ಗೆಲುವಿನ ಗುರಿ ಇಟ್ಟುಕೊಂಡು ಆಯ್ಕೆ
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಬಾರಿ ಹೆಚ್ಚಾಗಿ ಪ್ರಜ್ಞಾವಂತ ಮತ್ತು ಮಹಿಳೆಯರಿಗೆ ಅವಕಾಶ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಇಂದಿಲ್ಲಿ ತಿಳಿಸಿದ್ದಾರೆ.
ಎಐಸಿಸಿಯಿಂದ ಅಭ್ಯರ್ಥಿಗಳ ಪಟ್ಟಿ ಅಧಿಕೃತ ಘೋಷಣೆಗೆ ಮುನ್ನವೇ 24 ಕ್ಷೇತ್ರಗಳ ಅಭ್ಯರ್ಥಿಗಳು, ಸಚಿವರಿಗೆ ಚುನಾವಣೆ ಗೆಲುವಿನ ಪಾಠ ಹೇಳಿಕೊಟ್ಟರು.
ಲೋಕಸಭಾ ಚುನಾವಣೆಯಲ್ಲಿ ಗೆಲುವೇ ಮುಖ್ಯ, ನಿಮ್ಮ ಗುರಿ 20 ರಿಂದ 26 ಸ್ಥಾನ ಗೆಲ್ಲಲೇಬೇಕು. ಈ ಹಿನ್ನೆಲೆಯಲ್ಲಿ ನಾವು ಯಾವ ಒತ್ತಡಕ್ಕೂ ಮಣಿಯದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ.
ಸಚಿವರು, ಮುಖಂಡರ ಸಂಬಂಧಿಗಳಿಗೆ ಟಿಕೆಟ್ ನೀಡಿದ್ದಾರೆ ಎಂಬ ಮಾತುಗಳು ನಮಗೆ ಬೇಕಾಗಿಲ್ಲ. ಗೆಲುವಿನ ಗುರಿ ಇಟ್ಟುಕೊಂಡು ನಿಮ್ಮನ್ನು ಆಯ್ಕೆ ಮಾಡಿದ್ದೇವೆ. ನೀವು ಇರುವ ಕಡೆಗೆ ’ಬಿ’ ಫಾರಂ ಕಳುಹಿಸಿಕೊಡುತ್ತೇವೆ. ನೀವು, ಕೇಂದ್ರಗಳನ್ನು ಬಿಟ್ಟು ಹೊರಬರಬೇಡಿ ಎಂದು ಕಿವಿಮಾತು ಹೇಳಿದ್ದಾರೆ.
ಸಭೆ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸೇರಿದಂತೆ ಪಕ್ಷದ ಹಿರಿಯ ನಾಯಕರುಚುನಾವಣಾ ತಂತ್ರಗಾರಿಕೆಯನ್ನು ಬಿಡಿಸಿಟ್ಟು, ಈ ಮಾನದಂಡಗಳ ಆಧಾರದ ಮೇಲೆ ಚುನಾವಣೆ ಎದುರಿಸಿ ಎಂದಿದ್ದಾರೆ.
ಸಮೀಕ್ಷಾ ವರದಿ ಮುಂದಿಟ್ಟುಕೊಂಡು ಅಭ್ಯರ್ಥಿ ಆಯ್ಕೆ
ಕಳೆದ ನಾಲ್ಕು ದಶಕಗಳ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ಯುವ, ಮಹಿಳಾ, ವಿದ್ಯಾವಂತರಿಗೆ ಟಿಕೆಟ್ ನೀಡಿದ್ದೇವೆ. ಗೆಲ್ಲುವ ಭರವಸೆಯಿಂದ ನಮ್ಮನ್ನು ಟಿಕೆಟ್ ಕೇಳಿದ್ದೀರಿ. ನೀವು ಕೇಳಿದ ನಂತರ, ನಾವು ಸಮೀಕ್ಷಾ ವರದಿಗಳನ್ನು ಮುಂದಿಟ್ಟುಕೊಂಡು ನಿಮ್ಮನ್ನು ಆಯ್ಕೆ ಮಾಡಿದ್ದೇವೆ.
ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ, ಕರ್ನಾಟಕದಲ್ಲೂ ಹೆಚ್ಚು ಸ್ಥಾನ ಗಳಿಸಲು ಎಂಥೆಂತಹ ತಂತ್ರಗಾರಿಕೆ ನಡೆಸಬಹುದೆಂಬ ಮಾಹಿತಿಯನ್ನು ಅಭ್ಯರ್ಥಿಗಳ ಮುಂದಿಟ್ಟು, ನೀವು ಅದಕ್ಕೆ ಹೇಗೆ ರಾಜಕೀಯ ಮಾಡಬೇಕೆಂದು ಪಾಠ ಹೇಳಿಕೊಟ್ಟಿದ್ದಾರೆ.
ಕುಮಾರಸ್ವಾಮಿಗೆ ಯಶಸ್ವಿ ಹೃದಯ ಶಸ್ತ್ರ ಚಿಕಿತ್ಸೆ
ಯಾವ ಯಾವ ಕ್ಷೇತ್ರದಲ್ಲಿ ಯಾವ ಸ್ಥಿತಿ ಇದೆ, ಅದನ್ನು ಎದುರಿಸುವುದು ಹೇಗೆ? ನಿಮ್ಮ ಗೆಲುವಿನ ಗುರಿ ಮುಟ್ಟಲು ಕಾಂಗ್ರೆಸ್ ಮತಗಳ ಜೊತೆ ಬಿಜೆಪಿ ಮತ್ತು ಜೆಡಿಎಸ್ ಮತಗಳನ್ನು ಪಡೆಯಲು ಮುಂದಾಗಿ.
ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಯಾರನ್ನೂ ದೂರ ತಳ್ಳಬೇಡ. ಇದಲ್ಲದೆ, ಅನ್ಯ ಪಕ್ಷಗಳ ಕಾರ್ಯಕರ್ತರ ಹಾಗೂ ಮುಖಂಡರ ವಿಶ್ವಾಸ ಪಡೆದು ನಿಮ್ಮತ್ತ ಸೆಳೆಯಿರಿ.
ನಿಮ್ಮ ಏನೇ ಸಮಸ್ಯೆಗಳಿದ್ದರೂ ಪ್ರತಿ ಕ್ಷೇತ್ರಕ್ಕೂ ನೇಮಕಗೊಳ್ಳುವ ಚುನಾವಣಾ ಉಸ್ತುವಾರಿ ಅವರ ಬಳಿ ಸಮಸ್ಯೆ ಬಗೆಹರಿಸಿಕೊಳ್ಳಿ. ಸಚಿವರುಗಳಿಗೆ ಕ್ಷೇತ್ರಗಳ ಮೇಲುಸ್ತುವಾರಿ ವಹಿಸಲಾಗುವುದು. ಅವರುಗಳ ಜೊತೆ ಕ್ಷೇತ್ರದ ಪಕ್ಷದ ಶಾಸಕರು ಮತ್ತು ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿರುತ್ತಾರೆ.
ಪ್ರಚಾರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ
ಪ್ರಚಾರದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಆದ್ಯತೆ ನೀಡಿ. ಅಲ್ಲದೆ, ತಂತ್ರಗಾರಿಕೆಯೇ ನಿಮ್ಮ ಎದುರಾಳಿಗಳಿಗೆ ಪ್ರತಿ ಅಸ್ತ್ರವಾಗಬೇಕು. ಎಲ್ಲಾ 28 ಕ್ಷೇತ್ರಗಳಲ್ಲೂ ನಾವು ಮುಖಂಡರುಗಳು ಪ್ರವಾಸ ಕೈಗೊಳ್ಳುತ್ತೇವೆ. ಚುನಾವಣೆಯ ಚೌಕಟ್ಟಿನಲ್ಲೇ ಸಭೆಗಳನ್ನು ಯಶಸ್ವಿಗೊಳಿಸಿ.
ಕೇಂದ್ರದ ಮುಖಂಡರುಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿ ಕ್ಷೇತ್ರಗಳಲ್ಲೂ ಪ್ರಚಾರ ಮಾಡಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಪ್ರಚಾರತಂತ್ರ: ಬಿಜೆಪಿ-ಜೆಡಿಎಸ್ ಚರ್ಚೆ