ
ಬೆಂಗಳೂರು:ರಾಷ್ಟ್ರದಲ್ಲಿ ಫ್ಯಾಸಿಸ್ಟ್ ಶಕ್ತಿಗಳ ಹೆಚ್ಚಳದ ಆತಂಕ ಹಾಗೂ ಮಹಾತ್ಮ ಗಾಂಧಿ ಪ್ರಸ್ತಾಪಿಸಿದ ಪರಿಹಾರಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲಾ ಶಿಕ್ಷಣ ಇಲಾಖೆಗೆ ಆದೇಶಿಸಿದ್ದಾರೆ.
ಈ ಕುರಿತು ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು 10 ಮತ್ತು 12ನೇ ತರಗತಿ ಹೊರತುಪಡಿಸಿ, ಉಳಿದ ತರಗತಿ ವಿದ್ಯಾರ್ಥಿಗಳಿಗೆ ಈ ಕುರಿತಾದ ಪ್ರಬಂಧಗಳನ್ನು ಏರ್ಪಡಿಸಿ ಎಂದಿದ್ದಾರೆ.
ಜ್ಞಾನಾರ್ಜನೆ ಮತ್ತು ಶಿಕ್ಷಣದ ಗುಣಮಟ್ಟ
ಉನ್ನತ ಶಿಕ್ಷಣದ ಘಟ್ಟ ಪ್ರವೇಶ ಪರೀಕ್ಷೆಗಳಾದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹೊರತುಪಡಿಸಿ ಉಳಿದ ಎಲ್ಲಾ ಹಂತಗಳಲ್ಲೂ ವಿದ್ಯಾರ್ಥಿಗಳು ಪ್ರಬಂಧ ಬರೆಯುವುದರಿಂದ ಅವರ ಜ್ಞಾನಾರ್ಜನೆ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚುತ್ತದೆ.
ಆರನೇ ತರಗತಿ ಮೇಲ್ಪಟ್ಟು ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೂ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಅದರಲ್ಲೂ 21ನೇ ಶತಮಾನದ ಕಳವಳಗಳು ಮತ್ತು ಗಾಂಧಿ ಚಿಂತನೆಗಳು ನೀಡಿದ ಪರಿಹಾರಗಳು ಎಂಬ ವಿಷಯಕ್ಕೆ ಒತ್ತು ಕೊಡಿ.
ಭಾರತ್ ಜೋಡೋ ಪಾದಯಾತ್ರೆ ತಡೆಗೆ ಖಂಡನೆ
ಗಾಂಧೀಜಿಯವರು ಹತ್ಯೆಯಾಗಿ ಏಳೂವರೆ ದಶಕಗಳು ಕಳೆದಿವೆ, ಮಹಾತ್ಮರು ತಮ್ಮ ಜೀವನದುದ್ದಕ್ಕೂ ಶಾಂತಿ, ಅಹಿಂಸೆ, ಸತ್ಯತೆ, ವಿಕೇಂದ್ರೀಕರಣ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ನಿಲುವುಗಳನ್ನು ಆಚರಿಸಿ, ಪ್ರತಿಪಾದಿಸುತ್ತಿದ್ದರು.
ಮನುಷ್ಯರು ಅಳಿಸಿಹೋಗುವ ದುಸ್ಥಿತಿ
ಇಂದು ಜಾಗತಿಕ ಪರಿಸರದ ಬಿಕ್ಕಟ್ಟುಗಳು, ಕೃತಕ ಬುದ್ಧಿಮತ್ತೆ, ಹಿಂಸಾ ವಿನೋದ ಮುಂತಾದವುಗಳಿಂದಾಗಿ ಮನುಷ್ಯರು ಈ ಭೂಮಿಯ ಮೇಲಿಂದಲೇ ಅಳಿಸಿಹೋಗುವ ದುಸ್ಥಿತಿಗೆ ತಲುಪಿಯಾಗಿದೆ.
ದೊಡ್ಡ ಭಾಷೆಗಳು ಸಣ್ಣ-ಸಣ್ಣ ಭಾಷೆಗಳನ್ನು ನುಂಗಿಹಾಕುತ್ತಿವೆ, ಯಾವುದೇ ಸಮಾಜ ಅಥವಾ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಳ್ಳುವುದೆಂದರೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವುದು ಎಂದರ್ಥ.
ಬಿಗಿ ಭದ್ರತೆಯಲ್ಲಿ ಪಿಎಸ್‌ಐ ಮರುಪರೀಕ್ಷೆ
ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಗಾಂಧಿಜೀ ಅವರನ್ನು ಅರಿತುಕೊಳ್ಳಲು ಅವಕಾಶ ಒದಗಿಸಿದಂತಾಗುತ್ತದೆ.
ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿ ತರಗತಿ ಮಕ್ಕಳಿಗೆ ಸೂಕ್ತ ಬಹುಮಾನ ನೀಡಿ, ಉಳಿದವರ ಭಾಗವಹಿಸುವಿಕೆಗಾಗಿ ಪ್ರಶಂಸಾ ಪತ್ರಗಳನ್ನು ನೀಡಿ ಮಕ್ಕಳನ್ನು ಉತ್ತೇಜಿಸಿ ಎಂದಿದ್ದಾರೆ.
1 comment
[…] ರಾಜಕೀಯ […]