ನಿಗಮ-ಮಂಡಳಿ ಪಟ್ಟಿ ಪರಿಷ್ಕರಣೆಗೆ ಸಿಟ್ಟು
ಬೆಂಗಳೂರು:ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ವಿರೋಧಿಗಳ ಜೊತೆ ಕೈಜೋಡಿಸಿದವರಿಗೆ ಹಾಗೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳದೆ ನಾಯಕರ ಮನೆ ಮುಂದೆ ಸುಳಿದಾಡುವವರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಮಾಡಿಕೊಡುತ್ತಿರುವುದಕ್ಕೆ ವರಿಷ್ಠರ ವಿರುದ್ಧವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿದೆದ್ದಿದ್ದಾರೆ.
ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ರಣದೀಪ್ ಸಿಂಗ್ ಸುರ್ಜೇವಾಲ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರಮುಖ ನಾಯಕರು ಕುಳಿತು ಪಟ್ಟಿ ಸಿದ್ಧಪಡಿಸಿ ವರಿಷ್ಠರಿಗೆ ಕಳುಹಿಸಿದ ನಂತರ ಅದರಲ್ಲಿ ಕೆಲವು ಬದಲಾವಣೆ ಮಾಡಿ 12 ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿರುವುದು ಮುಖ್ಯಮಂತ್ರಿ ಅವರ ಕೆಂಗಣ್ಣಿಗೆ ಗುರಿಯಾಗಿದೆ.
ಸುರ್ಜೇವಾಲ ಗುರುವಾರ ರಾಜ್ಯಕ್ಕೆ
ವರಿಷ್ಟರು ಕಳುಹಿಸಿರುವ ಪಟ್ಟಿಗೆ ತಾವು ಆದೇಶ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿರುವ ಮುಖ್ಯಮಂತ್ರಿ ಅವರನ್ನು ಸಮಾಧಾನ ಪಡಿಸಿ ಪಟ್ಟಿ ಪರಿಷ್ಕರಿಸಲು ಸುರ್ಜೇವಾಲ ಇದೇ ಗುರುವಾರ ರಾಜ್ಯಕ್ಕೆ ಬರುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಮಹಾತ್ಮ ಗಾಂಧಿ ಪ್ರಬಂಧ ಸ್ಪರ್ಧೆ
ನಿಗಮ-ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ಜನವರಿ 25ರ ಶುಕ್ರುವಾರದಂದು ಮತ್ತೆ ಮುಖಂಡರ ಸಭೆ ಸೇರಿ ಅಂತಿಮಗೊಳಿಸಲು ಪಕ್ಷ ನಿರ್ಧರಿಸಿದೆ.
ಹೊಸದಾಗಿ ಪಟ್ಟಿಗೆ 12 ಮಂದಿ
ಕಾಂಗ್ರೆಸ್ ಕಚೇರಿಯಲ್ಲಿ ಅತಿಥಿ ಸೇವೆ ವಿಭಾಗ ನೋಡಿಕೊಳ್ಳುವ ಸುಧೀಂದ್ರ, ಮೈಸೂರಿನಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ ನರೇಂದ್ರ ಸೇರಿದಂತೆ 12 ಮಂದಿಯನ್ನು ಹೊಸದಾಗಿ ಪಟ್ಟಿಗೆ ಸೇರಿಸಿರುವುದು ಮುಖ್ಯಮಂತ್ರಿ ಅವರಿಗೆ ಸಹಿಸಲಾಗದಾಗಿದೆ.
ಒತ್ತಡ ತಂದು ಪಟ್ಟಿಯಲ್ಲಿ ಸೇರ್ಪಡೆ
ಕೆಲವು ಸಚಿವರು ತಮ್ಮ ಬೆಂಬಲಿಗರನ್ನು ಅಧ್ಯಕ್ಷ ಸ್ಥಾನಕ್ಕೆ ತರಲು ವರಿಷ್ಠರ ಮೇಲೆ ಒತ್ತಡ ತಂದು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದಾರೆ. ಸಭೆಯಲ್ಲಿ ಯಾರ ಹೆಸರುಗಳನ್ನು ತಿರಸ್ಕರಿಸಲಾಗಿತ್ತೋ ಅಂತಹ ಹೆಸರುಗಳು ಮತ್ತೆ ಪಟ್ಟಿಗೆ ಸೇರ್ಪಡೆಗೊಂಡಿರುವುದು ಮುಖ್ಯಮಂತ್ರಿ ಅವರಿಗೆ ಸಿಟ್ಟು ತರಿಸಿದೆ.
ಬಿಗಿ ಭದ್ರತೆಯಲ್ಲಿ ಪಿಎಸ್‌ಐ ಮರುಪರೀಕ್ಷೆ
ಪಕ್ಷದ ಹಿರಿಯ ಶಾಸಕರಿಗಷ್ಟೇ ನಿಗಮಗಳ ಅಧ್ಯಕ್ಷ ಸ್ಥಾನ ಸೀಮಿತ ಎಂದು ಹೈಕಮಾಂಡ್ ಹೇಳಿದಂತೆ 37 ಸದಸ್ಯರಿಗೆ ಅವಕಾಶ ಮಾಡಿಕೊಟ್ಟೆವು. ನಂತರ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸಿ ಕಾರ್ಯಕರ್ತರಿಗೂ ಅವಕಾಶ ಮಾಡಿ ಎಂದರು, ಅವರ ಸಲಹೆಯಂತೆ ಹೊಸದಾಗಿ 35 ಮಂದಿ ಪಟ್ಟಿ ಸಿದ್ಧಪಡಿಸಿ ವರಿಷ್ಠರಿಗೆ ಕಳುಹಿಸಿಕೊಡಲಾಗಿತ್ತು.
ನಾವು ಕಳುಹಿಸಿದ ಪಟ್ಟಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ 12 ಹೆಸರುಗಳನ್ನು ಬದಲಿಸಿ ಅದೇ ಪ್ರಮಾಣದಲ್ಲಿ ಬೇರೆ ಹೆಸರುಗಳನ್ನು ಸೇರಿಸಿದ್ದಾರೆ.
ಏತಕ್ಕೆ ಸಮಯ ಹಾಳು ಮಾಡಬೇಕು
ರಾಜ್ಯ ನಾಯಕರು ಬಹಳ ಕಸರತ್ತು ನಡೆಸಿ ಸಿದ್ಧಪಡಿಸಿದ ಪಟ್ಟಿಯನ್ನೇ ಪರಿಷ್ಕರಣೆ ಮಾಡುವುದಾದರೆ ನಾವು ಏತಕ್ಕೆ ಇಷ್ಟು ಸಮಯ ಹಾಳು ಮಾಡಬೇಕಿತ್ತು ಎಂದು ಮುಖ್ಯಮಂತ್ರಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆ ತಡೆಗೆ ಖಂಡನೆ
ಚುನಾವಣೆಯಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದವರಿಗೆ ನಾನು ಅವಕಾಶ ಮಾಡಿಕೊಟ್ಟರೆ ಮುಖ್ಯಮಂತ್ರಿ ಗಾದಿಗೆ ಬೆಲೆ ಇದೆಯೇ, ನಾವು ಯಾರನ್ನು ದೂರ ಇರಿಸಿದ್ದೆವೋ ಅಂತಹವರನ್ನು ಪಟ್ಟಿಗೆ ಸೇರಿಸಿರುವುದನ್ನು ನಾನು ಸಹಿಸುವುದಿಲ್ಲ.
ನಾನಂತೂ ಈ ಪಟ್ಟಿಗೆ ಅನುಮತಿ ನೀಡುವುದಿಲ್ಲ, ಸರ್ಕಾರಿ ಆದೇಶವನ್ನೂ ಹೊರಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಅವರು ಬಿಗಿ ಪಟ್ಟು ಹಾಕಿರುವ ಹಿನ್ನೆಲೆಯಲ್ಲಿ ಸುರ್ಜೇವಾಲ, ಮುಖ್ಯಮಂತ್ರಿ ಅವರನ್ನು ಸಮಾಧಾನ ಪಡಿಸಿ ಪಟ್ಟಿ ಪರಿಷ್ಕರಿಸಲು ರಾಜ್ಯಕ್ಕೆ ಎರಡು ದಿನ ಪ್ರವಾಸ ಕೈಗೊಳ್ಳುತ್ತಿದ್ದಾರೆ.
2 comments
[…] Special Story […]
[…] Special Story […]