ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡುವ ಕಾಲಾವಧಿ ವಿಸ್ತರಣೆ ಇಲ್ಲ
ಬೆಂಗಳೂರು: ತೀವ್ರ ಬರಗಾಲದಿಂದ ರೈತ ಸಂಕಷ್ಟದಲ್ಲಿದ್ದರೂ ಕೃಷಿ ಸಾಲ ಮನ್ನಾ ಅಸಾಧ್ಯ ಎಂದಿರುವ ಸಹಕಾರಿ ಸಚಿವ ಕೆ.ಎನ್. ರಾಜಣ್ಣ, ದೀರ್ಘಾವಧಿ ಸಾಲದ ಮೇಲಿನ ಬಡ್ಡಿ, ಚಕ್ರಬಡ್ಡಿ ಮನ್ನಾ ಮಾಡುವ ಕಾಲಾವಧಿ ವಿಸ್ತರಣೆ ಪ್ರಸ್ತಾಪ ಇಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆಡಳಿತದಲ್ಲಿ ಸಾಲ ಮನ್ನಾ ಮಾಡಿದ 400 ಕೋಟಿ ರೂ. ಇನ್ನೂ ತೀರಿಸಲಾಗುತ್ತಿಲ್ಲ. ಅದೇ ಬಾಕಿ ಇರುವಾಗ ಹೊಸದಾಗಿ ಸಾಲ ಮನ್ನಾ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಬಡ್ಡಿ ಹಾಗೂ ಚಕ್ರಬಡ್ಡಿ ಮನ್ನಾ ಮಾಡುವ ಅವಕಾಶ ಫೆಬ್ರವರಿ ಅಂತ್ಯದವರೆಗೆ
ರೈತನ ಸಂಕಷ್ಟದ ಅರಿವು ನಮಗೂ ಇದೆ. ಹಾಗೆಂದೇ ಸರ್ಕಾರ ಬರ ಪರಿಹಾರ ಸೇರಿದಂತೆ ಇತರ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಜೊತೆಗೆ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ದೀರ್ಘಾವಧಿ ಸಾಲವನ್ನು ಪೂರ್ಣವಾಗಿ ಪಾವತಿಸಿದರೆ ಅದರ ಮೇಲಿನ ಬಡ್ಡಿ ಹಾಗೂ ಚಕ್ರಬಡ್ಡಿ ಮನ್ನಾ ಮಾಡುವ ಅವಕಾಶ ಫೆಬ್ರವರಿ ಅಂತ್ಯದವರೆಗೆ ಇದ್ದು, ಇದನ್ನು ಬಳಸಿಕೊಳ್ಳಬಹುದು.
ರೈತರು ಸೇರಿದಂತೆ ಸಹಕಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಯಶಸ್ವಿನಿ ಯೋಜನೆ ಮರುಜಾರಿಗೆ ತರಲಾಗಿದೆ. ಕೇಂದ್ರದ ಆಯುಷ್ಮಾನ್ ಯೋಜನೆಯಡಿ ಹೇಗೆ ಚಿಕಿತ್ಸಾ ದರವನ್ನು ನಿಗದಿ ಪಡಿಸಲಾಗಿದೆಯೋ ಅದೇ ರೀತಿ ಯಶಸ್ವಿನಿ ಯೋಜನೆಗೂ ಅಳವಡಿಸಲಾಗಿದೆ.
ಚಿಕಿತ್ಸೆ ಪಡೆದ ಒಂದು ವಾರದೊಳಗೆ ಹಣ ಪಾವತಿ
ಯಶಸ್ವಿನಿ ಯೋಜನೆಯಡಿ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಒಂದು ವಾರದೊಳಗೆ ಹಣ ಪಾವತಿ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಯೊಜನೆಯಡಿ ಹಿಂದೆ ಯಾವ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿದ್ದವೋ, ಆ ಆಸ್ಪತ್ರೆಗಳ ಜೊತೆಗೆ ಹೊಸ ಆಸ್ಪತ್ರೆಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಯುವಜನರಿಗೆ ಉದ್ಯೋಗಾವಕಾಶ ಒದಗಿಸಲು ಸರ್ಕಾರ ಬದ್ಧ – ಡಾ.ಶರಣ ಪ್ರಕಾಶ್ ಪಾಟೀಲ್
ಈ ಹಿಂದೆ ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಿದ ನಂತರ ಖಾಸಗಿ ಆಸ್ಪತ್ರೆಗಳಿಗೆ ನೀಡಬೇಕಿರುವ ಹಣ 20 ರಿಂದ 30ಕೋಟಿ ರೂ. ಬಾಕಿ ಉಳಿದಿದೆ. ಅಂತಹ ಆಸ್ಪತ್ರೆಗಳು ಮಾತ್ರ ಈ ಯೋಜನೆಯನ್ನು ಅಳವಡಿಸಿಕೊಳ್ಳುತ್ತಿಲ್ಲ.
ಆದರೆ, ಈ ಸಮಸ್ಯೆಯನ್ನು ಬಗೆಹರಿಸಿ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಯಶಸ್ವಿನಿ ಯೋಜನೆಯಡಿ ಜನರಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಹಕಾರಿ ಬ್ಯಾಂಕ್‌ಗಳಲ್ಲಿ ಜನ ಠೇವಣಿ ಇಡುವುದಕ್ಕೂ ಮುನ್ನ ಆ ಸಂಸ್ಥೆಯ ಆಡಳಿತ ಮಂಡಳಿಯ ಆರ್ಥಿಕ ನಿಲುವುಗಳನ್ನು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದರು.
ಆಡಳಿತ ಮಂಡಳಿಯ ಅವ್ಯವಹಾರದಿಂದ ಕೆಲವು ಬ್ಯಾಂಕ್‌ಗಳು ದಿವಾಳಿಯಾಗಿ ಠೇವಣಿ ಇಟ್ಟ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೆಲವು ಬ್ಯಾಂಕ್‌ಗಳ ಪ್ರಕರಣ ಸಿಬಿಐ ಅಂಗಳದಲ್ಲಿದ್ದರೂ ತನಿಖೆ ಪೂರ್ಣಗೊಳ್ಳದೆ ಗ್ರಾಹಕರಿಗೆ ಪರಿಹಾರವೂ ದೊರೆತಿಲ್ಲ ಎಂದರು.
1 comment
[…] Special Story […]