ಬೆಂಗಳೂರು:ಸಾಯಿ ವೆಂಕಟೇಶ್ವರ ಮಿನರಲ್ಸ್‌ನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಎಸ್‌ಐಟಿ ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಜುಲೈ ತಿಂಗಳಲ್ಲೇ ರಾಜ್ಯಪಾಲರ ಅನುಮತಿ ಕೋರಿತ್ತು.
ರಾಜ್ಯಪಾಲರಿಗೆ ಮನವಿ
ಇದೀಗ ಎಸ್‌ಐಟಿ ಮತ್ತೆ ಅದೇ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಿದೆ ಎಂದರು.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿ.ಜೆ.ಅಬ್ರಹಾಂ ತಮ್ಮ ವಿರುದ್ಧ ನೀಡಿದ ದೂರಿಗೆ ಒಂದೇ ತಾಸಿನಲ್ಲಿ ನನಗೆ ನೋಟಿಸ್ ನೀಡುತ್ತಾರೆ, ಆದರೆ, ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಸೇರಿದಂತೆ ಕೆಲವರ ವಿರುದ್ಧ ಬಂದ ದೂರುಗಳಿಗೆ ಇದುವರೆಗೂ ನೋಟಿಸ್ ಜಾರಿ ಮಾಡಿಲ್ಲ.
ರಾಜ್ಯಪಾಲರು ಗುರಿಯಾಗಿಸಿಕೊಂಡು ತಮಗೆ ನೋಟಿಸ್ ನೀಡಿದ್ದಾರೆ, ಇದು ತಾರತಮ್ಯವಲ್ಲವೆ, ಸಂವಿಧಾನಬಾಹಿರವಾಗಿ ನಡೆದುಕೊಳ್ಳುತ್ತಿರುವ ಇವರ ನಡೆಯ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಬಾರದೆ ಎಂದರು.
ಮಂತ್ರಿಯಾಗಿ ಮುಂದುವರೆಯಬಹುದೆ
ಸಾಯಿ ಮಿನರಲ್ಸ್ ಪ್ರಕರಣದಲ್ಲಿ ಕುಮಾರಸ್ವಾಮಿ ವಿರುದ್ಧ ಚಾರ್ಜ್‌ಶೀಟ್ ಆಗಿದೆ, ಅವರು ಕೇಂದ್ರದಲ್ಲಿ ಮಂತ್ರಿಯಾಗಿ ಮುಂದುವರೆಯಬಹುದೆ ಎಂದು ಪ್ರಶ್ನಿಸಿದರು.
ವಿನಯ್ ಗೋಯಲ್ ಎಂಬುವರು ಗಣಿಗಾರಿಕೆಗೆ ಅರ್ಜಿ ಹಾಕಿರಲಿಲ್ಲ, ಅವರಿಗೆ ಅನುಕೂಲ ಮಾಡಲು ಅನುಮತಿ ನೀಡಿದರು.
ಲೋಕಾಯುಕ್ತ ತನಿಖಾ ಸಂಸ್ಥೆ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ, ಇದನ್ನು ತಿರುಚಿ ಅವರು ಮಾತನಾಡುತ್ತಿದ್ದಾರೆ ಎಂದರು.