110
ಬೆಂಗಳೂರು:ವಿಧಾನಮಂಡಲದ ಮಳೆಗಾಲದ ಅಧಿವೇಶನವನ್ನು ಜುಲೈ 15ರಿಂದ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹದಿನೈದು ದಿನಗಳ ಕಾಲ ಅಂದರೆ ಜುಲೈ 31ರವರೆಗೆ ಸದನ ನಡೆಯಲಿದ್ದು, ರಜೆ ಕಾಲ ಹೊರತುಪಡಿಸಿ ಒಟ್ಟು 10 ದಿನ ಕಲಾಪ ನಡೆಯಲಿದೆ.
ಲೋಕಸಭಾ ಚುನಾವಣೆಗೂ ಮುನ್ನ ಅಂದರೆ, ಫೆಬ್ರವರಿಯಲ್ಲಿ ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿ 15 ದಿನಗಳ ಕಾಲ ಸದನ ನಡೆದಿತ್ತು.
ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣ ಬಜೆಟ್‌ಗೆ ಅನುಮೋದನೆ ಪಡೆದುಕೊಂಡಿದ್ದರು.
ಲೋಕಸಭಾ ಚುನಾವಣೆಗೆ ಯಾವುದೇ ಕ್ಷಣದಲ್ಲಿ ವೇಳಾಪಟ್ಟಿ ಪ್ರಕಟಗೊಳ್ಳಬಹುದೆಂಬ ಹಿನ್ನೆಲೆಯಲ್ಲಿ ಸದನ ಕಡಿಮೆ ಅವಧಿಯದಾಗಿತ್ತು.
ಮುಂದಿನ ಸಂಪುಟ ಸಭೆ ಸದನ ನಡೆಸುವ ದಿನಾಂಕವನ್ನು ಅಂತಿಮಗೊಳಿಸಲಿದೆ.