ಬೆಂಗಳೂರು:ಮುಡಾ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದ ಹಗರಣಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಆರೋಪಗಳು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದನ್ನು ಸದನದಲ್ಲೇ ಬಯಲು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸವಾಲು ಹಾಕಿದ್ದಾರೆ.
ರಾಜಕೀಯ ದುರುದ್ದೇಶದ ಟೀಕೆಗಳಿಗೆ ಹೆದರಿ ಕೂರುವ ಜಾಯಮಾನ ನನ್ನದಲ್ಲ, ಎಲ್ಲದಕ್ಕೂ ಸದನದಲ್ಲೇ ಉತ್ತರ ನೀಡುವುದಾಗಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ನಾಯಕರೇ, ನಿಮ್ಮ ಪ್ರತಿ ಮಾತಿಗೂ ನನ್ನ ಬಳಿ ಉತ್ತರವಿದೆ, ಇಷ್ಟು ದಿನ ಮಾಧ್ಯಮಗಳ ಎದುರು ಸುಳ್ಳು ಹೇಳುತ್ತಾ, ದೂರದಲ್ಲೆಲ್ಲೋ ನಿಂತು ಗಾಳಿಯಲ್ಲಿ ಗುಂಡು ಹೊಡೆದಂತಲ್ಲಾ, ಇದು ಸದನ, ಇಲ್ಲಿ ನಿಮ್ಮ ಹಿಟ್ ಅಂಡ್ ರನ್‌ಗೆ ಅವಕಾಶವಿಲ್ಲ ಎಂದಿದ್ದಾರೆ.