ಜೆಡಿಎಸ್ ನಲ್ಲಿ ನೂತನ ಪದಾಧಿಕಾರಿಗಳ ನೇಮಕ
ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿರುವ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಐವರು ಕಾರ್ಯಾಧ್ಯಕ್ಷರು
ಮಾಜಿ ಸಚಿವರಾದ ಸಾ.ರಾ.ಮಹೇಶ್, ಅಲ್ಕೊಡ್ ಹನುಮಂತಪ್ಪ, ಸಿ.ಬಿ.ಸುರೇಶ್ ಬಾಬು, ಭೀಮಗೌಡ ಬಸನಗೌಡ ಪಾಟೀಲ್ (ರಾಜೂಗೌಡ), ದೊಡ್ಡಪ್ಪಗೌಡ ಶಿವಲಿಂಗಪ್ಪಗೌಡ ನರಿಬೋಳ ಅವರನ್ನು ನೇಮಕವಾಗಿದ್ದಾರೆ.
ಹಿರಿಯ ಉಪಾಧ್ಯಕ್ಷರು
ಮಾಜಿ ಶಾಸಕರಾದ ಡಾ.ಶ್ರೀನಿವಾಸ ಮೂರ್ತಿ, ರವೀಂದ್ರ ಶ್ರೀಕಂಠಯ್ಯ, ಸೋಮಣ್ಣ ಗೌಡ ಪಾಟೀಲ್, ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರು
ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ರಾಜಾ ವೆಂಕಟಪ್ಪ ನಾಯಕ ದೊರೆ, ಕರೆಮ್ಮ ಜಿ.ನಾಯಕ, ಚೌಡರೆಡ್ಡಿ ತೂಪಲ್ಲಿ, ಸುನೀತಾ ಚೌಹಾಣ್, ಕೆ.ಬಿ.ಪ್ರಸನ್ನ ಕುಮಾರ್, ಟಿ. ಎ.ಶರವಣ ಅವರನ್ನು ನೇಮಿಸಿದ್ದಾರೆ.
ಮಹಾ ಪ್ರಧಾನ ಕಾರ್ಯದರ್ಶಿಯಾಗಿ ವೆಂಕಟರಾವ್ ನಾಡಗೌಡ ನೇಮಕಗೊಂಡಿದ್ದರೆ, ಖಜಾಂಚಿಯಾಗಿ ಬಿ.ಎನ್.ರವಿಕುಮಾರ್ ನೇಮಕವಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಗಳಾಗಿ ಎ. ಪಿ.ರಂಗನಾಥ್, ಅರ್ ಪ್ರಕಾಶ್, ಸಯ್ಯದ್ ರೋಷನ್ ಅಬ್ಬಾಸ್, ರೆಹಮತುಲ್ಲಾ ಖಾನ್, ಸುಧಾಕರ್ ಲಾಲ್, ಶಿವಕುಮಾರ ನಾಟೀಕಾರ್, ಶಾರದಾ ಅಪ್ಪಾಜಿಗೌಡ, ರೂತ್
ಮನೋರಮಾ, ಮಲ್ಲೇಶ್ ಬಾಬು, ವೀರಭದ್ರಪ್ಪ ಹಾಲರವಿ ಅವರನ್ನು ನೇಮಿಸಿದ್ದಾರೆ.
ಕಾರ್ಯದರ್ಶಿಗಳು
ಮಹಂತಯ್ಯಮಠ, ಶಂಸಿ ತಬ್ರಾಜ್, ಐಲಿನ್ ಜಾನ್ ಮಠಪತಿ, ಬಿ.ಕಾಂತರಾಜ್, ಡಾ.ವಿಜಯ ಕುಮಾರ್, ಡಾ.ಶೀಲಾ ನಾಯಕ್, ರೋಷನ್ ಬಾವಾಜಿ, ಚಂದ್ರಕಾಂತ್ ಶೇಕಾ, ಕನ್ಯಾಕುಮಾರಿ, ಸಿದ್ದಬಸಪ್ಪ ಯಾದವ್ ನೇಮಕವಾಗಿದ್ದಾರೆ.
ಜಿಲ್ಲಾಧ್ಯಕ್ಷರ ನೇಮಕ
ಐದು ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಮಟ್ಟದ ಮೂರು ವಿಭಾಗಗಳಿಗೆ ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಅವರನ್ನು ಪರಿಶಿಷ್ಟ ಜಾತಿ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ರಶ್ಮಿ ರಾಮೇಗೌಡ ಅವರನ್ನು ಮಹಿಳಾ ವಿಭಾಗದ ರಾಜ್ಯಾಧ್ಯಕ್ಷರನ್ನಾಗಿ, ರಾಜು ನಾಯಕ ಅವರನ್ನು ಯುವ ಜನತಾದಳದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಉಸ್ತುವಾರಿ
ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಯಾಗಿ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಕಣದಲ್ಲಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಅವರ ಗೆಲುವಿಗೆ ಶ್ರಮಿಸಲು ಮೂವರು ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.
ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಮಾಜಿ ಶಾಸಕ ಇ.ಕೃಷ್ಣಪ್ಪ, ಬೆಂಗಳೂರು ನಗರದ ಮಾಜಿ ಅಧ್ಯಕ್ಷ ಆರ್ ಪ್ರಕಾಶ್ ಅವರಿಗೆ ಈ ಹೊಣೆ ವಹಿಸಲಾಗಿದೆ.
ಸರಣಿ ಸಭೆಗಳು, ಮುಖಂಡರಿಗೆ ಖಡಕ್ ಸೂಚನೆ
ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಸರಣಿ ಸಭೆಗಳು ನಡೆದವು. ಮೊದಲು ರಾಜ್ಯ ಕೋರ್ ಕಮಿಟಿ ಸಭೆ ನಡೆದು, ಪಕ್ಷದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಅಲ್ಲದೆ, ಶಿಕ್ಷಕರ ಕ್ಷೇತ್ರ ಹಾಗೂ ಲೋಕಸಭೆ ಚುನಾವಣೆಯ ಉಸ್ತುವಾರಿಗಳ ಹೆಸರುಗಳನ್ನು ಅಂತಿಮಗೊಳಿಸಲಾಯಿತು.
ಪಕ್ಷ ಸೇರಿದ ಜ್ಯೋತಿ ಪ್ರಕಾಶ್ ಮಿರ್ಜಿ
ಜೆಡಿಎಸ್ ಪಕ್ಷ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಅವರನ್ನು ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಮತ್ತಿತರೆ ನಾಯಕರು ಪಕ್ಷದ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರ ಮಾಡಿಕೊಂಡರು.