ಬೆಂಗಳೂರು:ಮಹರ್ಷಿ ವಾಲ್ಮೀಕಿ ನಿಗಮದ ಕೋಟ್ಯಂತರ ಹಣ ಲೂಟಿ ಮಾಡುವ ಉದ್ದೇಶದಿಂದಲೇ ವ್ಯವಸ್ಥಾಪಕ ನಿದೇರ್ಶಕ ಪದ್ಮನಾಭ್ ಜ್ಯೂನಿಯರ್ ಅಕೌಂಟೆಂಟ್ ಹುದ್ದೆ ಸೃಷ್ಠಿ ಮಾಡಿದ್ದ ವಿಷಯ ಬೆಳಕಿಗೆ ಬಂದಿದೆ.
ಶಿವಕುಮಾರ್ ಎಂಬ ಹೆಸರಲ್ಲಿ ಜ್ಯೂನಿಯರ್ ಅಕೌಂಟೆಂಟ್ ಹುದ್ದೆ ಸೃಷ್ಟಿಸಿ, ಹಣಕಾಸು ವ್ಯವಹಾರ ನೋಡಿಕೊಳ್ಳುವ ಅಧಿಕಾರ ನೀಡಿ, ಗುರುತಿನ ಚೀಟಿಯನ್ನೂ ನೀಡಲಾಗಿತ್ತು ಎಂಬುದು ಎಸ್‌ಐಟಿ ತನಿಖೆಯಿಂದ ಬಯಲಾಗಿದೆ.
ಬ್ಯಾಂಕ್‌ನಲ್ಲಿ ಹೊಸ ಖಾತೆ
ನಿಗಮದ ಹಣ ಇಟ್ಟಿದ್ದ ನಗರದ ಮಹಾತ್ಮ ಗಾಂಧಿ (ಎಂಜಿ) ರಸ್ತೆಯ ಯ್ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಫೆಬ್ರವರಿ 21ರಂದು 034123030001619 ನಂಬರ್‌ನ ಖಾತೆ ತೆರೆಯಲಾಗಿತ್ತು.
ಯ್ಯೂನಿಯನ್ ಬ್ಯಾಂಕ್‌ನಲ್ಲಿನ ಶಿವಕುಮಾರ್ ಖಾತೆಗೆ ನಿಗಮದಿಂದ 187 ಕೋಟಿ ರೂ. ವರ್ಗಾವಣೆಗೆ ಮನವಿ ಮಾಡಲಾಯಿತು.
ಇದರ ಮನವಿ ಮೇರೆಗೆ ನಿಗಮದಿಂದ 187 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದ್ದ ವಾಲ್ಮೀಕಿ ನಿಗಮ, ಮಾರ್ಚ್ 5 ರಿಂದ ಮೇ 6 ರವರೆಗೆ ಹಂತ ಹಂತವಾಗಿ ಹೈದರಾಬಾದ್‌ನ ಆರ್‌ಬಿಎಲ್ ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಲಾಯಿತು.
2 ತಿಂಗಳಲ್ಲಿ 94 ಕೋಟಿ ರೂ. ವರ್ಗಾ
ಎರಡು ತಿಂಗಳ ಅವಧಿಯಲ್ಲಿ 94 ಕೋಟಿ ರೂ. ವರ್ಗಾವಣೆ ಕೃತ್ಯದಲ್ಲಿ ಯ್ಯೂನಿಯನ್ ಬ್ಯಾಂಕ್‌ನ ಕೆಲವು ಅಧಿಕಾರಿಗಳು ಶಾಮೀಲಾಗಿರುವ ವಿಚಾರ ಎಸ್‌ಐಟಿ ತನಿಖೆಯಲ್ಲಿ ಪತ್ತೆಯಾಗಿದೆ.
ವ್ಯವಸ್ಥಾಪಕ ನಿದೇರ್ಶಕ ಪದ್ಮನಾಭ್ ಸಂಚಿಗೆ ಸಹಕಾರ ನೀಡಿದ್ದ ಯ್ಯೂನಿಯನ್ ಬ್ಯಾಂಕ್‌ನ ಆರು ಅಧಿಕಾರಿಗಳು ನಾಪತ್ತೆಯಾಗಿದ್ದು, ಈ ಆರೋಪಿಗಳಿಗಾಗಿ ಪತ್ತೆಗಾಗಿ ಎಸ್‌ಐಟಿ ತೀವ್ರ ಶೋಧ ನಡೆಸುತ್ತಿದೆ.