ಬೆಂಗಳೂರು:ಸೇಂದಿ, ಸಾರಾಯಿ ಉಪಕಸುಬಾಗಿಸಿಕೊಂಡಿದ್ದ ಸಮುದಾಯಕ್ಕೆ ನೀರಾ ತಯಾರಿಕೆಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಬಿ.ಕೆ.ಹರಿಪ್ರಸಾದ್ ಮತ್ತಿತರರ ಪ್ರಸ್ತಾವಕ್ಕೆ ಮಧ್ಯೆ ಪ್ರವೇಶಿಸಿ ಮಾತನಾಡಿದ ಅವರು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಸೆಕೆಂಡ್ಸ್ ಮದ್ಯ ತಡೆಗೆ ಭಾರೀ ಒತ್ತಡ ಬಂದಿತ್ತು.
ದೊಡ್ಡ ಪ್ರಮಾಣದಲ್ಲಿ ಆದಾಯ
ಇದನ್ನು ಕೃಷ್ಣ ಅವರು ಗಂಭಿರವಾಗಿ ತೆಗೆದುಕೊಂಡು ಪಾನೀಯ ನಿಗಮ ಆರಂಭಿಸಿದ್ದು, ಇಂದು ದೊಡ್ಡ ಪ್ರಮಾಣದಲ್ಲಿ ಪಾನೀಯ ನಿಗಮದಿಂದ ಆದಾಯ ಬರುತ್ತಿದೆ.
ಸೇಂದಿ ಮತ್ತು ಸಾರಾಯಿ ನಿಷೇಧದ ನಂತರ ಈ ಕಸುಬಿನಲ್ಲಿ ತೊಡಗಿಸಿಕೊಂಡಿದ್ದವರಿಗೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ, ಆದರೂ ಅಪಸ್ವರ ಕೇಳಿಬಂದ ಹಿನ್ನೆಲೆಯಲ್ಲಿ ನೀರಾ ಮಾರಾಟಕ್ಕೆ ಅನುಮತಿ ನೀಡುವ ಮೂಲಕ ಅವರ ಬದುಕಿಗೆ ದಾರಿ ಮಾಡಿಕೊಡುವ ಚಿಂತನೆ ಇದೆ ಎಂದರು.