Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ರಾಜಕೀಯರಾಜ್ಯರಾಷ್ಟ್ರ

ಬೂತ್ ಗೆದ್ದು ಬಿಜೆಪಿ ಗೆಲ್ಲಿಸಿ

by admin April 5, 2024
written by admin April 5, 2024 0 comments 3 minutes read
1FacebookTwitterPinterestEmail
134

ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಿ : ಮೋದಿ ಕರೆ

ಬೆಂಗಳೂರು: ಬಿಜೆಪಿ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.

ಕರ್ನಾಟಕದ ಬೂತ್ ಕಾರ್ಯಕರ್ತರ ಜೊತೆ ನಮೋ ಆ್ಯಪ್ ಮೂಲಕ ಸಂವಾದ ನಡೆಸಿದ ಅವರು, 2-3 ಜನರ ಗುಂಪು ರಚಿಸಿ ಕುಳಿತು ಮಾತನಾಡಿ, ಮತದಾನ ಖಚಿತಪಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಸಾಧನೆಗಳನ್ನು ನಿರ್ದಿಷ್ಟ ಮನೆಗಳಿಗೆ ತಲುಪಿಸುವ ಕಡೆ ಗಮನ ಕೊಡಿ ಎಂದು ವಿನಂತಿಸಿದರು.

ಸಾಧನೆ, ಕೆಲಸಗಳ ಕುರಿತು ಮಾತನಾಡಿ. ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು. ಅವರ ಭ್ರಷ್ಟಾಚಾರಗಳನ್ನು ಅನಾವರಣಗೊಳಿಸಿ ಎಂದೂ ಅವರು ತಿಳಿಸಿದರು.

ಮತದಾರರ ಹೃದಯ ಗೆಲ್ಲಬೇಕು

ಪ್ರಯೋಜನಾರ್ಥಿಗಳ ಜೊತೆ ಮಾತನಾಡಲು ಯುವಜನರ ಜೊತೆ ಯುವಜನರನ್ನೇ ನಿಯೋಜಿಸಿ. ಹಿರಿಯರ ಜೊತೆ ಹಿರಿಯರೇ ಮಾತನಾಡುವಂತಿರಲಿ. ಲಾಭಾರ್ಥಿಗಳಿಗೆ ಆದ ಲಾಭವನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡೋಣ. ಡೈರಿಯಲ್ಲಿ ಇದನ್ನು ಬರೆದುಕೊಳ್ಳಿ. ಮತದಾರರ ಮನ ಗೆಲ್ಲೋಣ. ಮತದಾರರ ಹೃದಯ ಗೆಲ್ಲುವುದು, ಕುಟುಂಬದ ಮನ ಗೆಲ್ಲುವುದು, ಬೂತ್‍ನ ಎಲ್ಲರ ಮನ ಗೆದ್ದು ಬಿಜೆಪಿಗೆ ಮತ ಕೊಡುವಂತೆ ಮಾಡುವ ಸವಾಲನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ಕಮಲದ ಕೈಹಿಡಿದ ಸುಮಲತಾ

ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಇದ್ದು, ಪ್ರತಿ ಬೂತ್‍ನಲ್ಲೂ ಎರಡೂ ಪಕ್ಷಗಳ ಸಮನ್ವಯ ಸಭೆ ನಡೆಸಬೇಕು. ಇದು ಗೆಲುವಿನ ಕಡೆ ನಮ್ಮನ್ನು ಕರೆದೊಯ್ಯಲಿದೆ. ನಾವು ಆಡಳಿತದಲ್ಲಿ ಇಲ್ಲದಿದ್ದರೂ ನಾವು ಭೇದಭಾವ ಮಾಡಿಲ್ಲ. ಇದನ್ನು ಜನರಿಗೆ ತಿಳಿಸೋಣ ಎಂದು ಅವರು ಹೇಳಿದರು.

ಇದೇವೇಳೆ ಕಾರ್ಯಕರ್ತರು ಜನರನ್ನು ಭೇಟಿ ಮಾಡುವ ಕಾರ್ಯ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಸಾಧನೆಗಳನ್ನು ತಿಳಿಸುವ ಕಾರ್ಯ ನಡೆದಿದೆಯೇ ಎಂದು ಕೇಳಿ ಉತ್ತರ ಪಡೆದರು. ಬಿಜೆಪಿ ಸರ್ಕಾರದ ಯಾವ ಕೆಲಸ ಹೆಚ್ಚು ಇಷ್ಟವಾಗಿದೆ ಎಂದು ಕೇಳಿದರು.

ಮತದಾನ ಮಾಡುವುದು ಹೇಗೆ ಎಂದು ಜಾಗೃತಿ ಮೂಡಿಸಿ

ರಾಮಮಂದಿರದ ವಿಚಾರ ಎಷ್ಟು ಪ್ರಭಾವ ಬೀರಬಹುದು ಎಂಬ ಪ್ರಶ್ನೆಯನ್ನು ಮುಂದಿಟ್ಟು ಉತ್ತರ ಪಡೆದರು. ಮಹಿಳಾ ಶಕ್ತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಮಾಡುವಂತೆ ನೋಡಿಕೊಳ್ಳಿ. ಮತದಾನ ಮಾಡುವುದು ಹೇಗೆ ಎಂದು ಜಾಗೃತಿ ಮೂಡಿಸಿ ಎಂದು ಸಲಹೆ ಕೊಟ್ಟರು.

ಬಿಜೆಪಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ನಾರಿ ಶಕ್ತಿಯ ಬಲವರ್ಧನೆ ಮಾಡಿದೆ. ‘ನಾರಿ ಶಕ್ತಿ ವಂದನಾ’ ರಾಜಕೀಯವಾಗಿ ಮಹಿಳಾ ಬಲವರ್ಧನೆ ಮಾಡಲಿದೆ. ಮಹಿಳೆಯರ ಮತದಾನ ಪ್ರಮಾಣ ಹೆಚ್ಚಿಸಲು ಶ್ರಮಿಸಿ ಎಂದು ಅವರು ತಿಳಿಸಿದರು.

ಬೂತ್ ಕಾರ್ಯಕರ್ತರು ತಮ್ಮ ಕಾರ್ಯದ ಅವಲೋಕನ ಮಾಡಲು ಪ್ರತಿದಿನದ ಕೆಲಸ ಮುಗಿದ ಬಳಿಕ ಸೇರಬೇಕು. ಮತಗಳ ಪ್ರಮಾಣ ಹೆಚ್ಚಾಗುತ್ತಿದೆಯೇ ಎಂದು ಅನಿಸಿಕೆಗಳನ್ನು ಹಂಚಿಕೊಳ್ಳಬೇಕಿದೆ ಎಂದು ಹೇಳಿದರು.

ನಾರಿ ಶಕ್ತಿ, ನಮೋ ಆ್ಯಪ್ ಮೂಲಕ ಮಾಡಿದ ಜಾಗೃತಿ, ಚಾಯ್ ಪೇ ಚರ್ಚಾ ಕಾರ್ಯಕ್ರಮಗಳ ಕುರಿತು ಕೂಡ ಅವರು ಮಾಹಿತಿ ಪಡೆದುಕೊಂಡರು. ಪನ್ನಾ ಪ್ರಮುಖರ ಮೂಲಕ ಚರ್ಚೆ ಮಾಡಿದ್ದೀರಾ ಎಂಬ ಮಾಹಿತಿ ಪಡೆದರು. ರೈತರಿಗಾಗಿ ಜಾರಿಗೊಳಿಸಿದ ವಿವಿಧ ಯೋಜನೆಗಳ ಕುರಿತು ಅನ್ನದಾತರಿಗೆ 6 ಸಾವಿರ ರೂಪಾಯಿ ಕೊಟ್ಟ ಕುರಿತು ಮಾಹಿತಿ ನೀಡಿದ್ದೀರಾ ಎಂದು ಅವರು ತಿಳಿದುಕೊಂಡರು. ಮೂಲಸೌಕರ್ಯ ವೃದ್ಧಿ, ಕಿಸಾನ್ ಸಮ್ಮಾನ್ ಸೇರಿ ವಿವಿಧ ಯೋಜನೆಗಳ ಕುರಿತು ಪ್ರತ್ಯೇಕವಾಗಿ ತಿಳಿಸಿ ಎಂದು ಮನವಿ ಮಾಡಿದರು.

ಮೋದಿ ಗ್ಯಾರಂಟಿ, ನುಡಿದಂತೆ ನಡೆಯುವ ಗ್ಯಾರಂಟಿ

ಕಾಂಗ್ರೆಸ್ ಸರ್ಕಾರವು ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂಬುದನ್ನು ಮನದಟ್ಟು ಮಾಡಿ. ಮೋದಿ ಗ್ಯಾರಂಟಿ, ನುಡಿದಂತೆ ನಡೆಯುವ ಗ್ಯಾರಂಟಿ ಎಂದು ತಿಳಿಹೇಳಬೇಕು. ಬಡವರಿಗೆ ಮನೆ ನಿರ್ಮಾಣ, ಶೌಚಾಲಯ, ಗ್ಯಾಸ್ ಸಂಪರ್ಕ, ಮನೆ ಮನೆಗೆ ನಲ್ಲಿ ನೀರಿನ ಸಂಪರ್ಕ, ಕಿಸಾನ್ ಸಮ್ಮಾನ್ ನಿಧಿ ಸೇರಿ ಅನೇಕ ಯೋಜನೆಗಳನ್ನು ನಮ್ಮ ಸರ್ಕಾರ ಕೊಟ್ಟಿದೆ. ಇದು ಮೋದಿಜೀ ಗ್ಯಾರಂಟಿ. ಇದನ್ನು ಜನರಿಗೆ ತಿಳಿಸಿ ಎಂದು ವಿನಂತಿಸಿದರು.

ಉಡುಪಿಯ ದ್ವಾರಕಾ ನಗರ, ಕೃಷ್ಣನಗರದ ಹಿನ್ನೆಲೆಯನ್ನು ತಿಳಿಸಿದ ನರೇಂದ್ರ ಮೋದಿ ಅವರು, ಉಡುಪಿಯನ್ನು ಕಂಡರೆ ಅತ್ಯಂತ ಸಂತಸವಾಗುತ್ತದೆ ಎಂದರು. ಸಮಾಜದ ಎಲ್ಲ ವರ್ಗಕ್ಕೆ, ಲಾಭಾರ್ಥಿಗಳನ್ನು ತಲುಪುವ ಕಡೆ ಗಮನ ಕೊಡಲು ಸಲಹೆ ನೀಡಿದರು. ಪ್ರತಿ ಬೂತ್ ಗೆಲ್ಲುವ ಮೂಲಕ ಲೋಕಸಭಾ ಚುನಾವಣೆ ಗೆಲ್ಲೋಣ ಎಂದು ತಿಳಿಸಿದರು. ಪ್ರಥಮ ಬಾರಿ ಮತದಾನ ಮಾಡುವವರ ಮನ ಗೆಲ್ಲಲು ನೀವೇನು ಮಾಡುತ್ತೀರಿ ಎಂದು ಕೇಳಿ ಉತ್ತರ ಪಡೆದರು.

ಕೈಯ ಮೇಲೆ ಕಮಲದ ಚಿಹ್ನೆ

ಹಿಂದಿನ ಚುನಾವಣೆಗಳಲ್ಲಿ ಪಡೆದ ಮತಗಳ ಕುರಿತು ಮಾಹಿತಿ ಶೇಖರಿಸಿದ್ದೀರಾ ಎಂದು ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು. ಕಮಲದ ಚಿಹ್ನೆಯನ್ನು ಕೈಯ ಮೇಲೆ ಮೆಹಂದಿ ಮೂಲಕ ಹಾಕಿಕೊಳ್ಳಿ. ಇದರ ಮೂಲಕ ಜನಜಾಗೃತಿ ಮೂಡಿಸಿ ಎಂದು ಅವರು ಸಲಹೆ ಕೊಟ್ಟರು. ಯುಗಾದಿ ಸಂದರ್ಭದಲ್ಲಿ ಕಮಲ ಚಿಹ್ನೆ ಮೂಲಕ ರಂಗೋಲಿ ಮಾಡುವ ಕುರಿತ ಸಲಹೆಯೂ ಒಳ್ಳೆಯದೇ ಎಂದು ಪ್ರಧಾನಿಯವರು ನುಡಿದರು.

ಬೂತ್ ಮಟ್ಟದ ಬೈಠಕ್‍ಗಳಿಗೆ ಮಹತ್ವವಿದೆ. ಇದನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಿ. ಹಿರಿಯ ನಾಗರಿಕರ ಮನಸ್ಸನ್ನು ಗೆಲ್ಲಬೇಕು. ಕುಟುಂಬದ ಎಲ್ಲ ಮತದಾರರೂ ಮತದಾನ ಮಾಡುವಂತೆ ನೋಡಿಕೊಳ್ಳಿ ಎಂದು ವಿನಂತಿಸಿದರು. ಬೂತ್ ಗೆದ್ದು ಲೋಕಸಭಾ ಸ್ಥಾನ ಗೆಲ್ಲಬೇಕು. ಪ್ರತಿ ಬೂತ್‍ನಲ್ಲಿ 370ಕ್ಕೂ ಹೆಚ್ಚು ಮತ ಪಡೆದು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ತಿಳಿಸಿದರು.

ಗೆಲುವು ಸಾಧಿಸದಿದ್ದರೆ ಬ್ಲ್ಯಾಕ್‌ಲಿಸ್ಟ್‌ಗೆ!

ಬೇಸಿಗೆ ಕಾಲವಾದ್ದರಿಂದ ಬಿಸಿಲು ಹೆಚ್ಚಾಗುತ್ತಿದೆ. ಬೆಳಿಗ್ಗೆ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಿ. ಇದು ತುಂಬ ಉಪಯುಕ್ತ ಎಂದು ಸಲಹೆ ಕೊಟ್ಟರು. ಬಿಜೆಪಿ ಗೆಲ್ಲುವಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿದರು. ಜನತೆಗೆ ಅವರು ರಾಮನವಮಿ, ಯುಗಾದಿಯ ಶುಭಾಶಯ ಕೋರಿದರು.

ಮೈಸೂರಿನ ರಾಜೇಶ್, ಶಿವಮೊಗ್ಗದ ಸರಳಾ, ಬೆಳಗಾವಿಯ ಶ್ರುತಿ ಆಪ್ಟೇಕರ್, ಉಡುಪಿಯ ಸುಪ್ರೀತ್ ಭಂಡಾರಿ ಅವರ ಜೊತೆ ಸಂವಾದ ನಡೆಯಿತು.

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
achievementsbjpdelivereddoor to doorGovernmentNarendra Modiprime ministerwin BJPWin Booth
1 FacebookTwitterPinterestEmail
admin

previous post
1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆ ನೇರ ನೇಮಕ
next post
ದಿನ ಭವಿಷ್ಯ : ಶನಿವಾರ, 06 ಏಪ್ರಿಲ್ 2024

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

February 25, 2026

ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

February 24, 2026

ಮನರೇಗಾ ಮರುಸ್ಥಾಪನೆ ಹೋರಾಟ ಬೆಂಬಲಿಸಿ

February 23, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ