30
ಬುಲೆಟ್ ಪ್ರೂಫ್ ಕಾರಿನಲ್ಲಿ ಪ್ರಯಾಣ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದ ಬೆನ್ನಲ್ಲೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.
ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿರುವುದನ್ನು ವಿರೋಧಿಸಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಭದ್ರತೆ ನೀಡಲಾಗಿದೆ.
ರಾಜಭವನಕ್ಕೂ ಹೆಚ್ಚಿನ ಭದ್ರತೆ ನೀಡಿರುವುದರ ಜೊತೆಗೆ ಅವರು ಪ್ರಯಾಣಿಸುವ ಕಾರು ಇಂದಿನಿಂದ ಗುಂಡು ನಿರೋಧಕ ಕಾರು ಆಗಿದೆ.
ಅವರು ಪ್ರಯಾಣಿಸುವ ಹಾಗೂ ರಾಜ್ಯದ ಯಾವುದೇ ಕಾರ್ಯಕ್ರಮದಲ್ಲಿ ಭಾಗಹಿಸಿದರೆ ಮುಂಜಾಗ್ರತೆ ಹಾಗೂ ಹೆಚ್ಚು ಭದ್ರತೆ ಒದಗಿಸಲು ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ.
ಗೃಹ ಇಲಾಖೆಯ ಸಲಹೆಯಂತೆ ರಾಜ್ಯಪಾಲರು ಪೂರ್ವ ನಿಗದಿತ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ.