ಬೆಂಗಳೂರು:ಯುವಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಚಿಹ್ನೆ ಶಾಲು ಹಾಕಿ ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸುವ ಪರಿಸ್ಥಿತಿ ಡೂಪ್ಲಿಕೇಟ್ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬರಬಾರದಿತ್ತು ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಸೋಲಿನ ಭೀತಿ ಎಷ್ಟರ ಮಟ್ಟಿಗೆ ಅವರಿಗೆ ಕಾಡುತ್ತಿದೆ ಎಂಬುದಕ್ಕೆ ಇಂತಹ ನಾಟಕ ಮತ್ತು ಗಿಮಿಕ್‌ಗಳು ಸಾಕ್ಷಿ ಎಂದು ಪಕ್ಷ ಟ್ವೀಟ್ ಮಾಡಿದೆ.
ಕಾಂಗ್ರೆಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ @DKShivakumar ಅವರಿಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೇ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.
ಸೋಲಿನ ಹತಾಶೆ ಎಂತಹ ಗಿಮಿಕ್‌ಗಳನ್ನು ಮಾಡುತ್ತದೆ ಎಂಬುದಕ್ಕೆ ನಿನ್ನೆ ರಾತ್ರಿ ಚನ್ನಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದ ನಾಟಕವೇ ಸಾಕ್ಷಿ.
ರಾತ್ರೋರಾತ್ರಿ ಪಟ್ಟಣಕ್ಕೆ ಧಾವಿಸಿ ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರನ್ನು ಸೇರಿಸಿ ಅವರಿಗೆ ಅವರದೇ ಹಸ್ತದ ಶಾಲು ಹಾಕಿ ಜೆಡಿಎಸ್ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಂಡೆವು ಎಂದು ಅಲೆ ಸೃಷ್ಟಿಸಲು ಇಂತಹ ಕೀಳು ನಾಟಕ ಬೇಕಿತ್ತೇ ಎಂದು ಜೆಡಿಎಸ್ ಪ್ರಶ್ನಿಸಿದೆ.