ಕೇಂದ್ರ ಸಚಿವ ಭೂಪಿಂದರ್ ಯಾದವ್ ಗೆ ಮಣೆ ಹಾಕಿದ ಬಿಜೆಪಿ ವರಿಷ್ಠರು
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸೋಲಿನ ನಂತರ ಎಚ್ಚೆತ್ತುಕೊಂಡ ಬಿಜೆಪಿ ವರಿಷ್ಠರು ರಾಜ್ಯ ಉಸ್ತುವಾರಿ ಹೊಣೆ ಹೊತ್ತಿದ್ದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಹಾಗೂ ಅರುಣ್ ಸಿಂಗ್ ಅವರಿಗೆ ಗೇಟ್ ಪಾಸ್ ನೀಡಲಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಈ ಮಹತ್ತರ ಬದಲಾವಣೆಯ ನಿಲುವು ತೆಗೆದುಕೊಂಡಿರುವ ದೆಹಲಿ ನಾಯಕರು ಈಗ ಎಲ್ಲ ಜವಾಬ್ದಾರಿಯನ್ನು ಕೇಂದ್ರ ಸಚಿವ ಭೂಪಿಂದರ್ ಯಾದವ್ ಅವರಿಗೆ ನೀಡಿದ್ದಾರೆ.
ರಾಜ್ಯ ಉಸ್ತುವಾರಿ ಹೊಣೆ ಹೊತ್ತಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರನ್ನು ಬದಲಾವಣೆ ಮಾಡದಿದ್ದರೂ ಕರ್ನಾಟಕದ ಎಲ್ಲಾ ಚಟುವಟಿಕೆಗಳಿಂದ ದೂರ ಇರಿಸಿದ್ದಾರೆ.
ಸಂತೋಷ್ ಹಿಡಿತದಿಂದ ರಾಜ್ಯ ಬಿಜೆಪಿ ಮುಕ್ತ
ವಿಧಾನಸಭಾ ಚುನಾವಣೆಯ ಸೋಲಿಗೆ ಸಂತೋಷ್ ಹಾಗೂ ಅರುಣ್ ಸಿಂಗ್ ಕಾರಣ ಎಂದು ರಾಜ್ಯದ ಹಲವು ಮುಖಂಡರು ಮತ್ತು ಸಂಸದರು ಆಂತರಿಕ ಹಾಗೂ ಬಹಿರಂಗವಾಗಿ ದೂರು ನೀಡಿದ ಬೆನ್ನಲ್ಲೇ ವರಿಷ್ಠರು ಎಚ್ಚೆತ್ತಿದ್ದಾರೆ.
ಈ ಉಭಯ ನಾಯಕರನ್ನು ಕರ್ನಾಟಕದಿಂದ ದೂರ ಇರಿಸುತ್ತಿದ್ದಂತೆ ಪಕ್ಷದಿಂದ ಹೊರಹೋಗಿದ್ದ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಮುಖಂಡರು ಮರಳಿ ಪಕ್ಷಕ್ಕೆ ಬಂದಿದ್ದಾರೆ ಹಾಗೂ ಬರುತ್ತಿದ್ದಾರೆ.
ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ
ಶೆಟ್ಟರ್ ದೆಹಲಿಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾರ್ಯಕ್ರಮವೂ ಭೂಪಿಂದರ್ ಯಾದವ್ ಅವರ ಸಮ್ಮಖದಲ್ಲೇ ಎಲ್ಲಾ ನಡೆಯಿತು.
ಕಳೆದ ವಾರ ಅರಮನೆ ಆವರಣದಲ್ಲಿ ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ನಡೆದ ಪದಾಧಿಕಾರಿಗಳ ಸಭೆಯಲ್ಲೂ ಅರುಣ್ ಸಿಂಗ್ ಭಾಗವಹಿಸಿರಲಿಲ್ಲ, ಅಲ್ಲಿಯೂ ಭೂಪಿಂದರ್ ಯಾದವ್ ಅವರೇ ಮುಂದಾಳತ್ವ ವಹಿಸಿದ್ದರು.
ಸಂಘ ಪರಿವಾರದಿಂದ ಬಂದಿರುವ ಭೂಪಿಂದರ್ ಯಾವುದೇ ರಾಜ್ಯದಲ್ಲಿ ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗ ಅಲ್ಲಿನ ಜವಾಬ್ದಾರಿ ವಹಿಸಿಕೊಂಡು ಸಂಕಷ್ಟದಿಂದ ಪಾರು ಮಾಡಿದ್ದಾರೆ.
ಭೂಪಿಂದರ್ ಯಾದವ್ ಕರ್ನಾಟಕದ ಉಸ್ತುವಾರಿ
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯಾದವ್ ಅವರಿಗೆ ಈಗ ಕರ್ನಾಟಕದ ಉಸ್ತುವಾರಿ ನೀಡಲಾಗಿದೆ.
ಇದೇ ಸಮಯದಲ್ಲಿ ಸಂತೋಷ್ ಅವರ ಹಿಡಿತದಿಂದ ರಾಜ್ಯ ಘಟಕ ಮತ್ತು ಸಂಘಟನಾ ಚಟುವಟಿಕೆಗಳನ್ನು ಮುಕ್ತಗೊಳಿಸಲಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಎನ್‌ಡಿಎ ಅಭ್ಯರ್ಥಿ ಹಿರಿಯ ವಕೀಲ ಎ.ಪಿ. ರಂಗನಾಥ್
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಲಹೆಯಂತೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಿದ್ಧಪಡಿಸಿರುವ ಪದಾಧಿಕಾರಿಗಳ ಪಟ್ಟಿಗೂ ವರಿಷ್ಠರು ಹಸಿರು ನಿಶಾನೆ ನೀಡಿದರು.
ಪದಾಧಿಕಾರಿಗಳ ಈ ಪಟ್ಟಿಯಲ್ಲಿ ಸಂತೋಷ್ ಅವರ ಯಾವುದೇ ಆಪ್ತರಿಗೆ ಮತ್ತು ಬೆಂಬಲಿಗರಿಗೆ ಸ್ಥಾನಮಾನ ನೀಡಲಿಲ್ಲ ಮತ್ತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಪ್ರಮುಖ ಹೊಣೆಗಾರಿಕೆ ನಿರ್ವಹಿಸುತ್ತಿದ್ದವರನ್ನೂ ಬದಲಾವಣೆ ಮಾಡಲಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳಲ್ಲೂ ಗೆಲ್ಲುವ ಗುರಿಯೊಂದಿಗೆ ಬಿಜೆಪಿ ವರಿಷ್ಠರು ಅನೇಕ ಬದಲಾವಣೆಗಳನ್ನು ಪಕ್ಷದಲ್ಲಿ ಮಾಡಿ ಚುನಾವಣೆಗೆ ಅಣಿಯಾಗುತ್ತಿದ್ದಾರೆ.