ಪ್ರಮುಖ ದೇವಾಲಯಗಳಲ್ಲಿ ಕುಟುಂಬ ಸಹಿತ ವಿಶೇಷ ಪೂಜೆ
ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತಮ್ಮ ಪತ್ನಿ ಚೆನ್ನಮ್ಮ ಅವರೊಂದಿಗೆ ಪ್ರಮುಖ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕಳೆದ ಕೆಲವು ತಿಂಗಳಿಂದ ವಯೋ ಸಹಜ ತೊಂದರೆ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದ ಗೌಡರು, ಇದೀಗ ಪ್ರಮುಖ ದೇವಾಲಯಗಳಿಗೆ ತೆರಳಿ ಪೂಜೆ-ಪುನಸ್ಕಾರ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಮಹಾನ್ ದೈವ ಭಕ್ತರಾದ ಗೌಡರು, ಯಾವುದೇ ಶುಭ ಕಾರ್ಯ ಕೈಗೊಳ್ಳುವ ಮುನ್ನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಳ್ಳುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀರಾಮ ಮಂದಿರ ಟ್ರಸ್ಟ್ ನ ಆಹ್ವಾನದ ಮೇರೆಗೆ ಕುಟುಂಬದ ಜೊತೆಗೂಡಿ ಅಯೋಧ್ಯೆಗೆ ತೆರಳಿ ಬೆಳಗ್ಗಿನಿಂದ ಸಂಜೆಯವರೆಗೂ ಪೂಜಾ ಕೈಂಕರ್ಯದ ಸಮಾಭಾರಂಭದಲ್ಲಿ ಭಾಗಿಯಾಗಿದ್ದರು.
ಗೌಡರಿಗೆ ಭಕ್ತರ ನೂಕು ನುಗ್ಗಲಿಂದ ದೇವರ ದರ್ಶನ ಸಾಧ್ಯವಾಗಿರಲಿಲ್ಲ
ಬಾಲ ರಾಮ ಪ್ರಾಣ ಪ್ರತಿಷ್ಠಾಪನೆ ನಂತರ ದೇವರ ದರ್ಶನ ಪಡೆಯಲು ಅವರಿಗೆ ಭಕ್ತರ ನೂಕು ನುಗ್ಗಲಿಂದ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ತಾವು ಬಾಲ ರಾಮ ದೇವರ ದರ್ಶನ ಮತ್ತು ಆಶೀರ್ವಾದ ಪಡೆದೇ ಹೋಗಬೇಕು ಎಂದು ಅಲ್ಲಿಯೇ ಕುಳಿತುಬಿಟ್ಟರು.
ತಮ್ಮ ತಂದೆ ಜೊತೆಗೂಡಿ ಸಮಾರಂಭದಲ್ಲಿ ಭಾಗಿಯಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು, ಈ ನೂಕು ನುಗ್ಗಲಿನಲ್ಲಿ ದೇವರ ದರ್ಶನ ಸಾಧ್ಯವಾಗುವುದಿಲ್ಲ. ನಾವು ಇನ್ನೊಮ್ಮೆ ಬರೋಣ ಎಂದು ಗೌಡರ ಮನವೊಲಿಸುವ ಪ್ರಯತ್ನ ಮಾಡಿದರು.
ಆದರೂ ಪಟ್ಟುಬಿಡದ ಗೌಡರು ದರ್ಶನ ಮಾಡಿದ ನಂತರವೇ ತೆರಳುವುದಾಗಿ ಹೇಳಿ ಅಲ್ಲಿಯೇ ಕುಳಿತರು. ಚೆನ್ನಮ್ಮ ಅವರೂ ಕೂಡ ಅದೇ ರೀತಿ ಹಠವಿಡಿದಿದ್ದರು. ಕೊನೆಗೆ ಕುಮಾರಸ್ವಾಮಿ ಆಹ್ವಾನಿತರ ಶಿಷ್ಟಾಚಾರದ ಪಟ್ಟಿಯಲ್ಲಿದ್ದ ಅಧಿಕಾರಿಗಳ ಮೂಲಕ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ಮಾಜಿ ಪ್ರಧಾನಿ ದರ್ಶನಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡರು.
ಧರ್ಮ ಸ್ಥಳ, ಕುಕ್ಕೆ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಗೌಡರು
ತಕ್ಷಣವೇ ಜಾಗೃತರಾದ ಉತ್ತರ ಪ್ರದೇಶ ಮುಖ್ಯಕಾರ್ಯದರ್ಶಿ ಅವರು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮಾಹಿತಿ ನೀಡಿದರು. ಮಾಹಿತಿ ತಲುಪುತ್ತಿದ್ದಂತೆ ಮುಖ್ಯಮಂತ್ರಿ ಅವರು, ಗೌಡರಿದ್ದ ಸ್ಥಳಕ್ಕೆ ಧಾವಿಸಿ, ಆಗಿರುವ ಲೋಪದ ಬಗ್ಗೆ ಕ್ಷಮೆ ಯಾಚಿಸಿ, ಆ ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡದ್ದಲ್ಲದೆ, ತಾವೇ ಖುದ್ದಾಗಿ ಬಾಲ ರಾಮದೇವರ ದರ್ಶನ ಮಾಡಿಸಿ ಬೀಳ್ಕೊಟ್ಟರು.
ಜಗದೀಶ್ ಶೆಟ್ಟರ್ ಪಕ್ಷ ತೊರೆಯುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್; 34 ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ
ಅಯೋಧ್ಯೆಯಿಂದ ಹಿಂದಿರುಗುತ್ತಿದ್ದಂತೆ ಕುಮಾರಸ್ವಾಮಿ ಅವರು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿದ್ದರೆ, ಗೌಡರು, ಅಂದಿನಿಂದ ಇಲ್ಲಿಯವರೆಗೂ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನ ಜೆಪಿ ನಗರದ ಶ್ರೀನಿವಾಸ ದೇವಾಲಯದಿಂದ ಪೂಜೆ ಆರಂಭಿಸಿದ ಗೌಡರು, ಧರ್ಮಸ್ಥಳದ ಮಂಜುನಾಥಸ್ವಾಮಿ ಹಾಗೂ ಕುಕ್ಕೆ ಸುಬ್ರಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ನಿಂದ ಕಲೆಕ್ಷನ್
2 comments
[…] Special Story […]
[…] Special Story […]