ಬೆಂಗಳೂರು:ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ಪೆನ್‌ಡ್ರೈವ್ ಮತ್ತು ಸಿಡಿ ಬಿಡುಗಡೆ ಮಾಹಿತಿಯನ್ನು ಬಹಿರಂಗಪಡಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ದೇವರಾಜೇಗೌಡ ಅವರಿಗೆ ರಾಜ್ಯ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಅತ್ಯಾಚಾರ ಪ್ರಕರಣದಲ್ಲಿ ವಕೀಲ ದೇವರಾಜೇಗೌಡ ಅವರನ್ನು ಹಾಸನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠ ದೇವರಾಜೇಗೌಡ ಅವರಿಗೆ ಜಾಮೀನು ಮಂಜೂರು ಮಾಡಿದೆ.
2023ರ ಡಿ.29ರಂದು ರಂದು ಅತ್ಯಾಚಾರ ಮಾಡಿದ್ದಾರೆ ಎಂದು 2024ರ ಏ.1 ರಂದು ಸಂತ್ರಸ್ತೆ ದೂರು ನೀಡಿದ್ದರು.
2024ರ ಮಾರ್ಚ್ 29ರಂದು ಸಂತ್ರಸ್ತೆ ಪತಿ ದೇವರಾಜೇಗೌಡರ ವಿರುದ್ಧ ದೂರು ನೀಡಿದ್ದರು. ಅದರಲ್ಲಿ ಅತ್ಯಾಚಾರದ ಬಗ್ಗೆ ಯಾವುದೇ ಚಕಾರವಿಲ್ಲ ಎಂದು ದೇವರಾಜೇಗೌಡ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು.
ಹನಿಟ್ರ್ಯಾಪ್ ದೂರು
ಇದಕ್ಕೂ ಮುನ್ನವೇ ತಮ್ಮ ವಿರುದ್ಧ ಹನಿಟ್ರ್ಯಾಪ್ ನಡೆದಿದೆ ಎಂದು ಮಾರ್ಚ್ 28ರಂದು ಸಂತ್ರಸ್ತೆ ವಿರುದ್ಧವೇ ದೇವರಾಜೇಗೌಡ ದೂರು ದಾಖಲಿಸಿದ್ದರು.
ದೇವರಾಜೇಗೌಡ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಸಂತ್ರಸ್ತೆ ಹೇಳಿದಂತೆ ಘಟನೆ ನಡೆದ 90 ದಿನ ವಿಳಂಬವಾಗಿ ದೂರು ದಾಖಲಿಸಿದ್ದಾರೆ, ಅಷ್ಟೇ ಅಲ್ಲ, ವಿಡಿಯೊ ಕಾಲ್‌ಗಳನ್ನು ಏಕೆ ಸ್ವೀಕರಿಸಿದ್ದರೆಂಬುದಕ್ಕೆ ಸಮರ್ಥನೆ ಕಂಡು ಬಂದಿಲ್ಲ.
ಇದೆಲ್ಲವೂ ಕೆಲವು ಶಕ್ತಿಗಳು ತಮ್ಮ ಕಕ್ಷೀದಾರರನ್ನು ಕಟ್ಟಿಹಾಕಲು ಸುಳ್ಳು ದಾಖಲೆ ಸೃಷ್ಠಿಸಿ ಆರೋಪ ಮಾಡಿದ್ದಾರೆ ಎಂದು ವಾದ ಮಂಡಿಸಿ, ಜಾಮೀನಿಗೆ ಮನವಿ ಮಾಡಿದ್ದರು. ವಾದ ಮನ್ನಿಸಿದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.