Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
Saturday, March 7, 2026
  • ನಮ್ಮ ಬಗ್ಗೆ
  • ಸಂಪರ್ಕಿಸಿ
  • Privacy Policy
  • Disclaimer
  • Login/Register
KMS
Banner
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ
KMS
KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

@2022 - All Right Reserved. Designed and Developed by PenciDesign

ಅಂಕಣರಾಜಕೀಯರಾಜ್ಯರಾಷ್ಟ್ರ

ಚನ್ನಪಟ್ಟಣದಲ್ಲಿ ಡಿಕೆಸು ವರ್ಸಸ್ ಅನಿತಕ್ಕ ?

by admin July 22, 2024
written by admin July 22, 2024 0 comments 4 minutes read
0FacebookTwitterPinterestEmail
176

ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇತ್ತೀಚೆಗೆ ಬಿಜೆಪಿಯ ಐರನ್‌ಮ್ಯಾನ್ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಬಗ್ಗೆ ಅವರು ಪ್ರಸ್ತಾಪಿಸಿದರಂತೆ.

ಅಂದ ಹಾಗೆ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ, ಹಾವೇರಿಯಿಂದ ಬಸವರಾಜ ಬೊಮ್ಮಾಯಿ ಮತ್ತು ಬಳ್ಳಾರಿಯಿಂದ ಕಾಂಗ್ರೆಸ್ಸಿನ ತುಕಾರಾಂ ಗೆದ್ದು ಸಂಸತ್ತಿಗೆ ಹೋಗಿರುವುದರಿಂದ ಅನುಕ್ರಮವಾಗಿ ಅವರು ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದಲ್ಲೇ ಉಪಚುನಾವಣೆಗಳು ನಡೆಯಲಿವೆ.

ಹೀಗೆ ಚುನಾವಣೆಗಳು ನಡೆಯಲಿರುವ ಕ್ಷೇತ್ರಗಳ ಪೈಕಿ ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿಯಬೇಕು ಎಂಬ ವಿಷಯದಲ್ಲಿ ಕುಮಾರಸ್ವಾಮಿ ಅವರ ಅಭ್ಯಂತರವೇನೂ ಇಲ್ಲ, ಯಾಕೆಂದರೆ ಹೇಳಿ ಕೇಳಿ ಅವು ಬಿಜೆಪಿಯ ಪವರ್ ಇರುವ ಕ್ಷೇತ್ರಗಳು, ಇದೇ ರೀತಿ ಚನ್ನಪಟ್ಟಣ ಜೆಡಿಎಸ್ ಪವರ್‌ಫುಲ್ ಆಗಿರುವ ಕ್ಷೇತ್ರ.

ಆದರೆ ಸಮಸ್ಯೆ ಎಂದರೆ, ಜೆಡಿಎಸ್ ಪವರ್‌ಫುಲ್ ಆಗಿದ್ದರೂ ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿಯಾಗಲು ಮಾಜಿ ಸಚಿವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಬಯಸುತ್ತಿದ್ದಾರೆ, ಬರೀ ಬಯಸುವುದಷ್ಟೇ ಅಲ್ಲ, ತಮ್ಮ ಬಯಕೆಯನ್ನು ನೇರವಾಗಿಯೇ ಕುಮಾರಸ್ವಾಮಿ ಬಳಿ ಹೇಳಿಕೊಂಡಿದ್ದಾರೆ.

ಹೀಗೆ ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಲು ಸಿ.ಪಿ.ಯೋಗೇಶ್ವರ್ ಬಯಸುತ್ತಿದ್ದರೂ ಮತ್ತೊಂದು ಕಡೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಇದು ಇಷ್ಟವಿಲ್ಲ, ಹೀಗಾಗಿ ಅವರು ಕುಮಾರಸ್ವಾಮಿ ಅವರ ಬಳಿ, ಹೇಳಿ ಕೇಳಿ ಚನ್ನಪಟ್ಟಣ ನಿಮ್ಮ ಕ್ಷೇತ್ರ, ಹೀಗಾಗಿ ನೀವು ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ಬದಲು ನಿಮ್ಮ ಪಕ್ಷದವರನ್ನೇ ಕಣಕ್ಕಿಳಿಸಿ ಎಂದಿದ್ದಾರೆ, ಅರ್ಥಾತ್, ಚನ್ನಪಟ್ಟಣ ಕ್ಷೇತ್ರವನ್ನು ಸಿ.ಪಿ.ಯೋಗೇಶ್ವರ್ ಅವರಿಗೆ ಜೆಡಿಎಸ್ ಬಿಟ್ಟುಕೊಡುವುದು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಬ್ಬರಿಗೂ ಇಷ್ಟವಿಲ್ಲ.

ಇಷ್ಟಾದರೂ ತಮಗೆ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬೇಕು ಎಂದು ಯೋಗೇಶ್ವರ್ ಬಯಸುತ್ತಿರುವ ರೀತಿ ಕುಮಾರಸ್ವಾಮಿ ಅವರಲ್ಲಿ ಧರ್ಮಸಂಕಟ ಮೂಡಿಸಿದೆ, ಯಾಕೆಂದರೆ ಯೋಗೇಶ್ವರ್ ನೇರವಾಗಿಯೇ ಕುಮಾರಸ್ವಾಮಿ ಅವರ ಬಳಿ ಮಾತನಾಡಿ, ಚನ್ನಪಟ್ಟಣದ ಟಿಕೆಟ್ ನನಗೆ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಹೀಗಾಗಿ ಇತ್ತೀಚೆಗೆ ಅಮಿತ್ ಷಾ ಅವರು ದಿಲ್ಲಿಯಲ್ಲಿ ಸಿಕ್ಕಾಗ ವಿಷಯವನ್ನು ಪ್ರಸ್ತಾಪಿಸಿದ ಕುಮಾರಸ್ವಾಮಿ ಅವರು, ಸಾರ್, ಉಪಚುನಾವಣೆಗಳ ವಿಷಯ ಹೀಗಿದೆ, ಒಮ್ಮೆ ನಿಮ್ಮ ಗಮನಕ್ಕೆ ತರೋಣ ಎಂದು ಹೇಳುತ್ತಿದ್ದೇನೆ ಎಂದರಂತೆ. ಹೀಗೆ ಕುಮಾರಸ್ವಾಮಿ ಅವರು ಹೇಳಿದ್ದನ್ನು ಕೇಳಿದ ಅಮಿತ್ ಷಾ, ನೋ, ನೋ, ಉಪಚುನಾವಣೆಗಳ ವಿಷಯದಲ್ಲಿ ಯಾವ ಮುಜುಗರವೂ ಬೇಡ, ಯಾಕೆಂದರೆ ವಿಷಯ ಕ್ಲಿಯರ್ ಆಗಿದೆ, ಶಿಗ್ಗಾಂವಿ ಮತ್ತು ಸಂಡೂರು ನಮ್ಮ ಕ್ಷೇತ್ರಗಳು, ಹೀಗಾಗಿ ಅಲ್ಲಿ ನಮ್ಮವರು ಅಭ್ಯರ್ಥಿಗಳಾಗಲಿ, ಚನ್ನಪಟ್ಟಣ ನೀವು ಪ್ರತಿನಿಧಿಸುತ್ತಿದ್ದ ಕ್ಷೇತ್ರ, ಹೀಗಾಗಿ ಅಲ್ಲಿಂದ ನಿಮ್ಮವರೇ ಅಭ್ಯರ್ಥಿಯಾಗಲಿ ಎಂದು ನೇರವಾಗಿಯೇ ಹೇಳಿದ್ದಾರೆ.

ಹೀಗೆ ಉಪಚುನಾವಣೆಗಳ ವಿಷಯ ಕ್ಲಿಯರ್ ಆದ ಮೇಲೆ ಅಮಿತ್ ಷಾ ಮತ್ತೊಂದು ವಿಷಯಕ್ಕೆ ತಿರುಗಿಕೊಂಡಿದ್ದಾರೆ, ದೇಖೋ ಕುಮಾರಸೋಮೀಜಿ, ಹಳೆ ಮೈಸೂರು ಭಾಗದಲ್ಲಿ ನಿಮ್ಮ ಪಕ್ಷವನ್ನು ಮತ್ತಷ್ಟು ಬಲಿಷ್ಟವಾಗಿ ಕಟ್ಟಿ, ಹೇಗಿದ್ದರೂ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಕೂಟಕ್ಕಿರುವ ಶಕ್ತಿ ಸಾಬೀತಾಗಿದೆ, ರಾಜ್ಯದ ನೂರಾ ನಲವತ್ತೆರಡು ಕ್ಷೇತ್ರಗಳಲ್ಲಿ ನಮಗೆ ಕಾಂಗ್ರೆಸ್ಸಿಗಿಂತ ಹೆಚ್ಚು ಮತಗಳು ಬಂದಿವೆ.

ಇದನ್ನು ಗಮನದಲ್ಲಿಟ್ಟುಕೊಂಡು ನುಗ್ಗಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಿರಾಯಾಸವಾಗಿ ನಾವು ನೂರೈವತ್ತು ಸೀಟು ಗೆಲ್ಲುತ್ತೇವೆ, ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮಿಂದ ಯಾವ ನೆರವು ಬೇಕೋ ಕೇಳಿ, ಅದನ್ನು ಕೊಡಲು ನಾವು ರೆಡಿ, ಒಟ್ಟಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮ ಪಕ್ಷದಿಂದ ಅರವತ್ತು ಮಂದಿಯನ್ನು ಗೆಲ್ಲಿಸಿಕೊಂಡು ಬನ್ನಿ, ನಿಮ್ಮಿಂದ ಇದು ಸಾಧ್ಯವಾದರೆ ಅನುಮಾನವೇ ಬೇಡ, ನೀವು ಸಿಎಂ ಆಗುವುದು ಗ್ಯಾರಂಟಿ ಎಂದಿದ್ದಾರೆ.

ಯಾವಾಗ ಅಮಿತ್ ಷಾ ಈ ಮಾತು ಹೇಳಿದರೋ, ಇದಾದ ನಂತರ ಕರ್ನಾಟಕಕ್ಕೆ ಬಂದ ಕುಮಾರಸ್ವಾಮಿ ಪಕ್ಷದ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ ಮತ್ತು ಈ ಸಭೆಯಲ್ಲಿ ಮಾತನಾಡುವಾಗ ಕರ್ನಾಟಕದ ನೂರು-ನೂರಾ ಹತ್ತು ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಸಜ್ಜಾಗುವಂತೆ ನಾಯಕರಿಗೆ ರಣವೀಳ್ಯ ನೀಡಿದ್ದಾರೆ.

ಅಗರ್ವಾಲ್ ರವಾನಿಸಿದ ಆ ರಿಪೋರ್ಟು

ಈ ಮಧ್ಯೆ ರಾಜ್ಯ ಬಿಜೆಪಿಯ ಉಸ್ತುವಾರಿ ಹೊಣೆ ಹೊತ್ತಿರುವ ರಾಧಾಮೋಹನ ದಾಸ್ ಅಗರ್ವಾಲ್ ಪಕ್ಷದ ವರಿಷ್ಟರಿಗೆ ಮಹತ್ವದ ವರದಿಯೊಂದನ್ನು ರವಾನಿಸಿದ್ದಾರೆ.

ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳಿಗೆ ಒಳಮೀಸಲಾತಿ ಕೊಡಬೇಕು ಎಂಬ ಅಸ್ತ್ರವನ್ನಿಟ್ಟುಕೊಂಡು ಹೋರಾಡಿದರೆ ಬಿಜೆಪಿ ಮೈತ್ರಿಕೂಟಕ್ಕೆ ಲಾಭವಾಗಲಿದೆ ಎಂಬುದು ಈ ವರದಿ.

ಅಂದ ಹಾಗೆ ಇದಕ್ಕೆ ಪುಷ್ಟಿ ನೀಡಿರುವುದು ಲೋಕನೀತಿ-ಸಿ.ಎಸ್.ಡಿ.ಎಸ್ ಸರ್ವೇ ವರದಿ. ಅದರ ಪ್ರಕಾರ, ಮೊನ್ನಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಹತ್ತೊಂಬತ್ತು ಸ್ಥಾನಗಳನ್ನು ಗೆಲ್ಲಲು ಒಕ್ಕಲಿಗ, ಲಿಂಗಾಯತ ಸಮುದಾಯಗಳು ಮಾತ್ರವಲ್ಲ, ಹಿಂದುಳಿದ ಸಮುದಾಯ ನೀಡಿದ ಬೆಂಬಲವೂ ಪ್ರಮುಖ ಕಾರಣ.

ಸರ್ವೆಯ ಪ್ರಕಾರ, ಹಿಂದುಳಿದ ವರ್ಗಗಳ ಅರವತ್ತು ಪರ್ಸೆಂಟಿಗೂ ಹೆಚ್ಚು ಮತಗಳು ಮೈತ್ರಿಕೂಟಕ್ಕೆ ಬಂದಿವೆ, ಇತ್ತೀಚಿನವರೆಗೆ ಕಾಂಗ್ರೆಸ್ ಪಕ್ಷದ ಪ್ರಮುಖ ಮತ ಬ್ಯಾಂಕ್ ಆಗಿದ್ದ ಹಿಂದುಳಿದ ವರ್ಗಗಳು ಕೈ ಪಾಳಯದಿಂದ ವಿಮುಖವಾಗಲು ಒಳ ಮೀಸಲಾತಿಯ ಬೇಡಿಕೆಯೇ ಮುಖ್ಯ ಕಾರಣ. ಹಿಂದುಳಿದ ವರ್ಗಗಳ ಮೀಸಲಾತಿಯ ಲಾಭ ಪ್ರಬಲ ಜಾತಿಗಳಿಗೆ ಆಗುತ್ತಿರುವುದರಿಂದ ಪಟ್ಟಿಯಲ್ಲಿರುವ ಇನ್ನೂರಕ್ಕೂ ಹೆಚ್ಚು ಜಾತಿಗಳು ತಲ್ಲಣಗೊಂಡಿವೆ, ಪರಿಣಾಮ, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮೈತ್ರಿಕೂಟದ ಕಡೆ ವಾಲಿಕೊಂಡಿವೆ.

ಹೀಗೆ ಮೈತ್ರಿಕೂಟದ ಕಡೆ ವಾಲಿಕೊಂಡಿರುವ ಈ ಸಮುದಾಯಗಳ ಪರವಾಗಿ ಧ್ವನಿ ಎತ್ತಿದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಕೂಟ ದೊಡ್ಡ ಮಟ್ಟದ ಶಕ್ತಿ ಪಡೆಯಲಿದೆ.

ಅಂದ ಹಾಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಿನಿಮಮ್ ಎಪ್ಪತ್ತೈದು ಸಾವಿರದಷ್ಟಿರುವ ಹಿಂದುಳಿದವರು ಸಣ್ಣ-ಸಣ್ಣ ಪಾಕೇಟುಗಳಲ್ಲಿ ಹಂಚಿ ಹೋಗಿದ್ದಾರೇನೋ ನಿಜ, ಆದರೆ ಒಟ್ಟು ಸೇರಿಸಿ ನೋಡಿದರೆ ಪವರ್‌ಫುಲ್ಲಾಗಿದ್ದಾರೆ.

ಹೀಗಾಗಿ ಇವರ ಒಳಮೀಸಲಾತಿಯ ಬೇಡಿಕೆಗೆ ಧ್ವನಿ ಕೊಟ್ಟರೆ ಮೈತ್ರಿಕೂಟದ ಬತ್ತಳಿಕೆಗೆ ಡೆಡ್ಲಿ ಅಸ್ತ್ರ ಸೇರಲಿದೆ ಎಂಬುದು ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ವರದಿ.

ಚನ್ನಪಟ್ಟಣ:ಡಿಕೆಸು ವರ್ಸಸ್ ಅನಿತಕ್ಕ?

ಇನ್ನು ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಕಣಕ್ಕೆ ಯಾರು ಇಳಿಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಲೇ ಇದೆ.

ಡಿಸಿಎಂ ಡಿಕೆಶಿ ಕ್ಯಾಂಪಿಗೆ ತಲುಪಿರುವ ಮಾಹಿತಿಯ ಪ್ರಕಾರ, ಮೈತ್ರಿಕೂಟದ ಕ್ಯಾಂಡಿಡೇಟ್ ಆಗಲು ಪ್ರಯತ್ನಿಸುತ್ತಿದ್ದ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಜೆಪಿ ವರಿಷ್ಟರು ನೋ ಎಂದಿದ್ದಾರಂತೆ. ನಿಮ್ಮ ವಿಧಾನಪರಿಷತ್ ಸದಸ್ಯತ್ವದ ಅವಧಿ ಇನ್ನೂ ಎರಡು ವರ್ಷ ಬಾಕಿ ಇದೆ, ಹೀಗಿರುವಾಗ ನೀವು ರಾಜೀನಾಮೆ ನೀಡಿ ಮೈತ್ರಿಕೂಟದ ಕ್ಯಾಂಡಿಡೇಟ್ ಆದರೆ ಆ ಸೀಟು ಕಾಂಗ್ರೆಸ್ ವಶಕ್ಕೆ ಹೋಗುತ್ತದೆ ಎಂಬುದು ವರಿಷ್ಟರ ಮಾತು.

ಅಲ್ಲಿಗೆ ಮೈತ್ರಿಕೂಟದ ವತಿಯಿಂದ ಜೆಡಿಎಸ್ ಕ್ಯಾಂಡಿಡೇಟ್ ಪಕ್ಕಾ, ಇದೇ ರೀತಿ ಇವತ್ತಿನ ಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಿ ರಿಸ್ಕು ತೆಗೆದುಕೊಳ್ಳಲು ಕುಮಾರಸ್ವಾಮಿ ತಯಾರಿಲ್ಲ, ಹೀಗಾಗಿ ಅವರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಫೀಲ್ಡಿಗೆ ಇಳಿಸುತ್ತಾರೆ, ಹೀಗೆ ಫೀಲ್ಡಿಗಳಿಯುವವರು ನಿಖಿಲ್ ಕುಮಾರಸ್ವಾಮಿ ಅದರೂ ಅಚ್ಚರಿಯಿಲ್ಲ, ಹಾಗಾದಾಗ ನಾವು ಪ್ರಬಲ ಕ್ಯಾಂಡಿಡೇಟನ್ನು ನಿಲ್ಲಿಸಲೇಬೇಕು ಎಂಬುದು ಡಿಕೆಶಿ ಕ್ಯಾಂಪಿನ ಮಾತು.

ಆದರೆ ಜೆಡಿಎಸ್ ಕ್ಯಾಂಪಿನ ಪ್ರಕಾರ, ಕೈ ಪಾಳಯದ ಅಭ್ಯರ್ಥಿಯಾಗಿ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಸ್ಪರ್ಧಿಸುವುದು ಗ್ಯಾರಂಟಿ, ಹೀಗಾಗಿ ನಾವು ಬಲಿಷ್ಟರನ್ನು ಫೀಲ್ಡಿಗಳಿಸಬೇಕು, ಆದರೆ ಅವರು ನಿಖಿಲ್ ಕುಮಾರಸ್ವಾಮಿ ಆಗಿರುವುದಿಲ್ಲ, ಜ್ಯೋತಿಷಿಗಳ ಪ್ರಕಾರ ನಿಖಿಲ್ ಅವರಿಗೆ 2027 ರವರೆಗೆ ಗುರು ಬಲವಿಲ್ಲ, ನಿಜ ಸಂಗತಿ ಎಂದರೆ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೇ ಜ್ಯೋತಿಷಿಯೊಬ್ಬರು ಇದನ್ನು ಸ್ಪಷ್ಟವಾಗಿ ಹೇಳಿದ್ದರು, ಈ ಸಲ ನಿಖಿಲ್ ಸ್ಪರ್ಧಿಸಿದರೆ ಸೋಲುವುದು ಶತಃಸ್ಸಿದ್ಧ ಎಂದಿದ್ದರು, ಅದು ಹಾಗೇ ಆಯಿತು.

ಹೀಗಾಗಿ ಅವರು ಈ ಸಲ ಚನ್ನಪಟ್ಟಣದ ಕಣಕ್ಕಿಳಿಯುವುದಿಲ್ಲ, ಬದಲಿಗೆ 2028ರಲ್ಲಿ ರಾಮನಗರದ ಕಣಕ್ಕಿಳಿಯುತ್ತಾರೆ.

ಪರಿಣಾಮ, ಅಂತಿಮವಾಗಿ ಕಾಂಗ್ರೆಸ್ಸಿನ ಡಿ.ಕೆ.ಸುರೇಶ್ ಅವರ ವಿರುದ್ಧ ಶ್ರೀಮತಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದು ಅನಿವಾರ್ಯವಾಗಬಹುದು.

ಅಂದ ಹಾಗೆ ಉಪಚುನಾವಣೆಯ ಮಾತು ಶುರುವಾದಾಗ ಚನ್ನಪಟ್ಟಣದಿಂದ ಡಾ.ಮಂಜುನಾಥ್ ಅವರ ಪತ್ನಿ ಶ್ರೀಮತಿ ಅನಸೂಯ ಅವರನ್ನು ಕಣಕ್ಕಿಳಿಸುವ ಯೋಚನೆ ಇತ್ತಾದರೂ ಈಗ ಆ ಯೋಚನೆಯನ್ನು ಕೈ ಬಿಡಲಾಗಿದೆ, ಅರ್ಥಾತ್, ಅನಸೂಯ ಮೇಡಂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದ ಕಣಕ್ಕಿಳಿಯಲಿದ್ದಾರೆ.

ತ್ರಿಮೂರ್ತಿಗಳ ಪಡೆ ರೆಡಿಯಾಗಿದೆ

ಈ ಬಾರಿ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಬಿಜೆಪಿ ನಾಯಕರಿಗೆ ಒಂದು ವಿಷಯ ಪಕ್ಕಾ ಆಗಿದೆ.

ಅದೆಂದರೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವಿರಲಿ, ಮುಡಾ ಹಗರಣವಿರಲಿ, ಮತ್ತೊಂದಿರಲಿ, ಒಟ್ಟಿನಲ್ಲಿ ದಿಲ್ಲಿಯಿಂದ ಬರುವ ಡೈರೆಕ್ಷನ್ನಿಗೆ ಅನುಗುಣವಾಗಿಯೇ ಹೋರಾಡಬೇಕು ಎಂಬುದು ಅವರಿಗೆ ಖಚಿತವಾಗಿದೆ. ಅಂದ ಹಾಗೆ ದಿಲ್ಲಿಯಿಂದ ಬರುವ ಡೈರೆಕ್ಷನ್ನುಗಳ ಹಿಂದೆ ತ್ರಿಮೂರ್ತಿಗಳಿದ್ದಾರಂತೆ, ಅವರೆಂದರೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್.

ಈ ಬಾರಿಯ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಬೇಕು, ಅದು ದಲಿತ ವಿರೋಧಿ ಎಂದು ರಾಷ್ಟ್ರಮಟ್ಟದಲ್ಲಿ ಪ್ರಚಾರವಾಗುವಂತೆ ನೋಡಿಕೊಳ್ಳಬೇಕು ಅಂತ ಡೈರೆಕ್ಷನ್ನು ಕೊಡುತ್ತಿರುವ ಈ ತ್ರಿಮೂರ್ತಿಗಳಿಗೆ ಮೊನ್ನೆ ಒಂದು ಅನುಮಾನ ಶುರುವಾಯಿತಂತೆ.

ಸಿದ್ದರಾಮಯ್ಯ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಮುಡಾ ಹಗರಣದ ವಿಷಯದಲ್ಲಿ ನಮ್ಮವರು ಮೃದುವಾಗಬಹುದು ಮತ್ತು ಈ ಸಂದರ್ಭವನ್ನು ಬಳಸಿಕೊಂಡು ಅವಧಿಗೂ ಮುನ್ನ ಅಧಿವೇಶನ ಬರಕಾಸ್ತಾಗುವಂತೆ ಸರ್ಕಾರ ಮಾಡಬಹುದು ಎಂಬುದು ಈ ಅನುಮಾನ.

ಹೀಗಾಗಿಯೇ ಶನಿವಾರ ರಾತ್ರಿ ರಾಜ್ಯದ ನಾಯಕರಿಗೆ ಸಂದೇಶ ರವಾನಿಸಿದ ತ್ರಿಮೂರ್ತಿಗಳ ಪಡೆ, ಅಧಿವೇಶನದಲ್ಲಿ ಅಹೋರಾತ್ರಿ ಧರಣಿ ನಡೆಸಿ, ಒಂದು ವೇಳೆ ಸದನ ಕಲಾಪವನ್ನೇ ಅನಿರ್ದಿಷ್ಟಾವಧಿಯವರೆಗೆ ಮುಂದೂಡುವ ಕೆಲಸವಾದರೆ ಬೀದಿ ಹೋರಾಟಗಳಿಗೆ ಸಜ್ಜಾಗಿ ಎಂದಿದೆಯಂತೆ.

ಆರ್.ಟಿ.ವಿಠ್ಠಲಮೂರ್ತಿ

Share this:

  • Share on WhatsApp (Opens in new window) WhatsApp
  • Post
  • Tweet
  • Print (Opens in new window) Print
  • Email a link to a friend (Opens in new window) Email
agarval reportbl santoshchannapattana byelectionhd kumara swamyPralhad Joshi
0 FacebookTwitterPinterestEmail
admin

previous post
ದೇಶದ ಸೇನೆ ಬಗ್ಗೆ ಉಪಮುಖ್ಯಮಂತ್ರಿ ಹಗುರ ಮಾತು !
next post
ಜೈಲು ಪಾಲಾದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ

You may also like

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

March 6, 2026

ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

March 4, 2026

ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

March 2, 2026

ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

March 2, 2026

ಜಾತಿ ವ್ಯವಸ್ಥೆಗೆ ಸಿದ್ದರಾಮಯ್ಯ ತೀವ್ರ ಕಳವಳ

February 28, 2026

ಶಿವಕುಮಾರ್‌ಗೆ ಪಟ್ಟ ಕಟ್ಟಲು ಹೈಕಮಾಂಡ್ ನಿರ್ಧಾರ

February 27, 2026

ಅಮೆರಿಕದ ಫಿಲಡೆಲ್ಫಿಯಾದಲ್ಲಿ ’ಅಕ್ಕ’ ಬೆಳ್ಳಿ ಹಬ್ಬ

February 27, 2026

ಭ್ರಷ್ಟಾಚಾರ ಪಠ್ಯ ನಿಷೇಧ: ಸುಪ್ರೀಂಕೋರ್ಟ್

February 26, 2026

ಮುಖ್ಯಮಂತ್ರಿ ರೇಸ್‌ಗೆ ಧುಮುಕಿದ ಡಾ.ಪರಮೇಶ್ವರ್

February 25, 2026

ಡಾ.ಮಹದೇವಪ್ಪ ಅವರಿಗೆ ನಾಯಕತ್ವ ಬದಲು ಸುಳಿವು !

February 24, 2026

Social Networks

Facebook Twitter Instagram Linkedin Youtube Email Rss

KMS Analysis

  • ಯಡಿಯೂರೋತ್ಸವಕ್ಕೆ 114 ರ ಟಾರ್ಗೆಟ್

    March 2, 2026
  • ಬಿಹಾರ ಚುನಾವಣಾ ಫಲಿತಾಂಶ ಬಳಿಕ ಸಿದ್ದರಾಮಯ್ಯ ದೆಹಲಿಗೆ

    October 25, 2025
  • ಜಾತಿಗಣತಿ ವೇಳೆ ಒಕ್ಕಲಿಗ ಎಂದೇ ಬರೆಸಲು ಶ್ರೀಗಳ ಕರೆ

    October 6, 2025
  • ಡಿ.ಕೆ. ಸುರೇಶ್ ಗೆ ಜಾರಿ ನಿರ್ದೇಶನಾಲಯದ ನೋಟಿಸ್

    June 17, 2025
  • ಕರ್ನಾಟಕದಲ್ಲಿ ಹೊಸದಾಗಿ ಜಾತಿಗಣತಿ

    June 12, 2025

Categories

  • Special Story (404)
  • ಅಂಕಣ (108)
  • ಉದ್ಯೋಗ (315)
  • ದಿನ ಭವಿಷ್ಯ (110)
  • ರಾಜಕೀಯ (1,902)
  • ರಾಜ್ಯ (2,213)
  • ರಾಷ್ಟ್ರ (2,183)
  • ವಿಶ್ಲೇಷಣೆ (189)
  • ಶಿಕ್ಷಣ (381)
  • ಸಂದರ್ಶನ (11)

About Us

ನೈಜ ಹಾಗೂ ವಿಶ್ವಾಸಾರ್ಹತೆಯ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರವಾದ ಸುದ್ದಿ, ಅಭಿಪ್ರಾಯಗಳ ಪ್ರಕಟಣೆಯ ವೆಬ್ ತಾಣ. ಕರ್ನಾಟಕ ರಾಜ್ಯದ ಪ್ರಚಲಿತ ವಿದ್ಯಮಾನಗಳು, ರಾಜಕೀಯ, ನಾಡು, ನುಡಿ, ಜಲ ವಿಚಾರಗಳಲ್ಲದೆ, ದೈನಂದಿನ ಆಗು-ಹೋಗುಗಳು, ವಿವಿಧ ಜಿಲ್ಲೆಗಳ ಪ್ರಮುಖ ವಿಚಾರಗಳ ಭಿತ್ತರಕ್ಕೆ ಹೆಚ್ಚು ಒತ್ತು ನೀಡುವುದು. ನಮ್ಮ ಕುರಿತು ಹೆಚ್ಚಿನ ವಿವರ ಪಡೆಯಲು ಇಲ್ಲಿ ಇಲ್ಲಿಕ್ಲಿಕ್‌ ಮಾಡಿ

Facebook Twitter Linkedin Youtube Email Vimeo Rss

Politics

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026

KMS Special

  • 1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ ಬಜೆಟ್

    March 6, 2026
  • ಬರ ಎದುರಾಗಲಿದೆ: ಕರ್ನಾಟಕಕ್ಕೆ ಕೇಂದ್ರದ ಎಚ್ಚರಿಕೆ

    March 4, 2026
  • ಯುದ್ಧ ಪ್ರದೇಶದಲ್ಲಿ ಸಿಲುಕಿದ ಸಚಿವ, ಶಾಸಕರು

    March 2, 2026
  • Facebook
  • Twitter
  • Linkedin
  • Youtube
  • Email
  • Telegram

@2020 - All Right Reserved. Designed and Developed by Karnatakabest.com

KMS
  • Home
  • Special Story
  • ರಾಜ್ಯ
  • ರಾಷ್ಟ್ರ
  • ರಾಜಕೀಯ
  • ವಿಶ್ಲೇಷಣೆ
  • ಅಂಕಣ
  • ಶಿಕ್ಷಣ
  • ಉದ್ಯೋಗ
  • ಸಂದರ್ಶನ

Read alsox

1.32 ಲಕ್ಷ ಕೋಟಿ ರೂ. ಸಾಲದ ಸಿದ್ದರಾಮಯ್ಯ...

March 6, 2026
Sign In

Keep me signed in until I sign out

Forgot your password?

Password Recovery

A new password will be emailed to you.

Have received a new password? Login here

ಕೆಎಂಎಸ್‌ ಕನ್ನಡ ವಾಟ್ಸಪ್‌ ಗ್ರೂಪ್‌ಗೆ ಸೇರಿ