87
ಬೆಂಗಳೂರು:ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಿಂದ ಸೂರು ಕಳೆದುಕೊಂಡಿರುವವರ ಪೈಕಿ 100 ಕುಟುಂಬಗಳಿಗೆ ಕರ್ನಾಟಕ ಸರ್ಕಾರ ಮಾನವೀಯ ನೆಲೆಯಲ್ಲಿ ಮನೆ ನಿರ್ಮಿಸಿಕೊಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೇರಳದ ಜನತೆಯ ಸಂಕಷ್ಟ ಕಾಲದಲ್ಲಿ ಕರ್ನಾಟಕ ಸರ್ಕಾರ ಅವರ ಜೊತೆಗಿರಲಿದೆ, ಮನೆ ಕಳೆದುಕೊಂಡ 100 ಮಂದಿಗೆ ಮತ್ತೆ ಸೂರು ನಿರ್ಮಿಸಿಕೊಡಲಿದೆ ಎಂದಿದ್ದಾರೆ.