ಬೆಂಗಳೂರು:ಆರ್ಕಿಟೆಕ್ಚರ್ ಕೋರ್ಸ್‌ಗೆ ದ್ವೀತೀಯ ಪಿಯುಸಿ ಅರ್ಹತಾ ಅಂಕಗಳನ್ನು ಶೇ.50ರಿಂದ ಶೇ.45ಕ್ಕೆ ಇಳಿಕೆ ಮಾಡಿರುವ ಹಿನ್ನೆಲೆಯಲ್ಲಿ ಕೋರ್ಸ್‌ಗೆ ಸೇರಬಯಸುವ ಅಭ್ಯರ್ಥಿಗಳು ಈ ತಿಂಗಳ 13ರೊಳಗೆ ಯುಜಿಸಿಇಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದೆ.
ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಕೋರ್ಸ್‌ಗೆ ಅರ್ಹತಾ ಅಂಕಗಳಲ್ಲಿ ಕಡಿತ ಮಾಡಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ.45ರಷ್ಟು ಅಂಕ ಪಡೆದವರು ಅರ್ಜಿ ಸಲ್ಲಿಸಲು ಹೊಸದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೊಸದಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಜುಲೈ 15ರೊಳಗೆ ನಾಟಾ ಅಂಕಗಳ ವಿವರ ಮತ್ತು ಅರ್ಜಿ ಪ್ರತಿಯನ್ನು ಕೆಇಎಗೆ ಸಲ್ಲಿಸಬೇಕು, ಜುಲೈ 8ರೊಳಗೆ ನಾಟಾ ಅರ್ಹತೆ ಪಡೆದವರು ಕೂಡ ಈ ದಿನಾಂಕದೊಳಗೆ ಅಂಕಗಳ ಮಾಹಿತಿಯನ್ನು ನೀಡಬೇಕು ಎಂದು ಅವರು ವಿವರಿಸಿದ್ದಾರೆ.