ಬೆಂಗಳೂರು:ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ಇಟ್ಟುಕೊಂಡು ನನ್ನನ್ನು ಒಂದು ದಿನವಾದರೂ ಬಂಧಿಸಲೇಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಠ ತೊಟ್ಟಿದ್ದ ಪಿತೂರಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಬಹಿರಂಗ ಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಸಿಡಿಗಳನ್ನು ಬಹಿರಂಗ ಪಡಿಸಿದವರನ್ನು ಬಂಧಿಸಿ ಎಂದರೇ, ಯಾವ್ಯಾವುದೋ ವಿಷಯವನ್ನು ಕೆದಕುತ್ತಿದ್ದಾರೆ ಎಂದರು.
ನ್ಯಾಯಾಲಯಕ್ಕೆ ತೆರಳಿದ್ದರೆ ಬಂಧನವಾಗುತ್ತಿತ್ತು
ಈ ಹಿಂದೆ, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಸಲಹೆ ನೀಡಿದರು, ಅವರ ಸಲಹೆಯಂತೆ ನಾನು ನ್ಯಾಯಾಲಯಕ್ಕೆ ತೆರಳಲಿಲ್ಲ, ತೆರಳಿದ್ದರೆ ಅಂದೇ ನನ್ನನ್ನು ಬಂಧಿಸಿರುತ್ತಿದ್ದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ಎಚ್.ಡಿ.ರೇವಣ್ಣ ಪರ ಹೋರಾಟ ಮಾಡುತ್ತಿದ್ದೇನೆಯೇ ಹೊರತು ಪ್ರಜ್ವಲ್ ರೇವಣ್ಣ ಪರ ಅಲ್ಲ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಬಿಡುಗಡೆ ಮಾಡಿದವರನ್ನು ಬಂಧಿಸುತ್ತಿಲ್ಲ ಏಕೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದ್ದಾರೆ.
ವಿಡಿಯೊ ಲೀಕ್ ಮಾಡಿದವರ ವಿರುದ್ಧ ಮೊದಲು ಕ್ರಮ ಕೈಗೊಳ್ಳಲಿ, ಆದರೆ ಇದುವರೆಗೂ ಏನೂ ಮಾಡಿಲ್ಲ.
ಕಾರ್ತಿಕ್‌ಗೆ ಖಾಸಗಿ ಚಾನೆಲ್ ತರಬೇತಿ
ಪ್ರಮುಖ ಆರೋಪಿ ಕಾರ್ತಿಕ್‌ಗೆ ಗಿರಿನಗರದಲ್ಲಿರುವ ಖಾಸಗಿ ಚಾನೆಲ್ ಒಂದರಲ್ಲಿ ತರಬೇತಿ ಕಾರ್ಯ ನಡೆದಿದೆ.
ನಾನು ಒಂದು ಕರೆ ಕೊಟ್ಟರೆ ಅವರನನ್ನು ಹಿಡಿದು ತರಬಹುದು, ಆದರೆ ನಾನು ಗಲಭೆ ಮತ್ತು ಪ್ರಚೋಧನೆಗೆ ಅವಕಾಶ ಮಾಡುವುದಿಲ್ಲ.
ಬಂಡೆ, ಆತನನ್ನು ಹೇಗೆ ರಕ್ಷಣೆ ಮಾಡುತ್ತೆ ಎಂದು ಕಾಯುತ್ತಿದ್ದೇನೆ, ಬಂಡೆ, ರಕ್ಷಣೆ ಕೊಡುತ್ತೆ ಎಂದು ಕಾರ್ತಿಕ್ ಅಂದುಕೊಂಡಿದ್ದಾನೆ.
ನವೀನ್, ಕಾರ್ತಿಕ್, ಶ್ರೇಯಸ್‌ಗೆ ನೋಟಿಸ್ ಕೊಟ್ಟಿಲ್ಲ, ರೇವಣ್ಣಗೆ ಮಾತ್ರ ನೋಟಿಸ್ ಕೊಟ್ಟಿದ್ದೀರಿ. ಯಾವ ಪ್ರಕರಣವನ್ನೂ ತಾರ್ಕಿಕವಾಗಿ ಅಂತ್ಯ ಮಾಡಿಲ್ಲ.
ಡಿ.ಕೆ. ಸಂಸ್ಕೃತಿ ಎಲ್ಲರಿಗೂ ತಿಳಿದಿದೆ
ಡಿ.ಕೆ. ಸಂಸ್ಕೃತಿ ಎಲ್ಲರಿಗೂ ತಿಳಿದಿದೆ, ಅವರು ಸಾಚಾ ಆಗಿದ್ದರೆ, ವಕೀಲ ದೇವರಾಜೇ ಗೌಡ ಅವರೊಡನೆ ಏಕೆ ಮಾತನಾಡಿದರು, ಅಷ್ಟೇ ಅಲ್ಲ ಐದು ಜನರನ್ನು ಇಟ್ಟುಕೊಂಡಿದ್ದೇನೆ ಎಂದಿದ್ದಾರೆ.
ಮುಖ್ಯಮಂತ್ರಿಗೆ ಮಾನ ಮರ್ಯಾದೆ ಇದೆಯಾ, ಪರಮೇಶ್ವರ್ ನಿಮಗೆ ಬೆನ್ನು ಮೂಳೆ ಇದೆಯಾ, ನನ್ನನ್ನು ಹಿಟ್ ಅಂಡ್ ರನ್ ಅಂತೀರಿ, ಎಸ್‌ಐಟಿ ಅಧಿಕಾರಿಗಳಿಗೆ ಕ್ರೆಡಿಬಿಲಿಟಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಪ್ರಜ್ವಲ್ ವಿರುದ್ಧ 2,900 ಪ್ರಕರಣ ಇವೆ ಎಂದಿದ್ದಾರೆ, ಆದರೆ ಇದುವರೆಗೂ ಒಂದೂ ಕೇಸ್ ಆಗಿಲ್ಲ, ಸಂತ್ರಸ್ತೆಯನ್ನು ಇನ್ನೂ ಹಾಜರು ಮಾಡಿಲ್ಲ, ಅವರನ್ನು ತೋಟದ ಮನೆಯಲ್ಲಿ ಹಿಡಿದಿರಾ, ಸಂತ್ರಸ್ತೆ ಸಿಕ್ಕಿದ್ದು ಸಂಬಂಧಿಕರ ಮನೆಯಲ್ಲಿ ಎಂದರು.