ಮಧು ಮೇಹ, ರಕ್ತದೊತ್ತಡ ಹತೋಟಿಗೆ ಪರಿಣಾಮಕಾರಿ
ಹಳೆಯ ತಲೆಮಾರುಗಳಿಂದ ಯುವ ಪೀಳಿಗೆಯವರೆಗೂ ಜನಪ್ರಿಯವಾಗಿರುವಂಥವು ಎಂದರೆ ಯೋಗ ಮುದ್ರೆಗಳು. ಋಷಿ ಮುನಿಗಳು ಕಲಿಸಿಕೊಟ್ಟ ಪ್ರಾಚೀನ ಹಾಗೂ ಪರಿಣಾಮಕಾರಿ ಚಿಕಿತ್ಸೆಗಳೇ ಯೋಗ ಮುದ್ರೆಗಳಾಗಿವೆ. ದೇಹದ ಕಾಲಿನ ಕಿರು ಬೆರಳಿನಿಂದ ಶಿರೋಭಾಗದವರೆಗೆ ಸಕಾರಾತ್ಮಕ ಶಕ್ತಿಯನ್ನು ಚಾಲನೆಗೊಳಿಸುವಂಥವುಗಳು ಮುದ್ರೆಗಳಾಗಿವೆ. ಮುದ್ರೆಗಳು ಅತ್ಯಂತ ಸರಳವೂ ಹೌದು. ಅತ್ಯಂತ ಪರಿಣಾಮಕಾರಿಯೂ ಹೌದು.
ಆದಿ ಮುದ್ರೆ ಎಂಬುದು ಹಸ್ತ ಮುದ್ರೆಗಳಲ್ಲಿ ಒಂದು ವಿಧ. ಅಂಗೈನಲ್ಲಿರುವ ಎಲ್ಲಾ ಬೆರಳುಗಳನ್ನು ಸೇರಿಸಿ ಆದಿಮುದ್ರೆ ಮಾಡಲಾಗುವುದು. ನೆಲದ ಮೇಲೆ ಅಥವಾ ಕುರ್ಚಿಯ ಮೇಲೆ ಯಾವುದೇ ಭಂಗಿಯಲ್ಲಿ ಕುಳಿತು ಈ ಮುದ್ರೆಯನ್ನು ಮಾಡಬಹುದು. ಆದಿ ಮುದ್ರೆಯನ್ನು ಮೂಲ ಮುದ್ರೆ ಅಥವಾ ಮಗುವಿನ ಗೆಸ್ಚರ್ ಎಂದು ಕರೆಯಲಾಗುತ್ತದೆ. ತೊಟ್ಟಿಲಲ್ಲಿ ಮಲಗಿರುವ ಮಗು ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಹೆಬ್ಬೆರಳನ್ನು ಮುಷ್ಠಿಯೊಳಗೆ ಮಾಡಿ ಮಲಗಿರುವ ಭಂಗಿಯನ್ನು ಬಹುತೇಕ ಎಲ್ಲರೂ ನೋಡಿರುತ್ತೀರಿ. ಈ ಆದಿ ಮುದ್ರೆ ಆ ಹೋಲಿಕೆಯನ್ನೇ ಹೋಲುವುದರಿಂದ ಮಗುವಿನ ಗೆಸ್ಚರ್ ಎಂದು ಸಹ ಕರೆಯುವುದುಂಟು.
ಅತ್ಯಂತ ಸರಳ ಮುದ್ರೆಗಳಲ್ಲಿ ಇದು ಕೂಡ ಒಂದು. ಈ ಮುದ್ರೆ ಹಾಕಿದಂತಿರುವ ಮಗುವು ಆರಾಮವಾಗಿ ನಿದ್ರೆ ಮಾಡುವಂತೆ ವಯಸ್ಕರು ಒತ್ತಡದ ಜೀವನದಿಂದ ದೂರ ಸರಿದ ಮಗುವಿನಷ್ಠೇ ನೆಮ್ಮದಿಯಾಗಿ ನಿದ್ರೆ ಮಾಡುವರು. ಆದಿ ಎಂಬುದು ಮೊದಲು ಎಂಬರ್ಥವನ್ನು ನೀಡುವುದು. ತಾಯಿಯ ಗರ್ಭಾವಸ್ತೆಯಲ್ಲಿರುವ ಭ್ರೂಣದ ಭಂಗಿಯಿಂದ ಆದಿ ಮುದ್ರೆ ಎಂಬ ಹೆಸರು ಬಂದಿದೆ ಎಂದು ಹೇಳಲಾಗುವುದು.
ಆದಿ ಮುದ್ರೆ ಮಾಡುವ ವಿಧಾನ
ಮುದ್ರೆಗಳನ್ನು ಮಾಡುವಾಗ ಆರಾಮದಾಯಕ ಬಟ್ಟೆ ಧರಿಸುವುದು ಅಗತ್ಯ. ವಜ್ರಾಸನ, ಸುಖಾಸನ, ಪದ್ಮಾಸನದಂತಹ ಭಂಗಿಗಳಲ್ಲಿ ಕುಳಿತು ಮುದ್ರೆಯನ್ನು ಮಾಡಬಹುದು. ತಲೆ ಮತ್ತು ಎದೆಯ ಭಾಗ ನೇರವಾಗಿರುವಂತೆ ನೋಡಿಕೊಳ್ಳಿ. ಎರಡೂ ಕೈಗಳನ್ನು ನಿಮ್ಮ ತೊಡೆಯ ಮೇಲಿರಿಸಿಕೊಳ್ಳಬೇಕು. ಹೆಬ್ಬೆರಳು ಕಿರುಬೆರಳಿನ ತಳಭಾಗವನ್ನು ಸ್ಪರ್ಶಿಸುವಂತಿರಬೇಕು. ಉಳಿದ ಬೆರಳುಗಳು ಆ ಹೆಬ್ಬೆರಳುಗಳನ್ನು ಮುಚ್ಚಿಡಬೇಕು. ಉಸಿರಾಟದ ಮೇಲೆ ಗಮನವಿರಬೇಕು. ಎರಡೂ ಕೈಗಳಿಂದ ಈ ಮುದ್ರೆ ಮಾಡಬೇಕು. ಆ ಸಮಯದಲ್ಲಿ ಹಸ್ತವು ಆಕಾಶ ನೋಡುವಂತಿರಬೇಕು. ಮುದ್ರೆ ಮಾಡುವ ಸಂದರ್ಭದಲ್ಲಿ ಸಾಧ್ಯವಾದರೆ ಕಣ್ಣುಗಳನ್ನು ಮುಚ್ಚಿರವುದು ಸೂಕ್ತ.
ಕರ್ನಾಟಕದಲ್ಲಿ ಏಪ್ರಿಲ್ 26 – ಮೇ 7ರಂದು ಮತದಾನ
ದಿನಕ್ಕೆ 3 ಬಾರಿ 30 ನಿಮಿಷಗಳ ಕಾಲ ಅಥವಾ 10 ನಿಮಿಷವಾದರೂ ಅಭ್ಯಾಸ ಮಾಡಬೇಕು. ಮುಂಜಾನೆ ಅಥವಾ ಖಾಲಿ ಹೊಟ್ಟೆಯಲ್ಲಿ ಈ ಮುದ್ರೆ ಅಭ್ಯಾಸ ಮಾಡಬೇಕು. ಧ್ಯಾನ ಮಾಡುವಾಗ ಉಸಿರಾಟದ ಮೇಲೆ ಗಮನ ಕೇಂದ್ರೀಕೃತವಾಗಿರಬೇಕು. ಕನಿಷ್ಠ ಪಕ್ಷ ಊಟವಾದ 30 ನಿಮಿಷದ ನಂತರ ಈ ಮುದ್ರೆಯನ್ನು ಮಾಡಬಹುದು.
ಪ್ರಯೋಜನಗಳು
ಆದಿಮುದ್ರೆ ಹಾಕಿ ಹೊಟ್ಟೆಯ ಕೆಳಭಾಗದಲ್ಲಿ ಒತ್ತಿ ಹಿಡಿದುಕೊಂಡು ಮುಂಭಾಗಕ್ಕೆ ಬಗ್ಗಿ ದೀರ್ಘವಾದ ಉಸಿರಾಟದೊಂದಿಗೆ ಯೋಗ ಮಾಡುವುದರಿಂದ ಹೊಟ್ಟೆಯ ಬೊಜ್ಜು ಕಡಿಮೆಯಾಗಲು ಸಹಕಾರಿಯಾಗಲಿದೆ. ಶ್ವಾಸಕೋಸದ ಕಾರ್ಯವನ್ನು ಸುಧಾರಿಸಲು ಆದಿ ಮುದ್ರೆಯು ಪ್ರಯೋಜನಕಾರಿಯಾಗಿದೆ. ಅಧಿಕ ರಕ್ತದೊತ್ತಡ ನಿಯಂತ್ರಣ ಮಾಡುವುದಲ್ಲದೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹತ್ತೋಟಿಯಲ್ಲಿಡಲು ಆದಿ ಮುದ್ರೆಯನ್ನು ಸಮರ್ಥವಾಗಿ ಬಳಸಬಹುದು. ಮನಃಶಾಂತಿಗಾಗಿ ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಆದಿ ಮುದ್ರೆಯನ್ನು ಮಾಡಬಹುದು. ವಿದ್ಯಾರ್ಥಿಗಳು ತಮ್ಮ ಏಕಾಗ್ರತೆ ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸಲು ಆದಿಮುದ್ರೆಯನ್ನು ಮಾಡಬಹುದಾಗಿದೆ.
ಶೇ.27.5ರಷ್ಟು ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಶಿಫಾರಸು
ದೇಹದಲ್ಲಿ ಶುದ್ಧಗಾಳಿಯ ಹರಿವನ್ನು ಹೆಚ್ಚಿಸುವುದಲ್ಲದೆ, ತೂಕ ನಿರ್ವಹಣೆಗೂ ಪರಿಣಾಮಕಾರಿಯಾಗಿದೆ. ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಗಂಟಲು ಹಾಗೂ ಶಿರಭಾಗಕ್ಕೆ ಹೆಚ್ಚಿನ ಮಟ್ಟದಲ್ಲಿ ಆಮ್ಲಜನಕ ಸರಬರಾಜು ಮಾಡುವುದು. ಈ ಮೂಲಕ ಮೆದುಳನ್ನು ಉತ್ತೇಜಿಸಿ ಸಹಸ್ರಾರ ಚಕ್ರವನ್ನು ಸಕ್ರಿಯಗೊಳಿಸುತ್ತದೆ. ಆದಿಮುದ್ರೆಯು ನರಮಂಡಲದ ಮೇಲೆ ಹಿತವಾದ ಪರಿಣಾಮವನ್ನು ಬೀರುತ್ತದೆ.
ಹಾಗೆಂದ ತಕ್ಷಣ ಯಾವುದೇ ಔಷಧಿಗೆ ಪರ್ಯಾಯವಾಗಿ ಮುದ್ರೆಗಳನ್ನು ಬಳಸಬಾರದು. ಔಷಧಿಯೊಂದಿಗೆ ಮುದ್ರೆಗಳನ್ನು ನಿತ್ಯ ಮಾಡುವುದರಿಂದ ಉತ್ತಮ ಫಲಿತಾಂಶ ಬೇಗ ಪಡೆಯಬಹುದು.
ಆದಿ ಮುದ್ರೆ ಇತಿ-ಮಿತಿ
ಹೃದ್ರೋಗದ ಸಮಸ್ಯೆಯಿಂದ ಬಳಲುವವರು ಆದಿ ಮುದ್ರೆ ಮಾಡುವುದು ಒಳ್ಳೆಯದಲ್ಲ. ಗರ್ಭಿಣಿ, ಬಾಣಂತಿಯರು ಈ ಮುದ್ರೆಯಿಂದ ದೂರವಿರಬೇಕು. ಚಿಕ್ಕ ಮಕ್ಕಳು ಹಾಗೂ ವಯಸ್ಸಾದ ಹಿರಿಯರು ಮುನ್ನೆಚ್ಚರಿಕೆ ವಹಿಸಿ ಮುದ್ರೆ ಮಾಡುವುದು ಸೂಕ್ತ.