Monday, May 19, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Monday, May 19, 2025
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

Special Storyರಾಜಕೀಯರಾಜ್ಯರಾಷ್ಟ್ರವಿಶ್ಲೇಷಣೆ

ಕುಮಾರಸ್ವಾಮಿ-ಜಾರಕಿಹೊಳಿ ಆಪರೇಷನ್ ಯಶಸ್ವಿ

by admin January 25, 2024
written by admin January 25, 2024 2 comments 2 minutes read
Share 3FacebookTwitterPinterestEmail
238

ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಗೂಡಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನಿರಾಕರಣೆಯಿಂದ ಬೇಸತ್ತು ಪಕ್ಷ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಹಿಂದಿರುಗಿದ್ದಾರೆ.

ಕಳೆದ ಮೂರು ವಾರಗಳಿಂದ ತೆರೆಮರೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನಡೆಸಿದ ಆಪರೇಷನ್  ಫಲಪ್ರದವಾಗಿದೆ.

ಶೆಟ್ಟರ್ ಹಾದಿಯಲ್ಲೇ  ಮಾಜಿ ಉಪ ಮುಖ್ಯಮಂತ್ರಿ ಲಕ್ಮಣ ಸವದಿ, ಗಣಿಧಣಿ ಹಾಗೂ ಶಾಸಕ ಜನಾರ್ಧನರೆಡ್ಡಿ ಸೇರಿದಂತೆ ಇನ್ನೂ ಹಲವು ಮುಖಂಡರು ಕಮಲದ ಕೈ ಹಿಡಿಯುವ ಹಾದಿಯಲ್ಲಿದ್ದಾರೆ.

ಲೋಕಾ ಚುನಾವಣೆಗೂ ಮುನ್ನ ದೊಡ್ಡ ರಾಜಕೀಯ ಬೆಳವಣಿಗೆ

ಕಾಂಗ್ರೆಸ್ ಸರ್ಕಾರದ ಬುಡ ಅಲ್ಲಾಡಿಸಲಿರುವ ಬಿಜೆಪಿ ವರಿಷ್ಠರು

ಶೆಟ್ಟರ್ ನಂತರ ಸವದಿ ಸೇರಿದಂತೆ ಕೆಲವು ಮುಖಂಡರು ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಂತೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬುಡವನ್ನು ಅಲ್ಲಾಡಿಸಲು ಬಿಜೆಪಿ ವರಿಷ್ಠರು ಮುಂದಾಗಲಿದ್ದಾರೆ.

ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಸೆಳೆಯಲು ಮುಂದಾದ ಬೆನ್ನಲ್ಲೇ ಅವರ ಕಟ್ಟಾ ವಿರೋಧಿಗಳಾದ ಕುಮಾರಸ್ವಾಮಿ ಮತ್ತು ಜಾರಕಿಹೊಳಿ ಅವರಿಬ್ಬರೂ ಕೈಜೋಡಿಸಿ ರಾಜಕೀಯ ನಾಯಕರ ಆಪರೇಷನ್ ಗೆ ಇಳಿದಿದ್ದಾರೆ.

ಪ್ರೀತಿಯ ಹೂಮಳೆಯಲ್ಲಿ ಮುಳುಗಿಸಿದರು

ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆಯ ಸಮಾರಂಭ ಮುಗಿಯುತ್ತಿದ್ದಂತೆ ಕಳೆದ ಜನವರಿ 23ರ ಕುಮಾರಸ್ವಾಮಿ ಹಾಗೂ ಜಾರಕಿಹೊಳ್ಳಿ ಅವರು ಶೆಟ್ಟರ್ ಅವರನ್ನು ದೆಹಲಿಗೆ ಕರೆದುಕೊಂಡು ತೆರಳಿದ್ದರು.

ಗೌಪ್ಯವಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿಸಿ ಕುಮಾರಸ್ವಾಮಿ  ಅವರು ಜನವರಿ 24ರ ರಾತ್ರಿ ನಗರಕ್ಕೆ ಮರಳಿದ್ದರು.

ರಾಜಕೀಯ ಬೆಳವಣಿಗೆ ಅರಿಯದ ಕಾಂಗ್ರೆಸ್ ನಾಯಕರು

ಶೆಟ್ಟರ್ ದೆಹಲಿಗೆ ಧಾವಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ , ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಹಾಗೂ ಮಾಜಿ ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಜನವರಿ 24ರ ತಡರಾತ್ರಿ ದೆಹಲಿಗೆ ಕರೆಸಿಕೊಂಡ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರಿಗೆ ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಶೆಟ್ಟರ್ ಬಿಜೆಪಿ ಕಚೇರಿಗೆ ಧಾವಿಸಿದ್ದರು.

ಇತ್ತೀಚಿನವರೆಗೂ ಬಿಜೆಪಿಯನ್ನು ಟೀಕಿಸುತ್ತಿದ್ದ ಶೆಟ್ಟರ್, ಜನವರಿ 25ರ ಬೆಳಿಗ್ಗೆ ನಡ್ಡಾ ಅವರನ್ನು ಭೇಟಿಯಾದ ನಂತರ, ಕೇಂದ್ರ ಸಚಿವ ಹಾಗೂ ಚಾಣಾಕ್ಯ ರಾಜಕಾರಣಿ ಎಂದೆನಿಸಿಕೊಂಡಿರುವ ಭೂಪೇಂದ್ರಯಾದವ್ ಹಾಗೂ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೊಂದಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಶೆಟ್ಟರ್, ಅಧಿಕೃತವಾಗಿ ಕಮಲವನ್ನು ಸೇರಿದರು.

ಮೇಲ್ಮನೆ ಮತ್ತು ಕಾಂಗ್ರಸ್ ಸದಸ್ಯತ್ವಕ್ಕೆ ಶೆಟ್ಟರ್  ಇ- ಮೇಲ್ ಮೂಲಕ ರಾಜೀನಾಮೆ

ಬಿಜೆಪಿ ಸೇರ್ಪಡೆಗೂ ಮುನ್ನ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಪ್ರತ್ಯೇಕ ರಾಜೀನಾಮೆ ಪತ್ರಗಳನ್ನು ಇ- ಮೇಲ್ ಮೂಲಕ ಕಳುಸಿದ್ದರು.

ಅಷ್ಟೇ ಅಲ್ಲ, ಸಭಾಪತಿ ಅವರನ್ನು ಸಂಪರ್ಕಿಸಿ ತಮ್ಮ ವಿಧಾನ ಪರಿಷತ್ ಸದಸ್ಯತ್ವದ ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿಕೊಂಡರು. ಕಾಂಗ್ರೆಸ್ ಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಆ ಪಕ್ಷದ ಯಾವ ಮುಖಂಡರೊಂದಿಗೆ ಶೆಟ್ಟರ್ ಮಾತನಾಡಲಿಲ್ಲ.

ಡಿ.ಕೆ.ಶಿವಕುಮಾರ್ – ಲಕ್ಷ್ಮಣ ಸವದಿ ಮಾತುಕತೆ

ಹಠಾತ್ ನಡೆದ ಬೆಳವಣಿಗೆಯಲ್ಲಿ ಶೆಟ್ಟರ್ ಬಿಜೆಪಿ ಸೇರುತ್ತಿದ್ದಂತೆ ಎಚ್ಚೆತ್ತ ಡಿ.ಕೆ.ಶಿವಕುಮಾರ್ ಅವರು, ಲಕ್ಷ್ಮಣ ಸವದಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚಿಸಿದರು.

ಇದೇ ಸಂದರ್ಭದಲ್ಲಿ ಜನಾರ್ಧನರೆಡ್ಡಿ ಸೇರಿದಂತೆ  ಎರಡೂ ಕಡೆ ಪಾದ ಇಟ್ಟಿರುವ ಕೆಲವು ನಾಯಕರನ್ನು ಸಂಪರ್ಕಿಸಿ ಪ್ರಸಕ್ತ ರಾಜಕೀಯ ಬೆಳವಣಿಗೆ ಚರ್ಚಿಸಿದಲ್ಲದೆ, ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಓಪಿಎಸ್ ಜಾರಿ ಹಿಂದೆ ಕಾಂಗ್ರೆಸ್ ಸರ್ಕಾರದ ರಾಜಕೀಯ ಹಿತಾಸಕ್ತಿ

ಬಿಜೆಪಿ ಸೇರ್ಪಡೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಮರಳಿ ಬಿಜೆಪಿಗೆ ಬಂದಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಮ್ಮೆಲ್ಲ ಕಾರ್ಯಕರ್ತರ ಅಪೇಕ್ಷೆಯಂತೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಮರುಸೇರ್ಪಡೆ ಆಗಿದ್ದಾರೆ.

ಜಗದೀಶ್ ಶೆಟ್ಟರ್ ಅವರು ಪಕ್ಷದ ಅನೇಕ ಜವಾಬ್ದಾರಿ ವಹಿಸಿದ್ದವರು. ಮುಖ್ಯಮಂತ್ರಿಯಾಗಿದ್ದವರು. ಶೆಟ್ಟರ್ ಸೇರ್ಪಡೆಯಿಂದ ಬಿಜೆಪಿಗೆ ಹೆಚ್ಚು ಶಕ್ತಿ ಬಂದಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು.

ಬಾಲ ರಾಮ ದೇವರ ಗರ್ಭ ಗುಡಿಗೆ ಬಂದಿದ್ದ ಕೋತಿ!

Share this:

  • WhatsApp
  • Post
  • Tweet
  • Print
  • Email
back BJP foldBJP leadersCongress leadersD.K.SivakumarJagdish ShettarJarakiholikumaraswamyLakshmana Savadinot aware political developmentongress membershipoperation successfulShettar resigns Upper HouseTalkswill shake
Share 3 FacebookTwitterPinterestEmail
admin

previous post
ಲೋಕಾ ಚುನಾವಣೆಗೂ ಮುನ್ನ ದೊಡ್ಡ ರಾಜಕೀಯ ಬೆಳವಣಿಗೆ
next post
ದಿನ ಭವಿಷ್ಯ : ಶುಕ್ರವಾರ, 26 ಜನವರಿ 2024

You may also like

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ,...

May 18, 2025

ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ...

May 16, 2025

ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

May 15, 2025

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಪರಿಷ್ಕರಣೆ

May 15, 2025

ಸಕಾರದಿಂದ 108 ಆಂಬುಲೆನ್ಸ್ ಸೇವೆ

May 14, 2025

ಸಂಭ್ರಮಾಚರಣೆ: ಸಿದ್ದರಾಮಯ್ಯ – ಡಿಕೆಶಿ ಗೊಂದಲ

May 12, 2025

ಪ್ರಧಾನಿ ಮೋದಿ ನಿರ್ಧಾರ ಎಲ್ಲರೂ ಬೆಂಬಲಿಸಬೇಕು

May 12, 2025

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ...

May 8, 2025

ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

May 6, 2025

‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

May 3, 2025

2 comments

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸ್ಸು – KMS January 26, 2024 - 6:57 am

[…] Special Story […]

Reply
ಮುಖ್ಯಮಂತ್ರಿ ಅವರ ಶಿಷ್ಟಾಚಾರಗೆಟ್ಟ ನಡವಳಿಕೆಯ ಸಮರ್ಥನೆ,ಮೊಸಳೆ ಕಣ್ಣೀರ ಕಥೆಯನ್ನೂ ನಾಚಿಸುವಂತಿದೆ – KMS January 29, 2024 - 11:30 am

[…] ವಿಶ್ಲೇಷಣೆ […]

Reply

Leave a Comment Cancel Reply

Save my name, email, and website in this browser for the next time I comment.

Social Networks

Facebook Twitter Instagram Linkedin Youtube Email Rss

KMS Analysis

  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ಭಯೋತ್ಪಾದನೆ ನಿಗ್ರಹ: ಪ್ರಧಾನಿ ಮೋದಿಗೆ ಸಂಪೂರ್ಣ ಬೆಂಬಲ ಘೋಷಿಸಿದ ದೇವೇಗೌಡರು

    May 6, 2025
  • ಜಾತಿಗಣತಿ ವರದಿ ದತ್ತಾಂಶ ಮರುಪರಿಶೀಲನೆಗೆ ನಿರ್ಧಾರ

    April 18, 2025

Categories

  • Special Story (179)
  • ಅಂಕಣ (101)
  • ಉದ್ಯೋಗ (237)
  • ದಿನ ಭವಿಷ್ಯ (110)
  • ರಾಜಕೀಯ (1,582)
  • ರಾಜ್ಯ (1,871)
  • ರಾಷ್ಟ್ರ (1,843)
  • ವಿಶ್ಲೇಷಣೆ (183)
  • ಶಿಕ್ಷಣ (318)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ ಪ್ರಧಾನಿ ಮೋದಿ, ಅಮಿತ್ ಶಾ

    May 18, 2025
  • ಶತ್ರು ದೇಶದ ಕ್ಷೇಮಕ್ಕಾಗಿ ಕಾಂಗ್ರೆಸ್ ಮಿಡಿಯುತ್ತಿದೆ : ಹೆಚ್ ಡಿಕೆ ಟೀಕೆ

    May 16, 2025
  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025

KMS Special

  • ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

    May 15, 2025
  • ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಕಸರತ್ತು

    May 8, 2025
  • ‘ಗಂಗಾರತಿ’ ಮಾದರಿ ಕೆಆರ್‌ಎಸ್ ಬಳಿ ‘ಕಾವೇರಿ ಆರತಿ’

    May 3, 2025
  • Facebook
  • Twitter
  • Linkedin
  • Youtube
  • Email
  • Telegram
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

93ನೇ ವರ್ಷಕ್ಕೆ ಕಾಲಿಟ್ಟಿ ದೇವೇಗೌಡರು, ಶುಭ ಕೋರಿದ...

May 18, 2025
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ