ರಾಜ್ಯಸಭೆ ಚುನಾವಣೆಗೆ ಸಿಸಿಟಿ ಕಣ್ಗಾವಲು
ಬೆಂಗಳೂರು: ಅಡ್ಡಮತದಾನದ ಬೀತಿಯ ನಡುವೆ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಫೆಬ್ರವರಿ 27ರಂದು ಮತದಾನ ನಡೆಯಲಿದೆ.
ನಾಲ್ಕು ಸ್ಥಾನಗಳ ಆಯ್ಕೆಗೆ ಐವರು ಅಭ್ಯರ್ಥಿಗಳು ಕಣಕ್ಕಿಳಿದಿರುವುದು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ಗೂ ತಳಮಳ ಉಂಟಾಗಿದೆ.
ಕಾಂಗ್ರೆಸ್‌ನ ರಾಜಾ ವೆಂಕಟಪ್ಪನಾಯಕ್ ಅವರ ಅಕಾಲಿಕ ನಿಧನದಿಂದ ಕಾಂಗ್ರೆಸ್ ಸ್ವಲ್ಪ ಪೆಟ್ಟು ಬಿದ್ದಿದೆ. ರಾಜ್ಯ ಸಭೆ ಪ್ರವೇಶಿಸಲು ಈಗಿನ ವಿಧಾನಸಭೆಯ ಬಲಾಬಲದ ಆಧಾರದ ಮೇಲೆ 44.65 ಮತಗಳು ಬೇಕಾಗಿದೆ.
ಕಣದಲ್ಲಿರುವ ಐದು ಅಭ್ಯರ್ಥಿಗಳು ಸಹ ಆಯಾ ಪಕ್ಷದ ಅಧಿಕೃತ ಅಭ್ಯರ್ಥಿಗಳಾಗಿರುವುದರಿಂದ ಯಾರು ಮೊದಲು ಗೆಲುವಿನ ಗುರಿ ಮುಟ್ಟುತ್ತಾರೋ ಅವರು ಜಯಶೀಲರಾಗುತ್ತಾರೆ.
ಕಡೇ ಘಳಿಗೆಯಲ್ಲಿ ಕಾಂಗ್ರೆಸ್‌ಗೆ ಒಂದು ಮತ ಕಡಿಮೆಯಾಗಿರುವುದರಿಂದ ನಾಲ್ವರು ಪಕ್ಷೇತರರಿಗೆ ಬೇಡಿಕೆ ಹೆಚ್ಚಾಗಿದೆ. ಅವರಲ್ಲಿ ಬಹುತೇಕರು ಆಡಳಿತ ಪಕ್ಷದ ಕಡೆ ಒಲವು ತೋರಿದ್ದರೂ ಕಾಂಗ್ರೆಸ್‌ಗೆ ಭಯ ದೂರವಾಗಿಲ್ಲ.
ರಾಜಕೀಯ ಪಕ್ಷಗಳಲ್ಲಿ ತಳಮಳ: ಶಾಸಕರಿಗೆ ಮತದಾನದ ತರಬೇತಿ
ಈ ಕಾರಣಕ್ಕಾಗಿಯೇ ತಮ್ಮ ಎಲ್ಲಾ ಶಾಸಕರನ್ನು ಪಂಚತಾರಾ ಹೋಟೆಲ್‌ನಲ್ಲಿ ಹಿಡಿದಿಟ್ಟುಕೊಂಡಿದ್ದು, ಅಲ್ಲಿಯೇ ತಮ್ಮ ಅಭ್ಯರ್ಥಿಗಳಿಗೆ ಯಾವ ರೀತಿ ಮತ ಚಲಾಯಿಸಬೇಕು ಎಂಬ ಬಗ್ಗೆ ತರಬೇತಿ ನೀಡಿ. ನಾಳೆ ಬೆಳಿಗ್ಗೆ ಹೋಟೆಲ್‌ನಿಂದ ನೇರವಾಗಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಏಕೈಕ ಶಾಸಕ ಜಿ.ಜನಾರ್ಧನರೆಡ್ಡಿ ಎನ್‌ಡಿಎ ಕಡೆ ಗುರುತಿಸಿಕೊಂಡಿದ್ದರು. ಕೆಪಿಸಿಸ್ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ನೇಹದ ಪ್ರಭಾವ ಬೆಳೆಸಿ ಅವರನ್ನು ರಾತ್ರೋರಾತ್ರಿ ತಮ್ಮ ಕಡೆ ಒಲಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ; ಗಣಿ ಹಗರಣದ ವಿರುದ್ಧ ಹೋರಾಟ ನಡೆಸಿ ಯಾರನ್ನು ವಿರೋಧ ಮಾಡಿದ್ದರೋ ಅದೇ ಜನಾರ್ಧನರೆಡ್ಡಿ ಅವರನ್ನು ಅದೇ ಸಿದ್ದರಾಮಯ್ಯ ಈಗ ಅಪ್ಪಿಕೊಂಡಿದ್ದಾರೆ.
ಆಡಳಿತಾರೂಢ ಪಕ್ಷ ತನಗೆ ಬಹುಮತವಿದ್ದರೂ ಮೂವರು ಅಭ್ಯರ್ಥಿಗಳ ಗೆಲುವಿಗೆ ನಡೆಸುತ್ತಿರುವ ರಾಜಕೀಯ ತಂತ್ರಗಾರಿಕೆ ನಡುವೆಯೂ ಬಿಜೆಪಿ-ಜೆಡಿಎಸ್ ತನ್ನ ಎರಡನೇ ಅಭ್ಯರ್ಥಿಯ ಗೆಲುವಿಗಾಗಿ ಕಸರತ್ತು ಮುಂದುವರೆಸಿವೆ.
ಎನ್ ಡಿಎ ಎರಡನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿ-ಜೆಡಿಎಸ್ ಸರ್ಕಸ್
ಮಾಜಿ ಮುಖ್ಯಮಂತ್ರಿಗಳಾದ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಉಭಯ ಪಕ್ಷಗಳ ಮುಖಂಡರು ಸಭೆ ನಡೆಸಿ ತಮ್ಮ ಮತಗಳನ್ನು ಹಿಡಿದಿಟ್ಟುಕೊಳ್ಳುವುದರ ಜೊತೆಗೆ ತಮ್ಮದಲ್ಲದ ಮತಗಳನ್ನು ಪಡೆಯಲು ನಾಲ್ಕುಗೋಡೆಗಳ ನಡುವೆ ತಂತ್ರಗಾರಿಕೆ ನಡೆಸಿದ್ದಾರೆ.
ಅಲ್ಲದೆ, ಉಭಯ ಪಕ್ಷಗಳು ಪ್ರತ್ಯೇಕವಾಗಿ ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಿ, ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡಿದ್ದಾರೆ. ಅಲ್ಲಿಯೇ ತಮ್ಮವರಿಗೂ ಮತದಾನ ಮಾಡುವ ಪಾಠ ಮಾಡಿದ್ದಾರೆ.
ಹಾಲಿ ಬಿಜೆಪಿ ಸಂಸದರಿಗೆ ಲೋಕಸಭಾ ಟಿಕೆಟ್!
ಮೂರು ಪಕ್ಷಗಳು ಶಾಸಕರಿಗೆ ವಿಪ್ ಜಾರಿಗೊಳಿಸಿರುವುದಲ್ಲದೆ, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪಂಚತಾರ ಹೋಟೆಲ್‌ಗೆ ತೆರಳಿದ್ದಾರೆ.
ವಿಧಾನಸಭೆಯ ಬಲಾಬಲದ ಆಧಾರದ ಮೇಲೆ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಬಿಜೆಪಿ ತನಗಿರುವ ಸಂಖ್ಯಾಬಲದ ಮೇಲೆ ತನ್ನ ಅಧಿಕೃತ ಅಭ್ಯರ್ಥಿ ಗೆಲ್ಲಿಸಿಕೊಂಡು ಹೆಚ್ಚುವರಿಯಾಗಿರುವ 20 ಮತಗಳನ್ನು ಎನ್‌ಡಿಎ ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ ನೀಡಲಿದೆ.
ಜೆಡಿಎಸ್ ವಿಧಾನಸಭೆಯಲ್ಲಿ ಕೇವಲ 19 ಶಾಸಕರನ್ನು ಮಾತ್ರ ಹೊಂದಿದ್ದರೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಹೆಚ್ಚುವರಿಯಾಗಿರುವ ಬಿಜೆಪಿ, ಪಕ್ಷೇತರರ ಶಾಸಕರ ಬೆಂಬಲ ಒಳಗೊಂಡಂತೆ ತನ್ನ ಅಭ್ಯರ್ಥಿ ಗೆಲುವಿಗೆ ಇಡೀ ದಿನ ಅಳೆದು ತೂಗಿ ನೋಡಿದರು.
ರಾಜ್ಯಸಭೆಯ ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಮಾಡಬೇಕು. ಅಂಕೆಯಲ್ಲಿ (1,2 ,3 ಈ ರೀತಿ) ಮತ ಚಲಾಯಿಸಬೇಕು. ಅಕ್ಷರಗಳಲ್ಲಿ ಮತದಾನ ಮಾಡಿದರೆ, ಅಸಿಂಧುವಾಗಲಿದೆ. ಆಯಾ ಪಕ್ಷದ ಚುನಾವಣಾ ಏಜೆಂಟರ್ ಗೆ ತೋರಿಸಬೇಕು. ಬೇರೆ ಯಾರಿಗೂ ತೋರಿಸುವಂತಿಲ್ಲ.
ದಲಿತ ಉದ್ಯಮಿಗಳಿಗೆ 24.1% ಕೈಗಾರಿಕಾ ಪ್ರದೇಶ ಮೀಸಲು
ಒಂದು ವೇಳೆ ಆಯಾ ಪಕ್ಷದ ಚುನಾವಣಾ ಏಜೆಂಟರನ್ನು ಹೊರತುಪಡಿಸಿ ಬೇರೆ ಯಾರಿಗೂ ತೋರಿಸಿದರೂ ಮತ ಅಸಿಂಧುವಾಗಲಿದೆ. ಆಯಾ ಅಭ್ಯರ್ಥಿಯ ಮತವನ್ನು ಸರಿಯಾಗಿ ಚಲಾಯಿಸಬೇಕು. ಇಬ್ಬರು ಅಭ್ಯರ್ಥಿಗಳ ನಡುವಿನ ಗೆರೆ ದಾಟಿದರೂ ಅಸಿಂಧುವಾಗಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಮತದಾನ ಮಾಡುವ ಬಗ್ಗೆ ಶಾಸಕರಿಗೆ ತರಬೇತಿಯನ್ನು ನೀಡಿವೆ.
ಪಕ್ಷೇತರ ಅಭ್ಯರ್ಥಿಗಳು ಯಾರಿಗೂ ತೋರಿಸಿ ಮತ ಹಾಕುವಂತಿಲ್ಲ. ಒಂದು ವೇಳೆ ತೋರಿಸಿದರೂ ಮತ ಅಸಿಂಧುಗೊಳ್ಳಲಿದೆ.
ವಿಧಾನಸಭೆಯ 223 ಶಾಸಕರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನ ನಡೆಯಲಿದೆ. ಫೆಬ್ರವರಿ 27ರ ಐದು ಗಂಟೆ ಬಳಿಕ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ.
ಯುವಜನರಿಗೆ ಯುವನಿಧಿ ಜೊತೆ ಉದ್ಯೋಗ ಸೃಷ್ಟಿ
ಮತದಾನ ಕೇಂದ್ರವು ಭಾರತ ಚುನಾವಣಾ ಆಯೋಗದ ವೆಬ್ ಕಾಸ್ಟ್ ಗೆ ಒಳಪಟ್ಟಿರುತ್ತದೆ. ಅಲ್ಲದೆ, ಸಿಸಿ ಕ್ಯಾಮೆರಾದ ನಿಗಾವಣೆಯಲ್ಲಿರುತ್ತದೆ.